ಮೈಸೂರು ದಸರಾ KSRTC ಸಾರಿಗೆ ಕ್ರಾಂತಿ : 3000 ಬಸ್ , ವಿಶೇಷ ಪ್ಯಾಕೇಜ್
ದಸರಾ ವೀಕ್ಷಣೆಯ ಪ್ರಮುಖ ಆಕರ್ಷಣೆಯಾಗಿ ಮೈಸೂರು ನಗರದ ಸ್ಯಾಟಲೈಟ್ ನಿಲ್ದಾಣದಿಂದಲೇ ಪ್ರತ್ಯೇಕವಾಗಿ 7೦೦ ಬಸ್‌ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಮತ್ತು ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಗೆ ಧಾವಿಸುವ ಲಕ್ಷಾಂತರ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅತ್ಯುತ್ತಮ ಕೊಡುಗೆಯೊಂದನ್ನು ನೀಡಿದೆ.
ಹಬ್ಬದ ದಿನಗಳಂದು ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿ ಮಾಡುವ ಉದ್ದೇಶದಿಂದೇ ಸುಮಾರು 3000ಕ್ಕೂ ಅಧಿಕ ವಿಶೇಷ ಬಸ್ಸುಗಳನ್ನು ರಸ್ತೆಗೆ ಇಳಿಸಲಿದೆ.
ಈ ವಿಶೇಷ ವಾಹನಗಳು ಪ್ರಮುಖವಾಗಿ ಬೆಂಗಳೂರಿನ ಮೆಜೆಸ್ಟಿಕ್, ಮೈಸೂರು ರಸ್ತೆ ಹಾಗೂ ಶಾಂತಿನಗರದ ಕೇಂದ್ರಗಳಿಂದ ನೆರೆರಾಜ್ಯಗಳ ನಗರಗಳಿಗೆ ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಚರಿಸಲಿವೆ.
ದಸರಾ ವೀಕ್ಷಣೆಯ ಪ್ರಮುಖ ಆಕರ್ಷಣೆಯಾಗಿ ಮೈಸೂರು ನಗರದ ಸ್ಯಾಟಲೈಟ್ ನಿಲ್ದಾಣದಿಂದಲೇ ಪ್ರತ್ಯೇಕವಾಗಿ 7೦೦ ಬಸ್‌ಗಳನ್ನು ಮೀಸಲಿಡಲಾಗಿದೆ. ಇವುಗಳಲ್ಲಿ 4೦೦ ಕ್ಕೂ ಹೆಚ್ಚು ಬಸ್ಸುಗಳು ಚಾಮುಂಡಿಬೆಟ್ಟ, ಕೆಆರ್‌ಎಸ್ ಜಲಾಶಯ ಹಾಗೂ ಶ್ರೀರಂಗಪಟ್ಟಣದಂತಹ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರಗಳಿಗೆ ನಿರಂತರ ಸಂಪರ್ಕ ಕಲ್ಪಿಸಲಿವೆ.
ಸುದೀರ್ಘ ರಜೆಯ ಅವಧಿಯಲ್ಲಿ ದೂರದ ಊರುಗಳಿಗೆ ತೆರಳುವ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಖಾಸಗಿ ವಾಹನಗಳ ಸುಲಿಗೆಗೆ ಲಗಾಮು ಹಾಕಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಸಾಮಾನ್ಯ ವೇಗದೂತ ವಾಹನಗಳಿಂದ ಹಿಡಿದು ಅತ್ಯಾಧುನಿಕ ಐರಾವತ ಹಾಗೂ ಅಂಬಾರಿ ಸ್ಲೀಪರ್ ಕ್ಲಾಸ್ ಬಸ್‌ಗಳು ಈ ವಿಶೇಷ ಸೇವೆಯಲ್ಲಿ ಲಭ್ಯವಿರಲಿವೆ.
ಇದರೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನಿಗಮವು ಅತ್ಯಂತ ಕೈಗೆಟುಕುವ ದರದಲ್ಲಿ ಏಕದಿನ ಟೂರ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಪ್ರವಾಸಿಗರು ತಮ್ಮ ಆಸಕ್ತಿಗೆ ಅನುಗುಣವಾಗಿ ಪ್ರಕೃತಿ ಸೌಂದರ್ಯ ಸವಿಯಲು ಜಲದರ್ಶಿನಿ, ಐತಿಹಾಸಿಕ ತಾಣಗಳ ವೀಕ್ಷಣೆಗೆ ದೇವದರ್ಶಿನಿ ಹಾಗೂ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕಾಗಿ ಗಿರಿದರ್ಶಿನಿ ಎಂಬ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಈ ಯೋಜನೆಗಳು ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ದಸರಾ ಹಬ್ಬದ ಸಡಗರವನ್ನು ಕಣ್ಣುಂಬಿಕೊಳ್ಳಲು ಸಾರಿಗೆ ಇಲಾಖೆ ಕಲ್ಪಿಸಿರುವ ಅತ್ಯುತ್ತಮ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರವಾಸದ ಅವಕಾಶವಾಗಿದೆ ಎನ್ನಬಹುದು. ಸಾರ್ವಜನಿಕರು ಆನ್‌ಲೈನ್ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.
Topics
ಸಂಬಂಧಿತ ಸುದ್ದಿಗಳು
karnataka
Free Bus : ಸರಕಾರಿ ಬಸ್ಗಳ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ಕಾರ್ಡ್
karnataka
ಗೃಹಲಕ್ಷ್ಮೀ ಯೋಜನೆ ಮರುಪರಿಶೀಲನೆ : ಮಾಸಿಕ 2000 ರೂಪಾಯಿ ಪಡೆಯೋಕೆ ಈ ದಾಖಲೆ ಕಡ್ಡಾಯ
karnataka
ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್ : 110 ಪ್ರಮುಖ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ
karnataka

