ಚೆನೈ : ಖ್ಯಾತ ಯೂಟ್ಯೂಬರ್ ಮಧುಮಿತ (Madhamitha YouTuber )ಮನೆಯಲ್ಲಿನ ಕಳವು ಪ್ರಕರಣಕ್ಕೆ ಬಿಗ್‌ಟ್ವಿಸ್ಟ್ ಸಿಕ್ಕಿದೆ. ಯೂಟ್ಯೂಬ್ ರೀಲ್ಸ್ ಮೂಲಕ ಚಿನ್ನದ ಆಭರಣ, ಕಂತೆ ಕಂತೆ ನೋಟುಗಳನ್ನು ಪ್ರದರ್ಶಿಸುವ ಮೂಲಕ ಮಧುಮಿತಾ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಇದೀಗ ಪತಿ ಹಾಗೂ ಮಗಳ ಜೊತೆಗೆ ಮಧುಮಿತಾ ನಾಪತ್ತೆ ಆಗಿರೋದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಮಧುಮಿತಾ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡ್ತಾ ಇರೋದು ಹೆಸರು. ತಮಿಳುನಾಡಿನ ಈ ಪ್ರಸಿದ್ದ ಯುಟ್ಯೂಬರ್ ಮನೆಯಲ್ಲಿ ಇತ್ತೀಚಿಗೆ ಬಾರೀ ಕಳವು ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 724 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ನೀಡಿರುವ ಹೇಳಿಕೆ ಕುತೂಹಲವನ್ನು ಮೂಡಿಸಿದೆ. ಅದ್ರಲ್ಲೂ ಕಳ್ಳರು ಕಳ್ಳತನಕ್ಕೆ ಮಕ್ಕಳನ್ನು ಹೇಗೆ ಬಳಕೆ ಮಾಡ್ತಾರೆ ಅನ್ನೋದು ಬಯಲಾಗಿದೆ.
ಹೌದು, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಮ್ಮತ್ತುಕೋಣಂ ನಿವಾಸಿಯಾಗಿರುವ ಮಧುಮಿತಾ ಹಾಗೂ ಆಕೆಯ ಪತಿ ವಿನೋದ್ ಕುಮಾರ್ ಇತ್ತೀಚಿಗಷ್ಟೇ ಕುಟುಂಬಸ್ಥರ ಜೊತೆಗೆ ತಿರುನೆಲ್ವೇಲಿಗೆ ತೆರಳಿದ್ದರು. ಮರಳಿ ಮನೆಗೆ ಬಂದಾಗ ಮನೆಯ ಹಿಂಬಾಗಿಲನ್ನು ಮುರಿದು ಕಳ್ಳರು ಒಳ ನುದ್ದಿದ್ದು ಚಿನ್ನಾಭರಣಗಳನ್ನು ಕಡ್ಡು ಪರಾರಿಯಾಗಿದ್ದರು. ಮಧುಮಿತಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ಮಧುಮಿತಾ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಆಸ್ತಿ- ಹಣವನ್ನು ತೋರಿಸುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಕಳ್ಳರು ವಿಡಿಯೋವೊಂದರಲ್ಲಿ ಮಧುಮಿತಾ ಮಗನ ಸ್ಕೂಲ್ ಬ್ಯಾಗ್‌ನಲ್ಲಿ ಶಾಲೆಯ ಹೆಸರನ್ನು ಗುರುತಿಸಿದ್ದರು. ನಂತರ ಶಾಲೆಯ ವಿಳಾದ ಆಧಾರದ ಮೇಲೆ ಮಧುಮಿತಾ ಮನೆಯನ್ನು ಪತ್ತೆ ಹಚ್ಚಿದ್ದರು. ಮನೆಯ ಒಳಗೆ ನುಗ್ಗಿದ ಕಳ್ಳರು ತಮ್ಮ ಕೆಲಸ ಮುಗಿಸಿ ಎಸ್ಕೇಪ್ ಆಗಿದ್ದರು.
ಕನ್ಯಾಕುಮಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸುಮಾರು 7 ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ಪೊಲೀಸರು ೧೬೦ಕ್ಕೂ ಹೆಚ್ಚು ಸಿಸಿಟಿವಿ ಕೆಮರಾ ವಿಡಿಯೋ ಪೂಟೇಜ್, 32ಕ್ಕೂ ಅಧಿಕ ಕರೆಗಳ ವಿವರಗಳನ್ನು (CDR) ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಧುಮಿತಾ (Madhamitha) ಎಸ್ಕೇಪ್ ? ಯೂಟ್ಯೂಬರ್‌ಗೆ ಸಾಲು ಸಾಲು ಸಂಕಷ್ಟ
ಯೂಟ್ಯೂಬ್ ವಿಡಿಯೋದಲ್ಲಿ ತಾನು ತನ್ನಲ್ಲಿನ ಆಸ್ತಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದೇ ಇದೀಗ ಮಧುಮಿತಾಗೆ ಸಾಲು ಸಾಲು ಸಂಕಷ್ಟವನ್ನು ತಂದೊಡ್ಡಿದೆ. ಮನೆಯಲ್ಲಿ ಕಳವಾಗಿದ್ದ ಚಿನ್ನಾಭರಣ ಕೈಗೆ ಸಿಕ್ಕಿದ್ದರೂ ಕೂಡ ಒಡವೆ ಸಿಕ್ಕಿದ ಖುಷಿಯನ್ನು ಅನುಭಿಸೋದಕ್ಕೆ ಮಧುಮಿತಾಗೆ ಸಾಧ್ಯವಿಲ್ಲ. ಯಾಕೆಂದ್ರೆ ಮಧುಮಿತಾ ವಿರುದ್ದ ಕಳ್ಳತನದ ಆರೋಪ ಕೇಳಿಬಂದಿದೆ. ವೃದ್ದರಾಗಿರುವ ಕಟ್ಟಡದ ಗುತ್ತಿಗೆದಾರರೋರ್ವರು 5 ಸವರನ್ ಚಿನ್ನಾಭರಣವನ್ನು ಮಧುಮಿತಾ ಕಳವು ಮಾಡಿರುವ ಕುರಿತು ರಾಜಕ್ಕಮಂಗಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಎಫ್‌ಐಆರ್ ದಾಖಲಾಗಿದೆ.
2022ರಲ್ಲಿ ಮಧುಮಿತಾ ತಮ್ಮೊಂದಿಗೆ ಸ್ನೇಹ ಹೊಂದಿದ್ದರು. ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ತಮ್ಮ ಕುತ್ತಿಗೆಯಲ್ಲಿ ಇದ್ದ ಐದು ಸವರ್ ಚಿನ್ನದ ಸರವನ್ನು ಕಿತ್ತುಕೊಂಡಿದ್ದರು. ಈ ಬಗ್ಗೆ ಪ್ರಶ್ನಿಸಿದ್ರೆ ಆಕೆ ತನಗೆ ಬೆದರಿಕೆಯೊಡ್ಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಧುಮಿತಾ ಮನೆಯಲ್ಲಿ ನಡೆದ ಕಳವು ಪ್ರಕರಣವನ್ನು ಬೇಧಿಸಿದ ಬೆನ್ನಲ್ಲೇ ದೂರು ದಾಖಲಾಗಿರೋದು ಮಧುಮಿತಾಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಸದ್ಯ ಮಧುಮಿತಾ ತಮ್ಮ ಪತಿ ಹಾಗೂ ಮಗುವಿನ ಜೊತೆಗೆ ಎಸ್ಕೇಪ್ ಆಗಿದ್ದು, ಆಕೆಯ ಹಳೆಯ ವಿಡಿಯೋಗಳನ್ನು ಆಧರಿಸಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮಧುಮಿತಾ ಪೊಲೀಸರ ತನಿಖೆಗೆ ಒಳಪಟ್ಟ ನಂತರಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರ ಬರೋದಕ್ಕೆ ಸಾಧ್ಯ.