ಧೂಮಪಾನಿಗಳಿಗೆ ಬಿಗ್ ಶಾಕ್ : ಐಟಿಸಿ ಸಿಗರೇಟ್ ಬೆಲೆ ಭಾರಿ ಏರಿಕೆ, ಗೋಲ್ಡ್ ಫ್ಲೇಕ್, ಕ್ಲಾಸಿಕ್ ಹೊಸ ದರ ಪ್ರಕಟ

ದೇಶದ ಪ್ರಮುಖ ಗ್ರಾಹಕ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಐಟಿಸಿ, ತಂಬಾಕು ವ್ಯಸನಿಗಳಿಗೆ ದೊಡ್ಡ ಆಘಾತ ನೀಡಿದೆ.

By ರಶ್ಮಿ ಎಸ್. | Rashmi S

1 min read

WhatsAppPost
itc-hikes-cigarette-prices-gold-flake-classic-connect-price-revision
itc-hikes-cigarette-prices-gold-flake-classic-connect-price-revision

ದೇಶದ ಪ್ರಮುಖ ಗ್ರಾಹಕ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಐಟಿಸಿ, ತಂಬಾಕು ವ್ಯಸನಿಗಳಿಗೆ ದೊಡ್ಡ ಆಘಾತ ನೀಡಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇಕಡಾ 40 ಕ್ಕೆ ಹೆಚ್ಚಿಸಿ, ಅದರೊಂದಿಗೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಿದ ಬೆನ್ನಲ್ಲೇ ಕಂಪನಿಯು ತನ್ನ ಜನಪ್ರಿಯ ಸಿಗರೇಟ್ ಬ್ರ್ಯಾಂಡ್‌ಗಳ ಬೆಲೆಯನ್ನು ಗಣನೀಯವಾಗಿ ಪರಿಷ್ಕರಿಸಿದೆ. ನೂತನ ದರಗಳನ್ನು ಹೊಂದಿರುವ ಹೊಸ ಪ್ಯಾಕೆಟ್‌ಗಳು ಈಗಾಗಲೇ ಮಾರುಕಟ್ಟೆಗೆ ಸರಬರಾಜಾಗುತ್ತಿವೆ.

ಗ್ರಾಹಕರಲ್ಲಿ ಅತಿ ಹೆಚ್ಚು ಮಾರಾಟವಾಗುವ 'ಕ್ಲಾಸಿಕ್ ಕನೆಕ್ಟ್' ಮತ್ತು 'ಗೋಲ್ಡ್ ಫ್ಲೇಕ್ ಸೂಪರ್ ಸ್ಟಾರ್' ಸಿಗರೇಟ್‌ಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿದೆ. ಈ ಹಿಂದೆ ₹390 ಇದ್ದ 20 ಸಿಗರೇಟ್‌ಗಳ 'ಕ್ಲಾಸಿಕ್ ಕನೆಕ್ಟ್' ಪ್ಯಾಕೆಟ್ ದರ ಈಗ ಶೇ.9.74 ರಷ್ಟು ಹೆಚ್ಚಳವಾಗಿದ್ದು, ₹428 ಕ್ಕೆ ತಲುಪಿದೆ. ಹಾಗೆಯೇ, ಮಧ್ಯಮ ವರ್ಗದ ಗ್ರಾಹಕರು ಹೆಚ್ಚು ಬಳಸುವ 10 ಸಿಗರೇಟ್‌ಗಳ 'ಗೋಲ್ಡ್ ಫ್ಲೇಕ್ ಸೂಪರ್ ಸ್ಟಾರ್' ಪ್ಯಾಕೆಟ್ ಬೆಲೆ ₹79 ರಿಂದ ₹89 ಕ್ಕೆ ಏರಿದೆ. ಪ್ರಸಕ್ತ ವರ್ಷದಲ್ಲೇ ಐಟಿಸಿ ಕಂಪನಿಯು ಸತತ ಮೂರನೇ ಬಾರಿಗೆ ದರ ಹೆಚ್ಚಿಸಿರುವುದು ಧೂಮಪಾನಿಗಳಿಗೆ ಆರ್ಥಿಕ ಬರೆ ಎಳೆದಂತಾಗಿದೆ.

ಸತತವಾಗಿ ಹೆಚ್ಚುತ್ತಿರುವ ಬೆಲೆಗಳ ಕಾರಣದಿಂದಾಗಿ ಮುಂಬರುವ ದಿನಗಳಲ್ಲಿ ಸಿಗರೇಟ್‌ಗಳ ಒಟ್ಟಾರೆ ಮಾರಾಟದ ಪ್ರಮಾಣದಲ್ಲಿ ಕುಸಿತ ಕಂಡುಬರಬಹುದು ಎಂದು ಪ್ರಮುಖ ಆರ್ಥಿಕ ರೇಟಿಂಗ್ ಸಂಸ್ಥೆಯಾದ ನೊಮುರಾ ಎಚ್ಚರಿಸಿದೆ. ಬೆಲೆ ಏರಿಕೆಯ ಬಿಸಿಯಿಂದಾಗಿ ಗ್ರಾಹಕರು ಧೂಮಪಾನದ ಪ್ರಮಾಣವನ್ನು ಕಡಿಮೆ ಮಾಡಬಹುದು ಅಥವಾ ಕಡಿಮೆ ದರದ ಸ್ಥಳೀಯ ತಂಬಾಕು ಉತ್ಪನ್ನಗಳತ್ತ ಮುಖ ಮಾಡಬಹುದು ಎಂದು ವಿಶ್ಲೇಷಿಸಲಾಗಿದೆ.

Topics

ಸಂಬಂಧಿತ ಸುದ್ದಿಗಳು