indiaBreakingಪ್ರಮುಖ ಸುದ್ದಿಗಳು

Koel Mallick : ಟಿಎಂಸಿ (TMC) ತೊರೆದ 2 ತಿಂಗಳಲ್ಲೇ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೋಯಲ್‌ ಮಲ್ಲಿಕ್‌ : ಯಾರು ಈಕೆ ?

ಬಂಗಾಳಿ ಚಿತ್ರರಂಗದ ಖ್ಯಾತ ನಟಿಯಾಗಿರುವ ಕೋಯಲ್‌ ಮಲ್ಲಿಕ್‌ ಪಶ್ವಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿತ್ತು.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
Koel Mallick Rajya Sabha BJP
Koel Mallick Rajya Sabha BJP

ಕೋಲ್ಕತ್ತಾ : ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ (TMC) ಹೀನಾಯ ಸೋಲಿನ ಬೆನ್ನಲ್ಲೇ ಬಹುತೇಕ ನಾಯಕರು ಬಿಜೆಪಿ ಕೈ ಹಿಡಿಯುತ್ತಿದ್ದಾರೆ. ಹೀಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಟಿಎಂಸಿ ಸಂಸದೆ ಕೋಯಲ್‌ ಮಲ್ಲಿಕ್‌ (Koel Mallick) ಇದೀಗ ರಾಜ್ಯಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಾ ಕಣಕ್ಕೆ ಧುಮುಕಿದ್ದಾರೆ.

ಬಂಗಾಳಿ ಚಿತ್ರರಂಗದ ಖ್ಯಾತ ನಟಿಯಾಗಿರುವ ಕೋಯಲ್‌ ಮಲ್ಲಿಕ್‌ ವರ್ಷದ ಆರಂಭದಲ್ಲಿ ಪಶ್ವಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿತ್ತು. ಎಪ್ರಿಲ್‌ 6ರಂದು ಕೋಯಲ್‌ ಮಲ್ಲಿಕ್‌ ರಾಜ್ಯಸಭೆಯ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಒಂದೇ ಒಂದು ಅಧಿವೇಶನಕ್ಕೂ ಹಾಜರಾಗದೆ, ಕೆಲವೇ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಬಾರೀ ಹಿನ್ನೆಡೆ ಅನುಭವಿಸಿದ ನಂತರದಲ್ಲಿ ಸಾಕಷ್ಟು ಬೆಳವಣಿಗೆಗೆ ನಡೆದು, ಜುಲೈ 16ರಂದು ಕೋಯಲ್‌ ಮಲ್ಲಿಕ್‌ ಅವರು ತಮ್ಮ ಸಂಸದೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಮಲ್ಲಿಕ್‌ ಅವರಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ.

ಪಶ್ವಿಮ ಬಂಗಾಳದಿಂದ ರಾಜ್ಯಸಭೆಗೆ ಚುನಾವಣೆ ನಡೆಸಲು ಅಕ್ಟೋಬರ್‌ 16ರಂದು ದಿನಾಂಕವನ್ನು ಚುನಾವಣಾ ಆಯೋಗ ನಿಗದಿ ಮಾಡಿದೆ. ಪಶ್ಚಿಮ ಬಂಗಾಳದ ಪವಿತ್ರ ದುರ್ಗಾ ಹಬ್ಬದ ಸಂದರ್ಭದ ಮಹಾಷಷ್ಠಿಯ ದಿನದಂದೇ ರಾಜ್ಯಸಭೆಗೆ ಮತದಾನ ನಡೆಯಲಿದೆ. ಅಕ್ಟೋಬರ್‌ 6ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್‌ 9 ಕೊನೆಯ ದಿನವಾಗಿದೆ.

ಯಾರು ಈ ಕೋಯಲ್‌ ಮಲ್ಲಿಕ್‌?

ಬಂಗಾಳಿ ಚಿತ್ರರಂಗದ ಖ್ಯಾತ ನಟಿಯಾಗಿರುವ ಕೋಯಲ್‌ ಮಲ್ಲಿಕ್‌ ಅವರನ್ನು ರುಕ್ಮಿಣಿ ಮಲ್ಲಿಕ್‌ ಅಂತಾನೂ ಕರೆಯಲಾಗುತ್ತದೆ. ಖ್ಯಾತ ಬಂಗಾಳಿ ನಟ ರಂಜಿತ್‌ ಮಲ್ಲಿಕ್‌ ಹಾಗೂ ಪತ್ನಿ ದೀಪಾ ಮಲ್ಲಿಕ್‌ ಅವರ ಪುತ್ರಿ.

ಕೋಯಲ್‌ ಮಲ್ಲಿಕ್‌ ಮನಃಶಾಸ್ತ್ರ (Psychology) ವಿಷಯದಲ್ಲಿ ಆನರ್ಸ್‌ನೊಂದಿಗೆ ಬ್ಯಾಚುಲರ್ ಆಫ್ ಸೈನ್ಸ್ (B.Sc) ಪದವಿಯನ್ನು ಪಡೆದುಕೊಂಡಿದ್ದಾರೆ. ಕೋಲ್ಕತ್ತಾದ ಹೈಸ್ಕೂಲ್‌ ಫಾರ್‌ ಗರ್ಲ್ಸ್‌ ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು, ನಂತರ ಗೋಖಲೆ ಮೆಮೋರಿಯಲ್‌ ಗರ್ಲ್ಸ್‌ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ್ದರು.

2013ರಲ್ಲಿ ನಿಸ್ಪಾಲ್ ಸಿಂಗ್ ಅವರು ಮದುವೆಯಾದ್ರು. ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದ ಅವಧಿಯಲ್ಲಿಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರು ಕೋಯಲ್‌ ಮಲ್ಲಿಕ್‌ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. ಬಂಗಾಳಿ ಚಲನಚಿತ್ರೋಧ್ಯಮದಲ್ಲಿ ಸಕ್ರೀಯರಾಗಿದ್ದ ನಟಿ ನಂತರದಲ್ಲಿ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಿದ್ದರು.

ಕೋಯಲ್‌ ಮಲ್ಲಿಕ್‌ ಅವರು ರಾಜ್ಯಸಭೆಗೆ ರಾಜೀನಾಮೆ ಸಲ್ಲಿಸಿರೋದು ಟಿಎಂಸಿ ಪಕ್ಷಕ್ಕೆ ಬಾರೀ ಹಿನ್ನೆಡೆಯನ್ನು ಕೊಟ್ಟಿತ್ತು. ಅಲ್ಲದೇ ಮಮತಾ ಬ್ಯಾನರ್ಜಿ ಅವರ ನಾಯಕತ್ವವನ್ನು ಧಿಕ್ಕರಿಸಿ ಪಕ್ಷದಿಂದ ಹೊರನಡೆದಿದ್ದರು. ನಂತರದಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದು ಬಾರೀ ಸುದ್ದಿಯಾಗಿತ್ತು. ಇದೀಗ ಇದೇ ಕೋಯಲ್‌ ಮಲ್ಲಿಕ್‌ ಬಿಜೆಪಿ ಪಕ್ಷದ ಅಭ್ಯರ್ಥಯಾಗಿ ರಾಜ್ಯಸಭಾ ಕಣಕ್ಕೆ ಧುಮುಕಿದ್ದಾರೆ.

Topics

ಸಂಬಂಧಿತ ಸುದ್ದಿಗಳು