ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಬಿಗ್ಶಾಕ್ : ಅಕ್ಟೋಬರ್ 1 ರಿಂದ ಗೃಹಬಳಕೆ ವಸ್ತುಗಳ ಬೆಲೆ ಏರಿಕೆ
ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಬಿಕ್ಕಟ್ಟು ಮತ್ತು ಕಚ್ಚಾ ವಸ್ತುಗಳ ಕೊರತೆಯೇ ಈ ಹಠಾತ್ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮ ಬಂದರೆ ಸಾಕು, ಚೆನ್ನಾಗಿ ಹಬ್ಬ ಮಾಡಬೇಕು ಅನ್ನೋ ಖುಷಿ ಒಂದೆಡೆಯಾದರೆ ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಖರೀದಿಸಲು ಯೋಜಿಸುವ ಗ್ರಾಹಕರು ಇನ್ನೊಂದು ಕಡೆ. ಆದರೆ ಈ ಬಾರಿ ಗ್ರಾಹಕರಿಗೆ ಅಕ್ಟೋಬರ್ 1ರಿಂದ ಬೆಲೆ ಏರಿಕೆಯ ಭಾರಿ ಆಘಾತ ಎದುರಾಗಲಿದೆ. ಮಾರುಕಟ್ಟೆಯ ಇತ್ತೀಚಿನ ವರದಿಗಳ ಪ್ರಕಾರ, ಟಿವಿ, ಏರ್ ಕಂಡೀಷನರ್, ವಾಷಿಂಗ್ ಮೆಷಿನ್ ಹಾಗೂ ರೆಫ್ರಿಜರೇಟರ್ ಸೇರಿದಂತೆ ಹಲವು ಪ್ರಮುಖ ಡಿಜಿಟಲ್ ಉತ್ಪನ್ನಗಳ ಬೆಲೆಯು ಶೇಕಡಾ 5ರಿಂದ 8ರಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಪ್ರಸಕ್ತ ವರ್ಷದಲ್ಲಿ ಎಲೆಕ್ಟ್ರಾನಿಕ್ಸ್ ವಲಯದ ಕಂಪನಿಗಳು ಕೈಗೊಳ್ಳುತ್ತಿರುವ ಮೂರನೇ ಸುತ್ತಿನ ದರ ಪರಿಷ್ಕರಣೆ ಇದಾಗಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.
ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಬಿಕ್ಕಟ್ಟು ಮತ್ತು ಕಚ್ಚಾ ವಸ್ತುಗಳ ಕೊರತೆಯೇ ಈ ಹಠಾತ್ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಉಪಕರಣಗಳ ತಯಾರಿಕೆಗೆ ಅತ್ಯಗತ್ಯವಾಗಿ ಬೇಕಾಗುವ ತಾಮ್ರ, ಅಲ್ಯೂಮಿನಿಯಂ ಹಾಗೂ ಉಕ್ಕಿನ ದರಗಳು ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿವೆ. ಇದರೊಂದಿಗೆ, ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ರಾಜತಾಂತ್ರಿಕ ಉದ್ವಿಗ್ನತೆಯು ಅಂತಾರಾಷ್ಟ್ರೀಯ ಸರಕು ಸಾಗಣೆ ವೆಚ್ಚವನ್ನು ಹೆಚ್ಚಿಸಿದೆ. ಕರೆನ್ಸಿ ವಿನಿಮಯ ದರಗಳಲ್ಲಿನ ಏರಿಳಿತದಿಂದಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಅತ್ಯಾಧುನಿಕ ಬಿಡಿಭಾಗಗಳ ವೆಚ್ಚವೂ ದುಬಾರಿಯಾಗಿದ್ದುವಿಶೇಷವಾಗಿ ಟಿವಿ ವಿಭಾಗದಲ್ಲಿ ಈ ಬೆಲೆ ಏರಿಕೆಯ ಪ್ರಮಾಣ ದಟ್ಟವಾಗಿರಲಿದ್ದು, ಸಣ್ಣ ಪರದೆಯ ಟಿವಿಗಳ ದರ ಶೇಕಡಾ 20ರವರೆಗೆ ಹಾಗೂ ದೊಡ್ಡ ಪರದೆಯ ಟಿವಿಗಳ ದರ ಶೇಕಡಾ 10ರಷ್ಟು ಹೆಚ್ಚಾಗುವ ಅಂದಾಜಿದೆ. ಬ್ಲೂ ಸ್ಟಾರ್, ಗೋದ್ರೇಜ್, ಡೈಕಿನ್ ಹಾಗೂ ಹೈಯರ್‌ನಂತಹ ದೈತ್ಯ ಕಂಪನಿಗಳು ಈಗಾಗಲೇ ಬೆಲೆ ಏರಿಕೆಯ ಸುಳಿವು ನೀಡಿವೆ. ಆದರೆ, ಬಹುತೇಕ ವಿತರಕರು ಹಬ್ಬದ ಸೀಸನ್‌ಗಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲೇ ಹಳೆಯ ದರದಲ್ಲಿ ಗರಿಷ್ಠ ದಾಸ್ತಾನು ಮಾಡಿಕೊಂಡಿರುವುದರಿಂದ, ಅಕ್ಟೋಬರ್ ಆರಂಭದ ದಿನಗಳಲ್ಲಿ ಗ್ರಾಹಕರಿಗೆ ಹಳೆಯ ಬೆಲೆಯಲ್ಲೇ ವಸ್ತುಗಳು ಸಿಗುವ ಸಣ್ಣದೊಂದು ಸಮಾಧಾನಕರ ಅವಕಾಶವೂ ಇದೆ. ಆದಾಗ್ಯೂ, ಹೊಸ ಸ್ಟಾಕ್ ಮಾರುಕಟ್ಟೆಗೆ ಬರುತ್ತಿದ್ದಂತೆ ಹಬ್ಬದ ಶಾಪಿಂಗ್ ವೆಚ್ಚ ಹೆಚ್ಚಾಗುವುದು ಗ್ಯಾರಂಟಿ., ತಯಾರಿಕಾ ಸಂಸ್ಥೆಗಳು ಈ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ನಿರ್ಧರಿಸಿವೆ.
Topics

