ರೈಲ್ವೇ ಇಲಾಖೆಯಿಂದ ದಸರಾ, ದೀಪಾವಳಿ ಬಂಪರ್ : ಮುಂಬೈ - ಬೆಂಗಳೂರು ವಿಶೇಷ ರೈಲು ಸಂಪರ್ಕ ..!
ಈ ವಿಶೇಷ ರೈಲುಗಳು ಒಟ್ಟು 7 ಸುತ್ತುಗಳ ಕಾಲ ಸಂಚರಿಸಲಿದ್ದು, ಇದರಲ್ಲಿ ಸಂಪೂರ್ಣವಾಗಿ ಎಸಿ ಮತ್ತು ಲಗೇಜ್ ಬೋಗಿ ಸೇರಿದಂತೆ ಒಟ್ಟು 22 ಆಧುನಿಕ ಬೋಗಿಗಳಿರಲಿವೆ.
ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಮರಳುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ದಸರಾ, ದೀಪಾವಳಿ ಸಂದರ್ಭದಲ್ಲಿ ಉಂಟಾಗುವ ಅತಿಯಾದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮುಂಬೈ ಮತ್ತು ಬೆಂಗಳೂರು ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲು ಮಧ್ಯ ರೈಲ್ವೆ ನಿರ್ಧರಿಸಿದೆ.
ರೈಲು ಸಂಖ್ಯೆ 01013 ಮುಂಬೈ – ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 10ರಿಂದ ನವೆಂಬರ್ 21ರವರೆಗೆ ಪ್ರತಿ ಶನಿವಾರ ರಾತ್ರಿ 12:35ಕ್ಕೆ ಮುಂಬೈನಿಂದ ಹೊರಡಲಿದ್ದು, ಅದೇ ದಿನ ರಾತ್ರಿ 11:55ಕ್ಕೆ ಬೆಂಗಳೂರನ್ನು ತಲುಪಲಿದೆ. ಇನ್ನು ಮರುಪ್ರಯಾಣದಲ್ಲಿ ರೈಲು ಸಂಖ್ಯೆ 01014 ಬೆಂಗಳೂರು – ಮುಂಬೈ ವಿಶೇಷ ರೈಲು ಅಕ್ಟೋಬರ್ 11ರಿಂದ ನವೆಂಬರ್ 22ರವರೆಗೆ ಪ್ರತಿ ಭಾನುವಾರ ಮುಂಜಾನೆ 4:30ಕ್ಕೆ ಬೆಂಗಳೂರಿನಿಂದ ಹೊರಟು, ಮರುದಿನ ಮುಂಜಾನೆ 4:05ಕ್ಕೆ ಮುಂಬೈ ತಲುಪಲಿದೆ.
ಈ ವಿಶೇಷ ರೈಲುಗಳು ಒಟ್ಟು 7 ಸುತ್ತುಗಳ ಕಾಲ ಸಂಚರಿಸಲಿದ್ದು, ಇದರಲ್ಲಿ ಸಂಪೂರ್ಣವಾಗಿ ಎಸಿ ಮತ್ತು ಲಗೇಜ್ ಬೋಗಿ ಸೇರಿದಂತೆ ಒಟ್ಟು 22 ಆಧುನಿಕ ಬೋಗಿಗಳಿರಲಿವೆ. ಮುಖ್ಯವಾಗಿ ಈ ರೈಲು ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಅರಸೀಕೆರೆ ಹಾಗೂ ತುಮಕೂರು ಸೇರಿದಂತೆ ಮಹಾರಾಷ್ಟ್ರದ ಪುಣೆ, ದಾದರ್ ಮತ್ತು ಕಲ್ಯಾಣ್‌ನಂತಹ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಇದರಿಂದಾಗಿ ಉಭಯ ರಾಜ್ಯಗಳ ನಡುವೆ ಹಬ್ಬಕ್ಕೆ ಸಂಚರಿಸುವ ಸಾವಿರಾರು ಜನರಿಗೆ ಆಸನಗಳ ಕೊರತೆ ಎದುರಾಗುವುದಿಲ್ಲ. ಪ್ರಯಾಣಿಕರು ಮುಂಚಿತವಾಗಿಯೇ ತಮ್ಮ ಟಿಕೆಟ್ ಕಾಯ್ದಿರಿಸಿಕೊಂಡು ಸುಲಭವಾಗಿ ಪ್ರಯಾಣಿಸಬಹುದಾಗಿದೆ.
Topics

