ಸಿಎಂ ಡಿ.ಕೆ. ಶಿವಕುಮಾರ್‌ಗೆ ಹೊಸ ತಲೆನೋವು : ಯಾರಿಗೆ ಸಿಗಲಿದೆ ಯಾವ ಖಾತೆ ?
ನೂತನ ಸಚಿವರು ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದಿದ್ದು, ಯಾರಿಗೂ ಬೇಸರವಾಗದಂತೆ ಖಾತೆ ಹಂಚಿಕೆ ಮಾಡಬೇಕಾದ ಜವಾಬ್ದಾರಿ ಇದೀಗ ಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲಿದೆ
ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಸಿಎಂ ಡಿ.ಕೆ.ಶಿವಕುಮಾರ್ ಸಂಪುಟವು ಹಲವು ಗೊಂದಲಗಳ ನಡುವೆಯೇ ವಿಸ್ತರಣೆಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷೆ ಹೊಂದಿರುವ ಶಾಸಕರ ಬಂಡಾಯ ಒಂದೆಡೆಯಾದರೆ, ಇತ್ತ ನೂತನ ಸಚಿವರಿಗೆ ಯಾವ ಖಾತೆ ಹಂಚಿಕೆ ಮಾಡಬೇಕು ಎಂಬ ಹೊಸ ತಲೆನೋವು ಕೂಡ ಶುರುವಾಗಿದೆ .
ನೂತನ ಸಚಿವರು ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದಿದ್ದು, ಯಾರಿಗೂ ಬೇಸರವಾಗದಂತೆ ಖಾತೆ ಹಂಚಿಕೆ ಮಾಡಬೇಕಾದ ಜವಾಬ್ದಾರಿ ಇದೀಗ ಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲಿದೆ. ಮೂಲಗಳ ಪ್ರಕಾರ, ಹಿರಿಯ ನಾಯಕ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿ ಸಿಗುವ ಸಾಧ್ಯತೆಯಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಜೊತೆಗೆ ಪ್ರವಾಸೋದ್ಯಮ ಇಲಾಖೆಯು ಬಸವರಾಜ ರಾಯರೆಡ್ಡಿ ಅವರ ಪಾಲಾಗಬಹುದು. ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ತೋಟಗಾರಿಕೆ ಹಾಗೂ ಗಣಿ ಇಲಾಖೆ, ಎನ್. ಚಲುವರಾಯಸ್ವಾಮಿ ಅವರಿಗೆ ಕೃಷಿ ಮತ್ತು ಕೆ.ಎಂ. ಶಿವಲಿಂಗೇಗೌಡ ಅವರಿಗೆ ವಸತಿ ಇಲಾಖೆಯ ಹೊಣೆಗಾರಿಕೆ ದೊರೆಯುವ ನಿರೀಕ್ಷೆಯಿದೆ.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಸಹಕಾರ ಮತ್ತು ಸಕ್ಕರೆ ಇಲಾಖೆಯನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ರಿಜ್ವಾನ್ ಅರ್ಷದ್ ಅವರು ಉನ್ನತ ಶಿಕ್ಷಣ ಇಲಾಖೆಯನ್ನು ಮುನ್ನಡೆಸುವ ಸಾಧ್ಯತೆಯಿದೆ.
ಜಮೀರ್ ಅಹ್ಮದ್ ಖಾನ್ ಅವರಿಗೆ ವಕ್ಫ್, ಹಜ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿ ಮುಂದುವರಿಯಬಹುದು. ಪೌರಾಡಳಿತ ಇಲಾಖೆಯನ್ನು ಕೆ.ಎನ್. ಬಸವಂತಪ್ಪ ಹಾಗೂ ಕೈಮಗ್ಗ, ಜವಳಿ ಇಲಾಖೆಯನ್ನು ವಿಜಯಾನಂದ ಕಾಶಪ್ಪನವರ್ ವಹಿಸಿಕೊಳ್ಳಬಹುದು. ಸಣ್ಣ ಕೈಗಾರಿಕೆಗಳ ಹೊಣೆ ಅಜಯ್ ಸಿಂಗ್ ಅವರಿಗೆ ಹಾಗೂ ಅಬಕಾರಿ ಇಲಾಖೆಯ ಜವಾಬ್ದಾರಿ ರುದ್ರಪ್ಪ ಲಮಾಣಿ ಅವರಿಗೆ ಸಿಗುವ ಲಕ್ಷಣಗಳಿವೆ.
ಹೆಚ್.ಸಿ. ಬಾಲಕೃಷ್ಣ ಅವರಿಗೆ ಅರಣ್ಯ ಮತ್ತು ಪರಿಸರ, ಪುಟ್ಟರಂಗಶೆಟ್ಟಿ ಅವರಿಗೆ ಪಶುಸಂಗೋಪನೆ, ಮತ್ತು ಬಿ. ನಾಗೇಂದ್ರ ಅವರಿಗೆ ಮೀನುಗಾರಿಕೆ ಹಾಗೂ ಬಂದರು ಇಲಾಖೆಗಳನ್ನು ಹಂಚಿಕೆ ಮಾಡಬಹುದು. ಕಾರ್ಮಿಕ ಇಲಾಖೆಯು ಸಂತೋಷ್ ಎಸ್. ಲಾಡ್ ಅವರ ಹೆಗಲೇರಲಿದ್ದು, ಶಿವರಾಜ ತಂಗಡಗಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ನಿರ್ವಹಿಸಬಹುದು.
ಟಿ. ರಘುಮೂರ್ತಿ ಅವರಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಿಗುವ ಸಂಭವವಿದೆ. ಪ್ರಸ್ತುತ ಸಂಪುಟದ ಒಟ್ಟು ಬಲ 33ಕ್ಕೆ ಏರಿಕೆಯಾಗಿದ್ದು, ಇಲಾಖೆಗಳ ಅಧಿಕೃತ ಹಂಚಿಕೆಯ ಅಧಿಕೃತ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.
Topics
ಸಂಬಂಧಿತ ಸುದ್ದಿಗಳು
karnataka
ಕರಾವಳಿಯಲ್ಲಿ ಮತ್ತೆ ಅಬ್ಬರಿಸಲಿದೆ ಮಳೆ: ಫೆಸಿಪಿಕ್ ಸಾಗರದಲ್ಲಿ ಪ್ರಬಲ ಚಂಡಮಾರುತ, ಅರಬ್ಬಿ ಸಮುದ್ರದಲ್ಲಿ ಮುಂಗಾರು ದುರ್ಬಲ
karnataka
ರಾಜ್ಯದ ಪಡಿತರದಾರರಿಗೆ ಗುಡ್ನ್ಯೂಸ್ : ಒಮ್ಮೆಲೆ 2 ತಿಂಗಳ ರೇಷನ್, ಕಳ್ಳ ಸಾಗಣಿ ತಡೆಗೆ ಹೈ ಅಲರ್ಟ್
karnataka
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ : ಸಂಚಲನ ಮೂಡಿಸಿದ ಸಿದ್ದು ಗೈರು, ಶಾಸಕರ ರಾಜೀನಾಮೆ ಪರ್ವ
karnataka

