ರೈಲಿನಲ್ಲಿ ಮೊಬೈಲ್​ ಬಳಕೆಗೆ ಹೊಸ ನಿಯಮ ಜಾರಿ

ರೈಲು ಪ್ರಯಾಣದ ಸಂದರ್ಭದಲ್ಲಿ ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ಶಾಂತಿಯುತ ವಾತಾವರಣವನ್ನು ಕಾಪಾಡಲು ಭಾರತೀಯ ರೈಲ್ವೆಯು ಅತ್ಯಂತ ಕಠಿಣವಾದ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

By ರಶ್ಮಿ ಎಸ್. | Rashmi S

1 min read

WhatsAppPost
Indian railways new rules mobile usage fine
Indian railways new rules mobile usage fine

ರೈಲು ಪ್ರಯಾಣದ ಸಂದರ್ಭದಲ್ಲಿ ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ಶಾಂತಿಯುತ ವಾತಾವರಣವನ್ನು ಕಾಪಾಡಲು ಭಾರತೀಯ ರೈಲ್ವೆಯು ಅತ್ಯಂತ ಕಠಿಣವಾದ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

ರೈಲುಗಳಲ್ಲಿ ಅಥವಾ ರೈಲ್ವೆ ನಿಲ್ದಾಣದ ಆವರಣದಲ್ಲಿ ಮೊಬೈಲ್ ಫೋನ್‌ಗಳ ಸ್ಪೀಕರ್ ಆನ್ ಮಾಡಿ ಜೋರಾಗಿ ಹಾಡುಗಳನ್ನು ಕೇಳುವುದು, ವೀಡಿಯೊ ಅಥವಾ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ವೀಕ್ಷಿಸುವುದು ಹಾಗೂ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುವುದನ್ನು ಸಾರ್ವಜನಿಕ ಉಪಟಳ ಎಂದು ಪರಿಗಣಿಸಲಾಗುತ್ತದೆ.

ಹೊಸ ನಿಯಮಗಳ ಅನ್ವಯ, ಯಾರಾದರೂ ಇಯರ್‌ಫೋನ್ ಬಳಸದೆ ಮೊಬೈಲ್ ಆಡಿಯೋವನ್ನು ಜೋರಾಗಿ ಪ್ಲೇ ಮಾಡಿದರೆ ಅಥವಾ ಇತರರ ನಿದ್ದೆ ಹಾಗೂ ನೆಮ್ಮದಿಗೆ ಭಂಗ ತಂದರೆ ಅಂತಹವರನ್ನು ತಕ್ಷಣವೇ ರೈಲಿನಿಂದ ಕೆಳಗಿಳಿಸುವ ಅಧಿಕಾರವನ್ನು ಇಲಾಖೆ ಹೊಂದಿದೆ.

ಇದರ ಜೊತೆಗೆ ಆರಂಭಿಕವಾಗಿ ₹1,000 ವರೆಗೆ ನಗದು ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಅಧಿಕಾರಿಗಳು ಎಚ್ಚರಿಕೆ ನೀಡಿದ ಮೇಲೆಯೂ ನಿಯಮ ಉಲ್ಲಂಘನೆಯನ್ನು ಮುಂದುವರಿಸಿದರೆ, ರೈಲ್ವೆ ಕಾಯ್ದೆಯ ಅಡಿಯಲ್ಲಿ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ₹5,000 ವರೆಗೆ ದಂಡ ಇಲ್ಲವೇ ಎರಡನ್ನೂ ಒಟ್ಟಿಗೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಶೇಷವಾಗಿ ರಾತ್ರಿಯ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರು ನೆಮ್ಮದಿಯಿಂದ ವಿಶ್ರಮಿಸಲು ಅನುವು ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರೈಲ್ವೆ ರಕ್ಷಣಾ ಪಡೆ (RPF) ಮತ್ತು ಟಿಕೆಟ್ ತಪಾಸಣಾ ಸಿಬ್ಬಂದಿಗೆ (TTE) ಸಂಪೂರ್ಣ ಹೊಣೆಗಾರಿಕೆ ನೀಡಲಾಗಿದೆ. ಆದ್ದರಿಂದ ಪ್ರಯಾಣದ ವೇಳೆ ಮೊಬೈಲ್ ಬಳಸುವಾಗ ಕಡ್ಡಾಯವಾಗಿ ಇಯರ್‌ಫೋನ್ ಧರಿಸಲು ಹಾಗೂ ಸಾರ್ವಜನಿಕ ಶಿಷ್ಟಾಚಾರವನ್ನು ಪಾಲಿಸಲು ರೈಲ್ವೆ ಇಲಾಖೆ ಕೋರಿದೆ.

Topics

ಸಂಬಂಧಿತ ಸುದ್ದಿಗಳು