ಕಾರ್ಕಳ: ಹೊಸ ಮನೆ ವಿಚಾರದಲ್ಲಿ ತಂದೆ-ಮಗನ ಜಗಳ; ಮಗನ ಕುತ್ತಿಗೆ ಕಡಿದ ತಂದೆ
ಆರೋಪಿ ಮಥಾಯ್ ಮಗ ಚಾಲ್ಸ್ ಮದ್ಯಪಾನದ ಚಟ ಹೊಂದಿದ್ದು, ಈತನ ಪತ್ನಿ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಕಾರ್ಕಳ: ಹೊಸ ಮನೆ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗನ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ತೆಂದೆಯೇ ಮಗನ ಮೇಲೆ ಕತ್ತಿಯಿಂದ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರ್ ದುರ್ಗಾ ಗ್ರಾಮದಲ್ಲಿ ನಡೆದಿದೆ.
ತೆಳ್ಳಾರ್ ದುರ್ಗಾ ಗ್ರಾಮದ ಪುಲ್ಲಾಟ್ ವಾಸಿ ತ್ರೆಸಿಯಾಮ್ (65 ವರ್ಷ) ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲ್ಸ್ ಎಂಬಾತನೇ ಹಲ್ಲೆಗೆ ಒಳಗಾದವನು.
ಕೇರಳ ಮೂಲದ ಮಥಾಯ್ ತನ್ನ ಮಗ ಚಾಲ್ಸ್ ಹಾಗೂ ಮೊಮ್ಮಗಳು ಸಾನ್ವಿಯ ಜೊತೆಗಿದ್ದು, ಹಿರಿಯ ಮಗ ಚೆಂಚಲ್ ಬಿಎಸ್‌ಎಫ್‌ನಲ್ಲಿ ನಿವೃತ್ತಿ ಹೊಂದಿ ಮಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾರೆ.
ಆರೋಪಿ ಮಥಾಯ್ ಮಗ ಚಾಲ್ಸ್ ಮದ್ಯಪಾನದ ಚಟ ಹೊಂದಿದ್ದು, ಈತನ ಪತ್ನಿ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುಟುಂಬ ಹಳೆಯ ಮನೆಯಲ್ಲಿಯೇ ವಾಸವಾಗಿದ್ದು, ಹೊಸ ಮನೆಯೊಂದನ್ನು ನಿರ್ಮಾಣ ಮಾಡುತ್ತಿತ್ತು.
ರಾತ್ರಿ ಗಲಾಟೆ ನಡೆದಿದ್ದಾದ್ರೂ ಯಾಕೆ ?
ಸೆಪ್ಟೆಂಬರ್ 28ರಂದು ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ಹಳೆಯ ಮನೆಯಲ್ಲಿದ್ದ ತಾಯಿ ತ್ರೆಸಿಯಾಮ್ ಬಳಿಯಲ್ಲಿ ಹೊಸ ಮನೆಯನ್ನು ತನಗೆ ಬಿಟ್ಟು ಕೊಡಬೇಕು ಅಂತಾ ಜಗಳವಾಡಿದ್ದಾನೆ. ಈ ವೇಳೆ ಜಗಳ ಬಿಡಿಸೋದಕ್ಕೆ ಬಂದ ಮಥಾಯ್ ಅವರನ್ನು ಚಾಲ್ಸ್ ತಳ್ಳಿದ್ದು, ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.
ಹೊಸ ಮನೆಯ ಮುಂದೆ ಕುಳಿತಿದ್ದ ತಂದೆಯ ಮೇಲೆ ಚಾಲ್ಸ್ ಹಲ್ಲೆ ನಡೆಸೋದಕ್ಕೆ ಮುಂದಾಗಿದ್ದು, ಆಕ್ರೋಶಗೊಂಡ ತಂಡ ಮಥಾಯ್ ತೋಟದ ಕೆಲಸಕ್ಕೆ ಬಳಕೆ ಮಾಡ್ತಿದ್ದ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಾಲ್ಸ್‌ನನ್ನು ಸಂಬಂಧಿ ವಿಬಿನ್ ಕೂಡಲೇ ಅಂಬುಲೆನ್ಸ್ ಮೂಲಕ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Topics

