ಕರಾವಳಿಯಲ್ಲಿ 2 ದಿನ ಭಾರಿ ಮಳೆ: ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮುಂಗಾರು ಮಳೆ ಕ್ಷೀಣ ? IMD ವರದಿ

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಾರೀ ಮಳೆ ಸುರಿಯುತ್ತಿದೆ. ಅಗಸ್ಟ್‌ 2ರವರೆಗೆ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

2 min read

WhatsAppPost
Heavy Rain fall
Heavy Rain fall

ಬೆಂಗಳೂರು : ಕಳೆದೊಂದು ವಾರದಿಂದಲೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಾರೀ ಮಳೆ ಸುರಿಯುತ್ತಿದೆ. ಅಗಸ್ಟ್‌ 2ರವರೆಗೆ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು ರಜೆ ( School Holiday) ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ

ಅಗಸ್ಟ್‌ 1 ಮತ್ತು 2ರಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿಯಾದ ಭಾರೀ ಮಳೆಯಾಗಲಿದ್ದು ಭಾರತೀಯ ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಅಂಗನವಾಡಿಯಿಂದ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕರಾವಳಿ ಮಾತ್ರವಲ್ಲದೇ ಮಲೆನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಿನಲ್ಲಿಯೂ ಭಾರತಕ್ಕೆ ಮಳೆಯ ಕೊರತೆ ಎದುರಾಗಲಿದೆಯಂತೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಮ್‌ಡಿ ತಿಳಿಸಿದೆ.

ಮುಂಗಾರು ಆರಂಭದಿಂದಲೂ ಮಳೆ ಕೊರತೆ ಎದುರಾಗಿದ್ದರೂ ಕೂಡ, ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಅಗಸ್ಟ್‌ ಮೊದಲ ವಾರ ಹೊರತು ಪಡಿಸಿದ್ರೆ ಮುಂದಿನ ಎರಡು ತಿಂಗಳು ಮಳೆಯ ಅಭಾವ ಎದುರಾಗುವುದು ಖಚಿತ. ಜೂನ್‌ ತಿಂಗಳಿನಿಂದ ಹಿಡಿದು ಸೆಪ್ಟೆಂಬರ್‌ ತಿಂಗಳವರೆಗಿನ ಮಾನ್ಸೂನ್‌ ದ್ವಿತಿಯಾರ್ಧದಲ್ಲಿ ಭಾರತದಲ್ಲಿ ಮಳೆ ಶೇಕಡಾ 94ಕ್ಕಿಂತಲೂ ಕೊರತೆ ಉಂಟಾಗುವ ಸಾಧ್ಯತೆಯಿದೆ.

ಭಾರತದಲ್ಲಿ ಈ ಬಾರಿ ದಾಖಲೆಯ ಮಳೆಯ ಕೊರತೆ

1971ರಿಂದ 2020ರ ಹವಾಮಾನ ದಾಖಲೆಯನ್ನು ಆಧರಿಸಿದ ಆಗಸ್ಟ್-ಸೆಪ್ಟೆಂಬರ್ ವಾರ್ಷಿಕವಾಗಿ 422.8 ಮಿ.ಮೀ. ಆಗಿದೆ.ಈ ಬಾರಿ ಜೂನ್‌ ತಿಂಗಳಿನಲ್ಲಿ ಮಳೆಯ ಪ್ರಮಾಣ ಶೇಕಡಾ 35.4% ಕಡಿಮೆಯಾಗಿದ್ದು, ಜುಲೈನಲ್ಲಿ ಸಾಮಾನ್ಯಕ್ಕಿಂತ 1% ರಷ್ಟು ಹೆಚ್ಚಾಗಿತ್ತು. ಜುಲೈನಲ್ಲಿ ದೇಶವು ಸಾಮಾನ್ಯಕ್ಕಿಂತ 283.3 ಮಿ.ಮೀ. ಹೆಚ್ಚು ಮಳೆಯನ್ನು ಕಂಡಿದೆ. ಆದರೆ ಐಎಂಡಿ ಈ ತಿಂಗಳ ಮಳೆಗಿಂತ ಕಡಿಮೆ ಮಳೆಯಾಗಿದೆ ಎಂದು ಮುನ್ಸೂಚನೆ ನೀಡಿದ್ದರೂ ಸಹ, ಸಾಮಾನ್ಯಕ್ಕಿಂತ 280.5 ಮಿ.ಮೀ. ಹೆಚ್ಚು ಮಳೆಯಾಗಿದೆ. ಮುಂದಿನ ಎರಡು ತಿಂಗಳ ಕಾಲ ಮಳೆ ಕೊರತೆ ಎದುರಾದ್ರೆ ಅನ್ನದಾತರು ಸಂಕಷ್ಟಕ್ಕೆ ಸಿಲುಕುವುದು ಖಚಿತ.

ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ, ಪರ್ಯಾಯ ದ್ವೀಪ, ಮಧ್ಯ ಮತ್ತು ವಾಯುವ್ಯ ಭಾರತ ಮತ್ತು ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ಮಳೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಜೂನ್‌ ತಿಂಗಳಿಗೆ ಹೋಲಿಕೆ ಮಾಡಿದ್ರೆ ಜುಲೈ ತಿಂಗಳಿನಲ್ಲಿ ಮಳೆ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಜೂನ್‌ನಲ್ಲಿ ತಿಂಗಳಿನಲ್ಲಿ ದೇಶದ ಒಟ್ಟು 30% (224 ಜಿಲ್ಲೆಗಳು) ಮಳೆಯಾಗಿದ್ರೆ, ಜುಲೈನಲ್ಲಿ 53% (388 ಜಿಲ್ಲೆಗಳು) ಕ್ಕೆ ಏರಿಕೆ ಕಂಡಿತ್ತು. ಆದರೆ ಕೊರತೆ ಮತ್ತು ದೊಡ್ಡ ಕೊರತೆಯ ಜಿಲ್ಲೆಗಳು 69% (508 ಜಿಲ್ಲೆಗಳು) ರಿಂದ 46% (344 ಜಿಲ್ಲೆಗಳು) ಕ್ಕೆ ಇಳಿದವು" ಎಂದು ಐಎಂಡಿಯ ಹವಾಮಾನಶಾಸ್ತ್ರದ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಳೆಯ ಕೊರತೆ ಎದುರಾಗುತ್ತಾ ಬರದ ಭೀತಿ

ಭಾರತದಲ್ಲಿ ಕೊನೆಯದಾಗಿ 2026ರಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್‌ ಮಳೆ ದಾಖಲಾಗಿತ್ತು. ಆದರೆ ವಾರ್ಷಿಕವಾಗಿ ಶೇಕಡಾ 95 ರಷ್ಟು ಮಳೆಯ ಕೊರತೆ ಉಂಟಾಗಿತ್ತು. ಅಗಸ್ಟ್‌ ತಿಂಗಳಿನಲ್ಲಿ ಶೇಕಡಾ 94 ರಷ್ಟು ಮಳೆಯ ಅಭಾವ ಎದುರಾಗಿತ್ತು. ಒಂದೊಮ್ಮೆ ಮುಂದಿನ ಎರಡು ತಿಂಗಳ ಕಾಲ ಮಳೆಯ ಕೊರತೆ ಉಂಟಾದ್ರೆ ಭಾರತದ ಕೃಷಿ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಉಂಟಾಗುವುದು ಖಚಿತ.

Topics

Related News