ಆಗುಂಬೆಯನ್ನೇ ಮಿರಿಸಿದ ಕುಂದಾಪುರದ ಹಕ್ಲಾಡಿ : ರಾಜ್ಯದಲ್ಲೇ ಗರಿಷ್ಠ ಮಳೆ, ಉಡುಪಿಗೆ ವರವಾದ ಪುಷ್ಯ ಮಳೆ
ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ತೀವ್ರವಾದ ಮಳೆ ಅಭಾವ ಎದುರಿಸುತ್ತಿದ್ದ ಕರಾವಳಿ ಭಾಗಕ್ಕೆ ಆಗಸ್ಟ್ ಆರಂಭದ ಈ ವರುಣನ ಆರ್ಭಟವು ದೊಡ್ಡ ವರದಾನವಾಗಿ ಪರಿಣಮಿಸಿದೆ.
ಉಡುಪಿ : ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅದ್ರಲ್ಲೂ ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಪುಷ್ಯ ಮಳೆಯು ಇಡೀ ಜಿಲ್ಲೆಯ ಮಳೆ ಕೊರತೆಯನ್ನು ಯಶಸ್ವಿಯಾಗಿ ನೀಗಿಸಿದೆ. ಇನ್ನು ಕುಂದಾಪುರದ ಹಕ್ಲಾಡಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಮಳೆಯಾಗಿದೆ.
ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ತೀವ್ರವಾದ ಮಳೆ ಅಭಾವ ಎದುರಿಸುತ್ತಿದ್ದ ಕರಾವಳಿ ಭಾಗಕ್ಕೆ ಆಗಸ್ಟ್ ಆರಂಭದ ಈ ವರುಣನ ಆರ್ಭಟವು ದೊಡ್ಡ ವರದಾನವಾಗಿ ಪರಿಣಮಿಸಿದೆ.
ಆಗಸ್ಟ್ 1 ರಿಂದ 4 ರವರೆಗಿನ ಕೇವಲ ನಾಲ್ಕು ದಿನಗಳ ಅವಧಿಯಲ್ಲಿಯೇ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 61 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ವರದಿ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣವನ್ನು ನೋಡಿದ್ರೆ, ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದಲ್ಲಿ ಬರೋಬ್ಬರಿ 189 ಮಿ.ಮೀ. ಮಳೆಯಾಗಿದೆ. ಇದು ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದ ಮಳೆಯಾಗಿದೆ.
ಇದರೊಂದಿಗೆ ಶಿವಮೊಗ್ಗದ ಆಗುಂಬೆಯಲ್ಲಿ 170 ಮಿ.ಮೀ. ಹಾಗೂ ದಕ್ಷಿಣ ಕನ್ನಡದ ಶಿರ್ತಾಡಿಯಲ್ಲಿ 133.5 ಮಿ.ಮೀ. ಭಾರಿ ಮಳೆಯಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ಕುಂದಾಪುರದ ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಜಿಲ್ಲೆಯ ದೈನಂದಿನ ಸರಾಸರಿ ಮಳೆ ಪ್ರಮಾಣವು 104.4 ಮಿ.ಮೀ.ಗೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ ಮಳೆಯ ಕೊರತೆಯನ್ನು ಎದುರಿಸಿದ್ರೂ ಕೂಡ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗಿದೆ. ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮವೊಂದರಲ್ಲೇ ಬರೋಬ್ಬರಿ 189 ಮಿ.ಮೀ. ಮಳೆಯಾಗಿದ್ದು, ಇದು ಇಡೀ ಕರ್ನಾಟಕ ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದ ಮಳೆಯಾಗಿದೆ.
ಇದರೊಂದಿಗೆ ಶಿವಮೊಗ್ಗದ ಆಗುಂಬೆಯಲ್ಲಿ 170 ಮಿ.ಮೀ. ಹಾಗೂ ದಕ್ಷಿಣ ಕನ್ನಡದ ಶಿರ್ತಾಡಿಯಲ್ಲಿ 133.5 ಮಿ.ಮೀ. ಭಾರಿ ಮಳೆಯಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ಕುಂದಾಪುರದ ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಜಿಲ್ಲೆಯ ದೈನಂದಿನ ಸರಾಸರಿ ಮಳೆ ಪ್ರಮಾಣವು 104.4 ಮಿ.ಮೀ.ಗೆ ಏರಿಕೆಯಾಗಿದೆ.
ಉಡುಪಿ ಮಾತ್ರವಲ್ಲದೆ ರಾಜ್ಯದ ಮಲೆನಾಡು ಹಾಗೂ ಇತರೆ ಭಾಗಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಆಗಸ್ಟ್ ಆರಂಭದಲ್ಲಿ ಉತ್ತಮ ಮಳೆಯಾಗುತ್ತಿದೆ.
ಆರಂಭದಲ್ಲಿ ಭತ್ತದ ನಾಟಿ ಹಾಗೂ ಬಿತ್ತನೆ ಕಾರ್ಯಗಳಿಗೆ ನೀರಿನ ಕೊರತೆಯಿಂದ ಕಂಗಾಲಾಗಿದ್ದ ಕರಾವಳಿಯ ರೈತರಿಗೆ ಈ ಪುಷ್ಯ ಮಳೆಯು ಹೊಸ ಭರವಸೆ ನೀಡಿದೆ. ನದಿಗಳು ಮರುಜೀವ ಪಡೆದಿದ್ದು, ಕೃಷಿ ಚಟುವಟಿಕೆಗಳು ಜಿಲ್ಲೆಯಾದ್ಯಂತ ಇದೀಗ ಚುರುಕುಗೊಂಡಿವೆ.
Topics
ಸಂಬಂಧಿತ ಸುದ್ದಿಗಳು
karnataka
ಕರಾವಳಿಯಲ್ಲಿ ಮತ್ತೆ ಅಬ್ಬರಿಸಲಿದೆ ಮಳೆ: ಫೆಸಿಪಿಕ್ ಸಾಗರದಲ್ಲಿ ಪ್ರಬಲ ಚಂಡಮಾರುತ, ಅರಬ್ಬಿ ಸಮುದ್ರದಲ್ಲಿ ಮುಂಗಾರು ದುರ್ಬಲ
karnataka
ರಾಜ್ಯದ ಪಡಿತರದಾರರಿಗೆ ಗುಡ್ನ್ಯೂಸ್ : ಒಮ್ಮೆಲೆ 2 ತಿಂಗಳ ರೇಷನ್, ಕಳ್ಳ ಸಾಗಣಿ ತಡೆಗೆ ಹೈ ಅಲರ್ಟ್
karnataka
ಸಿಎಂ ಡಿ.ಕೆ. ಶಿವಕುಮಾರ್ಗೆ ಹೊಸ ತಲೆನೋವು : ಯಾರಿಗೆ ಸಿಗಲಿದೆ ಯಾವ ಖಾತೆ ?
karnataka