ವಸತಿ ಯೋಜನೆಯಡಿ ಉಡುಪಿಗೆ ಶೂನ್ಯ ಮನೆ : ಕರಾವಳಿಗೆ ಅನ್ಯಾಯವೆಸಗಿತಾ ಕರ್ನಾಟಕ ಸರಕಾರ

ನಗರ ಭಾಗದ ಆರ್ಥಿಕ ದುರ್ಬಲ ವರ್ಗದವರಿಗೆ (EWS/LIG) ಗೃಹ ಸಾಲದ ಬಡ್ಡಿ ಮೇಲಿನ ಸಬ್ಸಿಡಿ (CLSS) ಹಾಗೂ ಮನೆ ನಿರ್ಮಾಣದ ಸಹಾಯಧನ ನೀಡಲಾಗುತ್ತದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

2 min read

WhatsAppPost
housing scheme udupi zero houses coastal karnataka injustice
housing scheme udupi zero houses coastal karnataka injustice

ಉಡುಪಿ : ವಸತಿ ಯೋಜನೆಯ ಮೂಲಕ ಸರಕಾರ ವರ್ಷಂಪ್ರತಿ ನೂರಾರು ಮನೆಗಳನ್ನು ಬಡವರು, ಮಧ್ಯಮ ವರ್ಗದವರಿಗಾಗಿ ನಿರ್ಮಾಣ ಮಾಡುತ್ತಿದೆ. ಆದರೆ ಈ ಬಾರಿ ಪ್ರಾಕೃತಿಕ ವಿಕೋಪ ಹೊರಪಡಿಸಿ ಅರ್ಹ ಬಡ ಜನರಿಗೆ ನಿವೇಶನ ಆಗಲಿ, ವಿವಿಧ ವಸತಿ ಯೋಜನೆಯಡಿಯಲ್ಲಿ ಮನೆ ಮಂಜೂರಾತಿ ಮಾಡದೇ ಇರುವುದು ಸರಕಾರಿ ಕರಾವಳಿಗರಿಗೆ ಮಾಡಿದ ಘೋರ ಅನ್ಯಾಯವಾಗಿದೆ.

ವಿಧಾನಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಕಾರ್ಕಳ ಶಾಸಕರಾಗಿರುವ ವಿ. ಸುನಿಲ್‌ ಕುಮಾರ್‌ ಅವರು, ಕಳೆದ 3 ವರ್ಷಗಳಿಂದಲೂ ಅಂದರೆ, 2023 ರಿಂದ 2026 ರ ವರೆಗೆ ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ಸಂಖ್ಯೆ ಎಷ್ಟು.? ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಗುರಿ ಮತ್ತು ಮಂಜೂರು ಮಾಡಿದ ಸಂಖ್ಯೆ ಎಷ್ಟು ? ಅನ್ನೋ ಪ್ರಶ್ನೆಗೆ ಸರಕಾರ ಉತ್ತರ ನೀಡಿದೆ.

ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಒಟ್ಟು 402 ಮನೆಗಳನ್ನು ಮಂಜೂರು ಮಾಡಿದೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಒಟ್ಟು 300 ಮನೆ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಒಟ್ಟು 102 ಮನೆ ಬಿಡುಗಡೆ ಆಗಿದೆ. ಅದ್ರಲ್ಲೂ ಕಾರ್ಕಳ ಕ್ಷೇತ್ರಕ್ಕೆ ಕಳೆದ ಮೂರು ವರ್ಷಗಳಿಂದಲೂ ಸರಕಾರ ಬಿಡುಗಡೆ ಮಾಡಿರುವ ಮನೆಗಳ ಸಂಖ್ಯೆ ಕೇವಲ 8.

ಕರ್ನಾಟಕ ಸರಕಾರ ಬಿಡುಗಡೆ ಮಾಡಿರುವ ಎಲ್ಲಾ ಮನೆಗಳನ್ನು ಪ್ರಾಕೃತಿಕ ವಿಕೋಪ ನಿರ್ಹವಣೆಯ ಅಡಿಯಲ್ಲಿ ಸಂಪೂರ್ಣ ಹಾನಿಗೆ ಒಳಗಾಗಿರುವ ಮನೆಗಳನ್ನಷ್ಟೇ ಪುನರ್‌ ನಿರ್ಮಾಣ ಮಾಡಿದೆ. ಆದರೆ ಪ್ರಾಕೃತಿಕ ವಿಕೋಪ ಹೊರತು ಪಡಿಸಿ ಯಾವುದೇ ಹೊಸ ಮನೆಗಳನ್ನೂ ಸರಕಾರ ನಿರ್ಮಾಣ ಮಾಡಿಲ್ಲ.

ಬಡವರು, ಮಧ್ಯಮ ವರ್ಗದವರಿಗಾಗಿ ವಸತಿ ಯೋಜನೆಯ ಅಡಿಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಮನೆಗಳನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ನೂರಾರು ಮಂದಿ ಬಡವರು ಮನೆ ನಿರ್ಮಿಸಿ ಕೊಡುವಂತೆ ರಾಜ್ಯ ಸರಕಾರಕ್ಕೆ ವಸತಿ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದಲೂ ಮನೆ ನಿರ್ಮಾಣಕ್ಕಾಗಿ ಕಾಯುತ್ತಿದ್ದವರಿಗೆ ಇದೀಗ ನಿರಾಸೆಯಾಗಿದೆ.

ಕರ್ನಾಟಕದಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಗಳು ಯಾವುದು ?

ಕರ್ನಾಟಕ ಸರಕಾರವು ರಾಜೀವ್ ಗಾಂಧಿ ವಸತಿ ನಿಗಮ (RGRHCL) ಹಾಗೂ ಕರ್ನಾಟಕ ವಸತಿ ಮಂಡಳಿ (KHB) ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣದ ಜೊತೆಗೆ ಆರ್ಥಿಕ ಸಹಾಯಧನವನ್ನು ನೀಡುವ ಸಲುವಾಗಿ ಹಲವು ವಸತಿ ಯೋಜನೆಗಳನ್ನು ಜಾರಿಗೆ ತಂದಿದೆ.

ಬಸವ ವಸತಿ ಯೋಜನೆ : ಗ್ರಾಮೀಣ ಪ್ರದೇಶದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ (BPL)ಕುಟುಂಬಗಳಿಗೆ, ವಿಶೇಷವಾಗಿ SC,ST,OBC ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೆ ಸ್ವಂತ ಜಾಗದಲ್ಲೂ ಮನೆ ನಿರ್ಮಿಸಿ ಕೊಡಲು ಆರ್ಥಿಕ ನೆರವು ನೀಡುತ್ತಿದೆ.

ಡಾ. ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆ (ಗ್ರಾಮೀಣ): ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಗರಿಷ್ಠ ಧನಸಹಾಯ ನೀಡುವ ವಿಶೇಷ ಯೋಜನೆ.

ದೇವರಾಜ್ ಅರಸು ವಸತಿ ಯೋಜನೆ (ಗ್ರಾಮೀಣ ): ಆರ್ಥಿಕವಾಗಿ ನೊಂದ, ವಿಶೇಷ ಚೇತನರು, ಶಾರೀರಿಕವಾಗಿ ಅಸಮರ್ಥರು ಹಾಗೂ ಅಲ್ಪಸಂಖ್ಯಾತ ವರ್ಗದ ಕುಟುಂಬಗಳಿಗೆ ಮನೆ ನಿರ್ಮಿಸಲು ಈ ಯೋಜನೆಯಡಿ ಸಹಾಯಧನ ಸಿಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ (PMAY-G): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾಗಿದ್ದು, ಗ್ರಾಮೀಣ ಬಡವರಿಗೆ ಪಕ್ಕಾ ಮನೆ ನಿರ್ಮಿಸಲು ಅನುದಾನ ಒದಗಿಸಲಾಗುತ್ತದೆ.

ನಗರ ವಸತಿ ಯೋಜನೆಗಳು (Urban Housing Schemes)

ವಾಜಪೇಯಿ ನಗರ ವಸತಿ ಯೋಜನೆ: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ಬಡ ಕುಟುಂಬಗಳಿಗೆ (EWS/LIG) ಕೈಗೆಟುಕುವ ದರದಲ್ಲಿ ಮನೆ ಕಟ್ಟಿಕೊಳ್ಳಲು ಅಥವಾ ಖರೀದಿಸಲು ಸಹಾಯಧನ ಒದಗಿಸುತ್ತದೆ.

ಡಾ. ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆ (ನಗರ): ನಗರ ಪ್ರದೇಶದ SC/ST ಫಲಾನುಭವಿಗಳಿಗೆ ನಿವೇಶನ ಅಥವಾ ಮನೆ ಕಟ್ಟಲು ಆರ್ಥಿಕ ಸಹಾಯ ಒದಗಿಸುವ ಯೋಜನೆ.

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆ: ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ನಿವಾಸಿಗಳಿಗೆ ಬಹುಮಹಡಿ (Multi-storey) ಫ್ಲಾಟ್‌ಗಳನ್ನು ರಿಯಾಯಿತಿ ದರದಲ್ಲಿ ನೀಡುವ ಬೃಹತ್ ಯೋಜನೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ (PMAY-U): ನಗರ ಭಾಗದ ಆರ್ಥಿಕ ದುರ್ಬಲ ವರ್ಗದವರಿಗೆ (EWS/LIG) ಗೃಹ ಸಾಲದ ಬಡ್ಡಿ ಮೇಲಿನ ಸಬ್ಸಿಡಿ (CLSS) ಹಾಗೂ ಮನೆ ನಿರ್ಮಾಣದ ಸಹಾಯಧನ ನೀಡಲಾಗುತ್ತದೆ.

ಕರ್ನಾಟಕ ವಸತಿ ಮಂಡಳಿ (KHB) ಯೋಜನೆಗಳು ಕರ್ನಾಟಕ ವಸತಿ ಮಂಡಳಿಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭೂಸ್ವಾಧೀನ ಪಡಿಸಿಕೊಂಡು, ಅಭಿವೃದ್ಧಿಪಡಿಸಿದ ನಿವೇಶನ (Plots) ಹಾಗೂ ಸಿದ್ಧ ಮನೆಗಳನ್ನು (EWS, LIG, MIG, ಮತ್ತು HIG ವರ್ಗಗಳಿಗೆ ಅನುಗುಣವಾಗಿ) ಲಾಟರಿ ಹಾಗೂ ಇ-ಹರಾಜು (E-auction) ಮೂಲಕ ಸಾರ್ವಜನಿಕರಿಗೆ ನೀಡುತ್ತದೆ.

Topics

ಸಂಬಂಧಿತ ಸುದ್ದಿಗಳು