ನವರಾತ್ರಿಯ ದುರ್ಗಾಮಾತೆ ಮೆರವಣಿಗೆಯಲ್ಲಿ ದುರಂತ : ಟ್ರ್ಯಾಕ್ಟರ್ ಲಾರಿ ಢಿಕ್ಕಿ - 3 ಸಾವು, 7 ಮಂದಿ ಗಂಭೀರ
ಹುಂಜಾನಟ್ಟಿಯ ನಿವಾಸಿಗಳಾದ ಪ್ರಕಾಶ್ ವಾಸೇದಾರ, ದಾನಪ್ಪ ಜಾನಗೊರೆ, ಶಿವಪ್ಪ ಖಾನಾಪುರೆ ಮೃತ ದುರ್ದೈವಿಗಳಾಗಿದ್ದಾರೆ. ಎಲ್ಲರೂ ಕೂಡ ಹಂಜಾನಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಬೆಳಗಾವಿ/ ಶಿವಮೊಗ್ಗ : ನವರಾತ್ರಿಯ ಸಂಭ್ರಮಾಚರಣೆಯ ಹೊತ್ತಲ್ಲೇ ದುರಂತವೊಂದು ಸಂಭವಿಸಿದೆ. ದುರ್ಗಾಮಾತೆಯನ್ನು ಕೊಂಡೊಯುವ ವೇಳೆಯಲ್ಲಿ ಟ್ರಾಕ್ಟರ್‌ಗೆ ಲಾರಿ ಢಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಹುಂಜಾನಟ್ಟಿಯ ನಿವಾಸಿಗಳಾದ ಪ್ರಕಾಶ್ ವಾಸೇದಾರ, ದಾನಪ್ಪ ಜಾನಗೊರೆ, ಶಿವಪ್ಪ ಖಾನಾಪುರೆ ಮೃತ ದುರ್ದೈವಿಗಳಾಗಿದ್ದಾರೆ. ಎಲ್ಲರೂ ಕೂಡ ಹಂಜಾನಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಬೆಳಗಾವಿಯಿಂದ ದುರ್ಗಾಮಾತೆಯ ಮೂರ್ತಿಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಎಲ್ಲಾ ಗಾಯಾಳುಗಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಯಮಕನಮರಡಿ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಮತ್ತೊಂದೆಡೆ ಶಿವಮೊಗ್ಗದಲ್ಲಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಶಿವಮೊಗ್ಗದ ಭದ್ರಾವತಿಯ ಮೂಲೆಕಟ್ಟೆ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಂಗಯ್ಯ ಎಂಬಾತ ಸಾವನ್ನಪ್ಪಿದ್ದಾನೆ. ಅಪಘಾತ ಸಂಭವಿಸಿದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾರೆ.
ಭದ್ರಾವತಿಯ ಪೇಪರ್‌ಟೌನ್ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಕಾರು ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.
Topics
ಸಂಬಂಧಿತ ಸುದ್ದಿಗಳು
karnataka
ಪ್ರದೀಪ್ ಈಶ್ವರ್ಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬೇಡಿ: ಸಿಎಂ ಡಿ.ಕೆ. ಶಿವಕುಮಾರ್ಗೆ ಕಾಂಗ್ರೆಸ್ ಮುಖಂಡರ ಕಟ್ಟುನಿಟ್ಟಿನ ಮನವಿ
karnataka
ಮೈಸೂರು ದಸರಾ KSRTC ಸಾರಿಗೆ ಕ್ರಾಂತಿ : 3000 ಬಸ್ , ವಿಶೇಷ ಪ್ಯಾಕೇಜ್
karnataka
Free Bus : ಸರಕಾರಿ ಬಸ್ಗಳ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ಕಾರ್ಡ್
karnataka

