ಗೃಹಲಕ್ಷ್ಮಿ ಯೋಜನೆ: ಆಗಸ್ಟ್ ತಿಂಗಳ ಕಂತಿನ ಹಣ 2000 ರೂ. ಬಂದಿಲ್ವಾ : ಮೊಬೈಲ್‌ನಲ್ಲೇ ಹೀಗೆ ಸ್ಟೇಟಸ್ ಚೆಕ್ ಮಾಡಿ
'ಗೃಹಲಕ್ಷ್ಮಿ ಯೋಜನೆ' (Gruhalakshmi Yojane) ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಆಗಸ್ಟ್ ತಿಂಗಳ ಕಂತಿನ 2,000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ
By Arun Gundmi | ಅರುಣ್ ಗುಂಡ್ಮಿ · Editor-in-Chief
2 min read
ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ ಯೋಜನೆ' (Gruhalakshmi Yojane) ಕೋಟ್ಯಾಂತರ ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಆಗಸ್ಟ್ ತಿಂಗಳ ಕಂತಿನ 2,000 ರೂಪಾಯಿ ಹಣವನ್ನು ರಾಜ್ಯ ಸರಕಾರ ಹಂತ-ಹಂತವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT - Direct Benefit Transfer) ಮಾಡಲು ಚಾಲನೆ ಕೊಟ್ಟಿದೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತಿದ್ದಂತೆಯೇ ಎಸ್‌ಎಂಎಸ್ ಮೂಲಕವೂ ಹಣ ಜಮೆ ಆಗಿರುವ ಮಾಹಿತಿಯನ್ನು ನೀಡಲಾಗುತ್ತಿದೆ. ಒಂದೊಮ್ಮೆ ನೀವು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದು, ನಿಮ್ಮ ಖಾತೆಗೆ ಇನ್ನೂ ಹಣ ಜಮೆ ಆಗದೇ ಇದ್ದಲ್ಲಿ, ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮೊಬೈಲ್‌ನಲ್ಲಿಯೇ ಹಣ ಜಮೆ ಆಗಿರುವ ಸ್ಟೇಟಸ್ ಚೆಕ್ ಮಾಡಬಹುದು. ಒಂದೊಮ್ಮೆ ಹಣ ಜಮೆ ಆಗಿಲ್ಲದೇ ಇದ್ರೆ ಏನು ಮಾಡಬೇಕು ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಆಗಸ್ಟ್ ತಿಂಗಳ ಹಣ ಬಿಡುಗಡೆ: ನಿಮ್ಮ ಖಾತೆಗೆ ಬಂದಿದೆಯೇ ?
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಬ್ಯಾಂಕ್ ವಿಲೀನದ ಪ್ರಕ್ರಿಯೆಗಳಿಂದಾಗಿ ಕೆಲವು ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿರುವುದು ವಿಳಂಭವಾಗಬಹುದು. ನೀವು ಮನೆಯಲ್ಲಿಯೇ ಕುಳಿತು ಯಾವುದೇ ಸರಕಾರಿ ಕಚೇರಿಗೆ ಅಲೆಯದೆಯೇ ಹಣ ವರ್ಗಾವಣೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. .
ಮೊಬೈಲ್‌ನಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ನಿಮ್ಮ ಮೊಬೈಲ್ ಬಳಸಿ 'DBT Karnataka' ಆ್ಯಪ್ ಮೂಲಕ ಹಣ ಜಮೆಯಾದ ವಿವರಗಳನ್ನು ಅತ್ಯಂತ ಸುಲಭವಾಗಿ ಪರಿಶೀಲನೆ ಮಾಡಬಹುದಾಗಿದೆ.
DBT ಆ್ಯಪ್ ಡೌನ್‌ಲೋಡ್ ಮಾಡಿ: ನೀವು ಡಿಬಿಟಿ ಚೆಕ್ ಮಾಡಬೇಕು ಅನ್ನೋದಾದ್ರೆ ಮೊದಲು ಗೂಗಲ್ ಪ್ಲೇಸ್ಟೋರ್‌ನಿಂದ DBT Karnataka ಅಧಿಕೃತ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.
ಆಧಾರ್ ಸಂಖ್ಯೆ ನಮೂದಿಸಿ: ಆಪ್ ಡೌನ್ ಲೋಡ್ ಆದನಂತರದಲ್ಲಿ ಆ್ಯಪ್ ಓಪನ್ ಮಾಡಿ, ನಂತರ ಯಜಮಾನಿಯ ಆಧಾರ್ ಸಂಖ್ಯೆ (Aadhaar Number) ನಮೂದಿಸಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ ಲಾಗಿನ್ ಆಗಿ.
M-PIN ಕ್ರಿಯೇಟ್ ಮಾಡಿ: ಭದ್ರತೆಗಾಗಿ 4 ಅಂಕಿಗಳ ಹೊಸ M-PIN ಸೆಟ್ ಮಾಡಿ.
Payment Status ವಿಭಾಗಕ್ಕೆ ಹೋಗಿ: ಆ್ಯಪ್‌ನ ಹೋಮ್ ಪೇಜ್‌ನಲ್ಲಿ ಕಾಣಿಸುವ 'Payment Status' ಮೇಲೆ ಕ್ಲಿಕ್ ಮಾಡಿ.
ಗೃಹಲಕ್ಷ್ಮಿ ಯೋಜನೆ ಆಯ್ಕೆ ಮಾಡಿ: ಅಲ್ಲಿ ಸರ್ಕಾರದ ವಿವಿಧ
ಯೋಜನೆಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ 'Gruhalakshmi Status' ಆಯ್ಕೆಯನ್ನು ಆಯ್ದುಕೊಳ್ಳಿ.
ನಿಮಗೆ ಯಾವ ತಿಂಗಳ ಗೃಹಲಕ್ಷ್ಮೀ ಹಣ ಜನೆ ಆಗಿದೆ ಅನ್ನೋ ಕುರಿತು ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗುತ್ತದೆ. ಬ್ಯಾಂಕ್ ಹೆಸರು, ಯಾವ ಕಂತು, ಯುಟಿಆರ್ ಸಂಖ್ಯೆ (UTR Number) ಮತ್ತು ಹಣ ಜಮೆಯಾದ ದಿನಾಂಕ ಒಳಗೊಂಡಂತೆ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ಬರದಿದ್ದರೆ ತಕ್ಷಣ ಈ 3 ಕೆಲಸಗಳನ್ನು ಮಾಡಿ
ಒಂದೊಮ್ಮೆ ನಿಮಗೆ ಹಣ ವರ್ಗಾವಣೆಯ ಕುರಿತು ಸ್ಟೇಟಸ್ ಚೆಕ್ ಮಾಡಿದಾಗ 'Payment Failed' ಅಥವಾ ಹಣ ಜಮೆ ಆಗದಿರುವುದು ಕಂಡುಬಂದರೆ, ಕೂಡಲೇ ನೀವು ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು.
ಆಧಾರ್ - ಬ್ಯಾಂಕ್ ಖಾತೆ ಲಿಂಕ್ (NPCI Mapping): ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸರಿಯಾಗಿ ಲಿಂಕ್ ಆಗಿದೆಯೇ ಮತ್ತು NPCI Ceding ಸಕ್ರಿಯವಾಗಿದೆಯೇ (Active) ಅನ್ನೋದನ್ನು ನೀವು ಖಚಿತಪಡಿಸಿಕೊಳ್ಳಿ. ಬ್ಯಾಂಕ್‌ಗೆ ತೆರಳಿ 'DBT Enable' ಮಾಡಲು ಅರ್ಜಿ ನೀಡಿ.
ಇ-ಕೆವೈಸಿ (e-KYC) ನವೀಕರಣ: ಪಡಿತರ ಚೀಟಿ (Ration Card) ಮತ್ತು ಬ್ಯಾಂಕ್ ಖಾತೆಯಲ್ಲಿ ಹೆಸರು ಅಥವಾ ವಿಳಾಸ ವ್ಯತ್ಯಾಸವಿದ್ದರೆ, ನಿಮ್ಮ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ e-KYC ಪೂರ್ಣಗೊಳಿಸಿ.
ಪಡಿತರ ಚೀಟಿ ತಿದ್ದುಪಡಿ: ಒಂದೊಮ್ಮೆ ನಿಮ್ಮ ಮನೆಯ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಯಜಮಾನಿ ನಮೂದಿಸಿರುವ ವ್ಯಕ್ತಿಯೇ ಯೋಜನೆಗೆ ಅರ್ಜಿ ಸಲ್ಲಿಸಿರಬೇಕು.ಯಜಮಾನಿಯ ಹೆಸರಿನಲ್ಲಿ ಬದಲಾವಣೆ ಕಂಡು ಬಂದ್ರೆ ತಕ್ಷಣ ಆಹಾರ ಇಲಾಖೆಯ ಪೋರ್ಟಲ್‌ನಲ್ಲಿ ತಿದ್ದುಪಡಿ ಮಾಡಿಸಿ.
ಗೃಹಲಕ್ಷ್ಮೀ ಯೋಜನೆಯ ಮೂಲಕ ಸರಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ತಾಂತ್ರಿಕ ಕಾರಣದಿಂದಾಗಿ ನಿಮಗೆ ತಕ್ಷಣಕ್ಕೆ ಹಣ ವರ್ಗಾವಣೆ ಆಗದೇ ಇರಬಹುದು ಆದರೆ ತಾಂತ್ರಿಕ ಸಮಸ್ಯೆ ಪರಿಹಾರ ಆದ ನಂತರದಲ್ಲಿ ಬಾಕಿ ಹಣ ಕೂಡ ವರ್ಗಾವಣೆ ಆಗಲಿದೆ. ನೀವು ನಿಮ್ಮ NPCI ಲಿಂಕಿಂಗ್ ಮತ್ತು e-KYC ಸ್ಥಿತಿಯನ್ನು ಪರಿಶೀಲಿಸಿಕೊಳ್ಳಿ.
Topics

