ಕಾರ್ಕಳ : ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು : ಸ್ನೇಹಿತನ ರಕ್ಷಣೆಗೆ ತೆರಳಿದ್ದಾತ ಸಾವು

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಮೀಪದಲ್ಲಿ ಇರುವ ಸ್ವರ್ಣ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
Karkala Two drown while swimming in Swarna river  man dies while trying to rescue friend
Karkala Two drown while swimming in Swarna river man dies while trying to rescue friend

ಕಾರ್ಕಳ : ಸ್ವರ್ಣ ನದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ರತ್ನಾಕರ ಎಂಬವರ ಪುತ್ರ ಹರ್ಷನ್‌ ಆಚಾರ್ಯ (22 ವರ್ಷ) ಮತ್ತು ವಿಶ್ವನಾಥ ಅವರ ಮಗ ಭರತ್‌ ಪೂಜಾರಿ (29 ವರ್ಷ) ಎಂಬವರೇ ನೀರು ಪಾಲಾದ ಯುವಕರು.

Karkala Two drown while swimming in Swarna river  man dies while trying to rescue friend  3
Karkala Two drown while swimming in Swarna river man dies while trying to rescue friend 3

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಮೀಪದಲ್ಲಿ ಇರುವ ಸ್ವರ್ಣ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಹರ್ಷನ್‌ ಮಂಗಳೂರಿನಲ್ಲಿ ಎಟಿಎಂ ಪಿನ್‌ ಜನರೇಟರ್‌ ಸಂಸ್ಥೆಯಲ್ಲಿ ಉದ್ಯೋಗ ಮಾಡಿಕೊಂಡಿದ್ದ. ಇನ್ನು ಭರತ್‌ ಕನ್‌ಸ್ಟ್ರಕ್ಷನ್‌ ಕೆಲಸ ಮಾಡುತ್ತಿದ್ದ.

ಒಟ್ಟು ನಾಲ್ವರು ಸ್ನೇಹಿತರು ಸ್ವರ್ಣ ನದಿಗೆ ಈಜಾಡುವುದಕ್ಕೆ ತೆರಳಿದ್ದರು. ಈಜುತ್ತಿದ್ದ ವೇಳೆಯಲ್ಲಿ ಭರತ್‌ ನೀರಿನ ಸುಳಿಯಲ್ಲಿ ಸುಲುಕಿದ್ದ, ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಹರ್ಷನ್‌ ಕೂಡಲೇ ಆತನ ರಕ್ಷಣೆಗೆ ಮುಂದಾಗಿದ್ದಾನೆ. ಆದರೆ ನೀರಿನ ಸುಳಿಗೆ ಸುಲಿದ ಹರ್ಷನ್‌ ಕೂಡ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

Karkala Two drown while swimming in Swarna river  man dies while trying to rescue friend  2
Karkala Two drown while swimming in Swarna river man dies while trying to rescue friend 2

ಹಿರ್ಗಾನ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಸುದ್ದಿ ತಿಳಿಯುತ್ತಿದ್ದಂತೆಯೇ ಕೂಡಲೇ ಕಾರ್ಕಳ ಪೊಲೀಸ್‌ ಠಾಣೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾರ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿದ್ದಾರೆ.

Karkala Two drown while swimming in Swarna river  man dies while trying to rescue friend  1
Karkala Two drown while swimming in Swarna river man dies while trying to rescue friend 1

ಕೊನೆಗೂ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಕಾರ್ಯಾಚರಣೆಯ ಬೆನ್ನಲ್ಲೇ ಇಬ್ಬರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಕಾರ್ಕಳ ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ಚಂದ್ರಶೇಖರ್‌, ರೂಪೇಶ್‌, ಸುರೇಶ್‌, ದಿನೇಶ್‌, ನಿತ್ಯಾನಂದ, ಶಿವಾನಂದ, ಸ್ಥಳೀಯರಾದ ರಂಜಿತ್‌, ಕೇತನ್‌ ಶೋಧ ಕಾರ್ಯಾಚರಣೆ ಭಾಗಿಯಾಗಿದ್ದರು. ಎಎಸ್‌ಪಿ ಇಷಿತಾ ಗುಪ್ತ, ವೃತ್ತ ನಿರೀಕ್ಷಕ ರಾಘವೇಂದ್ರ, ನಗರ ಠಾಣೆ ಎಸ್‌ಐ ಶಿವಕುಮಾರ್‌ ಘಟನಾ ಸ್ಥಳಕ್ಕೆ ಆಗಮಿಸಿದರು.

Topics

ಸಂಬಂಧಿತ ಸುದ್ದಿಗಳು