ಯಜಮಾನಿಯರೇ ಗಮನಿಸಿ : ಗೃಹಲಕ್ಷ್ಮೀ ಯೋಜನೆಯಲ್ಲಿ ಭಾರೀ ಬದಲಾವಣೆ
ಗೃಹಲಕ್ಷ್ಮೀ ಯೋಜನೆಯಲ್ಲಿ ಈ ಹಿಂದೆ ಇದ್ದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ನಿಯಮಗಳನ್ನು ಮರುಪರಿಶೀಲಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಯೋಜನೆಯಡಿ ಯಜಮಾನಿಯರಿಗೆ ದೊರೆಯುತ್ತಿದ್ದ ಮಾಸಿಕ ₹2,೦೦೦ ನೆರವನ್ನು ಇನ್ನು ಮುಂದೆ ಪಡೆಯಲು ಫಲಾನುಭವಿಗಳು ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ.
ಗೃಹಲಕ್ಷ್ಮೀ ಯೋಜನೆಯಲ್ಲಿ ಈ ಹಿಂದೆ ಇದ್ದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಕೇವಲ ಅರ್ಹರಿಗೆ ಮಾತ್ರವೇ ಆರ್ಥಿಕ ನೆರವು ಸಿಗುವಂತೆ ಮಾಡಲು ಇಲಾಖೆ ಶೀಘ್ರದಲ್ಲಿಯೇ ಮನೆ ಮನೆಗೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಿದೆ.
ಈ ಹೊಸ ನಿಯಮಾವಳಿಗಳ ಪ್ರಕಾರ, ಬ್ಯಾಂಕ್ ಖಾತೆಯ ವಿವರಗಳಲ್ಲಿ ದೊಡ್ಡ ಬದಲಾವಣೆ ತರಲಾಗಿದೆ. ಮುಖ್ಯವಾಗಿ, ಸಹಾಯಧನ ಪಡೆಯುವ ಮಹಿಳೆಯ ಖಾತೆಯು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲೇ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಜಂಟಿ ಖಾತೆಗಳಿಗೆ ಅವಕಾಶವಿರುವುದಿಲ್ಲ.
ಇಷ್ಟೇ ಅಲ್ಲಾ, ಸಾಲವನ್ನು ಹೊಂದಿರದ ವೈಯಕ್ತಿಕ ಉಳಿತಾಯ ಖಾತೆಯ ಸಂಖ್ಯೆಯನ್ನು ಮಾತ್ರವೇ ಗೃಹಲಕ್ಷ್ಮೀ ಯೋಜನೆಯ ಅರ್ಜಿಯಲ್ಲಿ ನಮೂದಿಸಬೇಕು. ಇತರ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗುವುದನ್ನು ತಪ್ಪಿಸುವ ಸಲುವಾಗಿ ಈ ತಂತ್ರ ಹೂಡಲಾಗಿದೆ.
ದಾಖಲೆಗಳ ವಿಚಾರಕ್ಕೆ ಬಂದರೆ, ಫಲಾನುಭವಿಗಳು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನೀಡುವುದು ಕಡ್ಡಾಯ. ಇದರೊಂದಿಗೆ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕೌಟುಂಬಿಕವಾಗಿ ಯಾರಾದ್ರೂ ನಿವೃತ್ತಿ ಪಿಂಚಣೆ ಪಡೆಯುತ್ತಿದ್ದರೆ ಆ ವಿವರಗಳನ್ನು ಸಮೀಕ್ಷಕರ ಮುಂದೆ ಸಲ್ಲಿಕೆ ಮಾಡಬೇಕು.
ಗಣತಿದಾರರು ಮನೆಗೆ ಭೇಟಿ ನೀಡಿದಾಗ ವಿಶೇಷ ಆ್ಯಪ್‌ನಲ್ಲಿ ಡಿಜಿಟಲ್ ಮಾಹಿತಿ ದಾಖಲಿಸುವುದರ ಜೊತೆಗೆ, ಫಲಾನುಭವಿಗಳು ಭೌತಿಕವಾದ ಆಫ್‌ಲೈನ್ ಅರ್ಜಿಯನ್ನೂ ಭರ್ತಿ ಮಾಡಿಕೊಡಬೇಕಾಗುತ್ತದೆ. ಈ ಸಮಗ್ರ ಪ್ರಕ್ರಿಯೆಯು ಸಾರ್ವಜನಿಕ ಹಣ ಪಾರದರ್ಶಕವಾಗಿ ಬಳಕೆಯಾಗಲು ನೆರವಾಗಲಿದೆ.
Topics
ಸಂಬಂಧಿತ ಸುದ್ದಿಗಳು
business
ಯುಪಿಐ ಶುಲ್ಕ ವರ್ತಕರಿಗೆ ಬಿಗ್ ರಿಲೀಫ್ : ಹಬ್ಬದ ಹೊತ್ತಲ್ಲಿ ಡಿಜಿಟಲ್ ಪಾವತಿ ಶುಲ್ಕಕ್ಕೆ ವಿನಾಯಿತಿ
business
ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ : ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಆಹ್ವಾನ
business
Repo Rate : ಮೂರು ವರ್ಷದ ಬಳಿಕ ರೆಪೋ ದರ ಏರಿಕೆ : ವಾಹನ, ಗೃಹ ಸಾಲದ ಇಎಂಐ ಹೆಚ್ಚಳ
business

