ಕರ್ನಾಟಕದಲ್ಲಿ ಮುಂಗಾರು ಮುಕ್ತಾಯ : ಕರಾವಳಿಯಲ್ಲಿ ಸಂಜೆ ಬಾರಿ ಮಳೆ
ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 11ರಿಂದ ಕರ್ನಾಟಕ ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಕೆ ಆಗಲಿದೆ.
ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸುರಿಯುತ್ತಿದ್ದ ಮುಂಗಾರು ಮಳೆಯ ಆರ್ಭಟವು ಸದ್ಯ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಪ್ರಕೃತಿಯಲ್ಲಿ ಮಹತ್ವದ ಹವಾಮಾನ ಬದಲಾವಣೆಗಳು ಗೋಚರಿಸುತ್ತಿವೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 11ರಿಂದ ಕರ್ನಾಟಕ ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಕೆ ಆಗಲಿದೆ. ಅಲ್ಲದೇ ಅಕ್ಟೋಬರ್ 15ರ ಬಳಿಕ ವಾರ್ಷಿಕ ಹಿಂಗಾರು ಮಳೆಯು ಅಧಿಕೃತವಾಗಿ ಎಂಟ್ರಿ ಕೊಡುವ ಸಾಧ್ಯತೆಯಿದೆ.
ಪ್ರಸ್ತುತ ಮುನ್ಸೂಚನೆಯ ಅನ್ವಯ, ಕರಾವಳಿ ತೀರದ ಉಡುಪಿ, ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಧ್ಯಾಹ್ನದ ನಂತರ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದ್ದರೆ, ಉತ್ತರ ಕನ್ನಡದಲ್ಲಿ ಮೋಡಕವಿದ ವಾತಾವರಣವಿರಲಿದೆ.
ಇತ್ತ ಮಲೆನಾಡು ಮತ್ತು ಒಳನಾಡಿನ ಪ್ರಮುಖ ಪ್ರದೇಶಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ಹಾಗೂ ಮೈಸೂರು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಇಷ್ಟೇ ಅಲ್ಲದೇ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸದ್ಯಕ್ಕೆ ಯಾವುದೇ ಮಳೆಯ ಲಕ್ಷಣ ಗೋಚರಿಸುತ್ತಿಲ್ಲ, ಒಣ ಹವೆ ಮುಂದುವರಿಕೆ ಕಂಡು ಬಂದಿದೆ.
ವಿಜ್ಞಾನಿಗಳ ಪ್ರಕಾರ, ಅಕ್ಟೋಬರ್ 14ರ ಸುಮಾರಿಗೆ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಲಿರುವ ವಾಯುಮಂಡಲದ ಸುಳಿಗಳು ಮತ್ತು ತಿರುಗುವಿಕೆಯು ಈ ಹಿಂಗಾರು ಮಳೆಯ ತೀವ್ರತೆ ಹಾಗೂ ಸಕ್ರಿಯತೆಯನ್ನು ನಿರ್ಧರಿಸಲಿವೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ಸದ್ಯ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ, ಕೃಷಿ ಚಟುವಟಿಕೆಗಳ ಮುಂದಿನ ಹಂತಕ್ಕಾಗಿ ರಾಜ್ಯದ ರೈತ ಬಾಂಧವರು ಹಾಗೂ ಸಾರ್ವಜನಿಕರು ಮುಂಬರುವ ಹೊಸ ಹಿಂಗಾರು ಮಳೆಯ ಮುನ್ಸೂಚನೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇದು ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.
Topics
ಸಂಬಂಧಿತ ಸುದ್ದಿಗಳು
news
Premada Oorali OTT : ಪ್ರೇಮದ ಊರಲಿ ಮನೆಯಲ್ಲಿ ಕುಳಿತು ಸಿನಿಮಾ ನೋಡಿ : ಒಟಿಟಿ ಎಂಟ್ರಿ ಕೊಡಿದ ಸಿನಿಮಾ
news
WCL 2026 : ಯುವರಾಜ್ ಸಿಂಗ್ 6,6,6,6,6,6 ಆರ್ಭಟ : ಆಸ್ಟ್ರೇಲಿಯಾ ಚಾಂಪಿಯನ್ಸ್ ತತ್ತರ
news
Sigma Movie Review : ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ಸಿಗ್ಮಾ ಸಿನಿಮಾ ಬಿಡುಗಡೆ
news

