SSLC, PUC ಪಾಸಾದ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್ ! ರೈಲ್ವೆಯಲ್ಲಿ 1,688 ಹುದ್ದೆಗಳಿಗೆ ನೇಮಕಾತಿ ಪ್ರಕಟ !
ಆರ್‌ಆರ್‌ಬಿ 1,688 ಎನ್‌ಟಿಪಿಸಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಈ ದಿನದಿಂದ ಅರ್ಜಿ ಸಲ್ಲಿಸಿ!
By Archana V Bhat | ಅರ್ಚನಾ ವಿ ಭಟ್
1 min read
ರೈಲ್ವೆ ನೇಮಕಾತಿ ಮಂಡಳಿ (RRB) ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವ ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ನೀಡಿದೆ. ನಾನ್ ಟಕ್ನಿಕಲ್ ಪಾಪ್ಯುಲರ್ ಕ್ಯಾಟೆಗರಿ (NTPC)ಪದವಿಪೂರ್ವ ವಿಭಾಗದಲ್ಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಆರ್‌ಆರ್‌ಬಿ 1,688 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ಈ ನೇಮಕಾತಿಯಲ್ಲಿ ಟ್ರೇನ್ ಕ್ಲರ್ಕ್, ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್‌ನಂತಹ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 15 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 13 ಎಂದು ಆರ್‌ಆರ್‌ಬಿ ಕಾಲಾವಕಾಶ ನೀಡಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂದು ನೋಡೋಣ.
ವಯೋಮಿತಿ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷದ ಒಳಗೆ ಇರಬೇಕು ಎಂದು ಆರ್‌ಆರ್‌ಬಿ ಸ್ಪಷ್ಟಪಡಿಸಿದೆ.
ಶೈಕ್ಷಣಿಕ ಅರ್ಹತೆ
ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹತ್ತನೇ ತರಗತಿ / ಪಿಯುಸಿ ಅಥವಾ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ
ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 19,900 ರೂ. ದಿಂದ 21,700 ರೂ ವರೆಗೆ ನೀಡಲಾಗುವುದು.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 250 ರೂ. ಪಾವತಿಸಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.
ಆಯ್ಕೆ ಹೇಗೆ?
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಹಾಗೂ ದಾಖಲೆ ಪರಿಶೀಲನೆ ಈ ಎರಡು ರೀತಿಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಆರ್‌ಆರ್‌ಬಿಯ ಎನ್‌ಟಿಪಿಸಿ ಹದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 15 ರಿಂದ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
Topics
ಸಂಬಂಧಿತ ಸುದ್ದಿಗಳು
job
10ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್ ! ಇಂಡಿಯನ್ ಕೋಸ್ಟ್ ಗಾರ್ಡ್ನಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ !
job
ಯುಪಿಎಸ್ಸಿ ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆ 2027 ಅಧಿಸೂಚನೆ ಪ್ರಕಟ ! 480 ಖಾಲಿ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ !
job
CRPF ನಲ್ಲಿ 521 ಕ್ರೀಡಾ ಕೋಟಾ ಹುದ್ದೆಗಳಿಗೆ ನೇಮಕಾತಿ ಪ್ರಕಟ ! ಅರ್ಜಿ ಸಲ್ಲಿಸಲು ಯಾರು ಅರ್ಹರು?
job

