ಪ್ರದೀಪ್ ಈಶ್ವರ್‌ಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬೇಡಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಕಾಂಗ್ರೆಸ್ ಮುಖಂಡರ ಕಟ್ಟುನಿಟ್ಟಿನ ಮನವಿ
ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ದವೇ ಪ್ರದೀಪ್ ಈಶ್ವರ್ ತಿರುಗಿ ಬಿದ್ದಿದ್ದು, ನಾಯಕ ಕೋಟಿ ಕೋಟಿ ಡಿಮ್ಯಾಂಡ್ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
By ಜೋಬಿನ್ ಅಮಾಸೆಬೈಲು | Jobin Amasebail
1 min read
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇದೀಗ ಹೊಸ ಬಾಂಬ್ ಸಿಡಿಸಿಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ದವೇ ಪ್ರದೀಪ್ ಈಶ್ವರ್ ತಿರುಗಿ ಬಿದ್ದಿದ್ದು, ನಾಯಕ ಕೋಟಿ ಕೋಟಿ ಡಿಮ್ಯಾಂಡ್ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆಯಲ್ಲಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ನಾಯಕರು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಪ್ರದೀಪ್ ಈಶ್ವರ್ ಹೇಳಿಕೆಯನ್ನು ಕೊಟ್ಟಿದ್ದು, ಸ್ವಪಕ್ಷೀಯ ನಾಯಕರ ವಿರುದ್ದ ಆರೋಪಿಗಳ ಸುರಿಮಳೆ ಗೈದಿದ್ದಾರೆ. ನಾನು ವೋಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದೇನೆ. ಸುಮಾರು 30 ನಾಯಕರಿಗೆ ಈಗಾಗಲೇ ಕೋಟಿ ಕೋಟಿ ಹಣ ಸುರಿದಿದ್ದೇನೆ.
ಕಾಂಗ್ರೆಸ್ ನಾಯಕರು ತಮ್ಮ ವೈಯಕ್ತಿಕ ಕಷ್ಟಕ್ಕೆ ಹಣವನ್ನು ಕೇಳಬೇಡಿ. ನನ್ನ ಸೈಡಿಗೆ ಕರೆದು ನಾಯಕರು 10 ಲಕ್ಷ ಕೆಳ್ತಾರೆ, ಕಾಲ್ ಮಾಡಿ 10 ಲಕ್ಷ ಕೊಡಿ ಅಂತಾರೆ, ಮಂಚೇನಹಳ್ಳಿಯ ಪ್ರಕಾಶ್ ಅವರು ಟ್ರಿಪ್‌ಗೆ ಹೋದ್ರೆ ಅವರು ಫ್ಲೈಟ್ ಟಿಕೆಟ್ ಮಾಡಿಸಿಕೊಡಬೇಕು. ಶಿರಡಿಗೆ ಹೋದ್ರೆ ಕೂಡ ಪ್ಲೈಟ್ ಟಿಕೆಟ್ ಕೊಡಬೇಕು. ಹೀಗೆ ಹಲವು ನಾಯಕರಿಗೆ ಪ್ಲೈಟ್ ಟಿಕೆಟ್ ಮಾಡಿಕೊಟ್ಟಿದ್ದೇನೆ ಎಂದು ಆರೋಪಿಸಿದ್ದಾರೆ.
ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ತಿಕ್ಕಾಟ ಮತ್ತಷ್ಟು ತೀವ್ರವಾಗಿದೆ. ಶಾಸಕ ಸುಧಾಕರ್ ಅವರ ಬೆಂಬಲಿಗರು ಪ್ರದೀಪ್ ಈಶ್ವರ್ ಅವರನ್ನು ಅಮಾನತುಗೊಳಿಸಬೇಕು, ಅಲ್ಲದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಇನ್ನೂ ಕೆಲವು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಮುಖಂಡರು ಖುದ್ದು ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡಲೇ ಬಾರದು ಎಂದು ಪಟ್ಟುಹಿಡಿದಿದ್ದಾರೆ.
Topics

