Kannada News Next

karnataka

ನವರಾತ್ರಿಯ ದುರ್ಗಾಮಾತೆ ಮೆರವಣಿಗೆಯಲ್ಲಿ ದುರಂತ : ಟ್ರ್ಯಾಕ್ಟರ್‌ ಲಾರಿ ಢಿಕ್ಕಿ - 3 ಸಾವು, 7 ಮಂದಿ ಗಂಭೀರ

ಹುಂಜಾನಟ್ಟಿಯ ನಿವಾಸಿಗಳಾದ ಪ್ರಕಾಶ್‌ ವಾಸೇದಾರ, ದಾನಪ್ಪ ಜಾನಗೊರೆ, ಶಿವಪ್ಪ ಖಾನಾಪುರೆ ಮೃತ ದುರ್ದೈವಿಗಳಾಗಿದ್ದಾರೆ. ಎಲ್ಲರೂ ಕೂಡ ಹಂಜಾನಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Belagavi hukkeri durga procession tractor lorry accident three dead 1

ಬೆಳಗಾವಿ/ ಶಿವಮೊಗ್ಗ : ನವರಾತ್ರಿಯ ಸಂಭ್ರಮಾಚರಣೆಯ ಹೊತ್ತಲ್ಲೇ ದುರಂತವೊಂದು ಸಂಭವಿಸಿದೆ. ದುರ್ಗಾಮಾತೆಯನ್ನು ಕೊಂಡೊಯುವ ವೇಳೆಯಲ್ಲಿ ಟ್ರಾಕ್ಟರ್‌ಗೆ ಲಾರಿ ಢಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಹುಂಜಾನಟ್ಟಿಯ ನಿವಾಸಿಗಳಾದ ಪ್ರಕಾಶ್‌ ವಾಸೇದಾರ, ದಾನಪ್ಪ ಜಾನಗೊರೆ, ಶಿವಪ್ಪ ಖಾನಾಪುರೆ ಮೃತ ದುರ್ದೈವಿಗಳಾಗಿದ್ದಾರೆ. ಎಲ್ಲರೂ ಕೂಡ ಹಂಜಾನಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಬೆಳಗಾವಿಯಿಂದ ದುರ್ಗಾಮಾತೆಯ ಮೂರ್ತಿಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಎಲ್ಲಾ ಗಾಯಾಳುಗಳನ್ನು ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಯಮಕನಮರಡಿ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಮತ್ತೊಂದೆಡೆ ಶಿವಮೊಗ್ಗದಲ್ಲಿ ಕಾರು ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಶಿವಮೊಗ್ಗದ ಭದ್ರಾವತಿಯ ಮೂಲೆಕಟ್ಟೆ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ಹಾಗೂ ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಸಂಗಯ್ಯ ಎಂಬಾತ ಸಾವನ್ನಪ್ಪಿದ್ದಾನೆ. ಅಪಘಾತ ಸಂಭವಿಸಿದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾರೆ.

ಭದ್ರಾವತಿಯ ಪೇಪರ್‌ಟೌನ್‌ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಕಾರು ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.