ಗ್ಯಾಸ್​ ಗ್ರಾಹಕರಿಗೆ ಬಿಗ್​ ರಿಲೀಫ್​.. ! ಗ್ಯಾಸ್‌ ಸಿಲಿಂಡರ್‌ ಪಡೆಯೋಕೆ ಸಿಗಲಿದೆ ಸಾಲ : ವಾರಕ್ಕೆ 100 ರೂಪಾಯಿ ಇಎಂಐ

ಕಂಪನಿಯ ಹೊಸ ಪ್ರಕಟಣೆಯ ಪ್ರಕಾರ, ಇನ್ಮುಂದೆ ಗ್ರಾಹಕರು ಗ್ಯಾಸ್ ಸಿಲಿಂಡರ್ ಖರೀದಿಸುವಾಗಲೂ ಸುಲಭ ಕಂತುಗಳ ಸಾಲದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

By ರಶ್ಮಿ ಎಸ್. | Rashmi S

1 min read

WhatsAppPost
Bharat Gas LPG Micro-Loan Up to Rs 600 for cylinder refilling
Bharat Gas LPG Micro-Loan Up to Rs 600 for cylinder refilling

ನವದೆಹಲಿ : ಕೇಂದ್ರ ಸರ್ಕಾರದ ಅಧೀನದ ಪ್ರಮುಖ ಇಂಧನ ಕಂಪನಿಗಳಲ್ಲಿ ಒಂದಾದ ಭಾರತ್ ಗ್ಯಾಸ್, ತನ್ನ ಎಲ್‌ಪಿಜಿ ಗ್ರಾಹಕರಿಗೆ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅತ್ಯಂತ ಜನಸ್ನೇಹಿ ಹಾಗೂ ವಿನೂತನ ಯೋಜನೆಯೊಂದನ್ನು ಪ್ರಕಟಿಸಿದೆ.

ಪ್ರಸ್ತುತ ದಿನಗಳಲ್ಲಿ ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ, ವಿಶೇಷವಾಗಿ ಗೃಹಿಣಿಯರಿಗೆ ಈ ಹೊಸ ಯೋಜನೆ ದೊಡ್ಡ ಮಟ್ಟದ ನಿರಾಳತೆಯನ್ನು ತರಲಿದೆ.

ಕಂಪನಿಯ ಹೊಸ ಪ್ರಕಟಣೆಯ ಪ್ರಕಾರ, ಇನ್ಮುಂದೆ ಗ್ರಾಹಕರು ಗ್ಯಾಸ್ ಸಿಲಿಂಡರ್ ಖರೀದಿಸುವಾಗಲೂ ಸುಲಭ ಕಂತುಗಳ ಸಾಲದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ನವದೆಹಲಿಯಿಂದ ಹೊರಬಿದ್ದಿರುವ ಈ ಮಹತ್ವದ ನಿರ್ಧಾರದ ಅನ್ವಯ, ಭಾರತ್ ಗ್ಯಾಸ್ ಸಂಸ್ಥೆಯು ತನ್ನ ಪ್ರತಿಯೊಬ್ಬ ಗ್ರಾಹಕರಿಗೂ ರೀಫಿಲ್ ಸಮಯದಲ್ಲಿ ಗರಿಷ್ಠ 600 ರೂಪಾಯಿಗಳ ವರೆಗೆ ಸಾಲದ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದೆ.

ಈ ಯೋಜನೆಯ ಅತಿ ದೊಡ್ಡ ವಿಶೇಷತೆಯೆಂದರೆ, ಗ್ರಾಹಕರು ಪಡೆಯುವ ಈ ಸಾಲಕ್ಕೆ ಯಾವುದೇ ರೀತಿಯ ಹೆಚ್ಚುವರಿ ಬಡ್ತಿಯನ್ನು ವಿಧಿಸಲಾಗುವುದಿಲ್ಲ. ಇದು ಸಂಪೂರ್ಣವಾಗಿ ಬಡ್ಡಿರಹಿತ ಸಾಲದ ಕೊಡುಗೆಯಾಗಿದ್ದು, ಕಡು ಬಡವರಿಗೂ ಸಕಾಲದಲ್ಲಿ ಸಿಲಿಂಡರ್ ಪಡೆದುಕೊಳ್ಳಲು ನೆರವಾಗಲಿದೆ.

ಕೈಯಲ್ಲಿ ತಕ್ಷಣಕ್ಕೆ ಪೂರ್ತಿ ಹಣವಿಲ್ಲದಿದ್ದರೂ ಗ್ಯಾಸ್ ಬುಕ್ಕಿಂಗ್ ಮಾಡಲು ಇದು ಸಹಕಾರಿಯಾಗಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಲು ಕಂಪನಿಯು ಅತ್ಯಂತ ಸುಲಭವಾದ ಮತ್ತು ಹೊರೆಯಾಗದ ಮಾರ್ಗವನ್ನು ರೂಪಿಸಿದೆ.

ಗ್ರಾಹಕರು ತಮಗೆ ಸಿಕ್ಕ 600 ರೂಪಾಯಿಗಳ ಸಾಲದ ಮೊತ್ತವನ್ನು ಒಟ್ಟಿಗೆ ಪಾವತಿಸುವ ಅಗತ್ಯವಿರುವುದಿಲ್ಲ. ಬದಲಾಗಿ, ಪ್ರತಿ ವಾರಕ್ಕೆ ತಲಾ 100 ರೂಪಾಯಿಗಳಂತೆ ಸತತ ಆರು ವಾರಗಳ ಅವಧಿಯಲ್ಲಿ ಈ ಸಾಲವನ್ನು ಅತ್ಯಂತ ಸುಲಭವಾದ ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದೆ.

ಈ ಹೊಸ ಡಿಜಿಟಲ್ ಆರ್ಥಿಕ ವ್ಯವಸ್ಥೆಯು ದೇಶದ ಎಲ್‌ಪಿಜಿ ವಿತರಣಾ ವಲಯದಲ್ಲಿ ದೊಡ್ಡ ಬದಲಾವಣೆಯನ್ನು ತರುವ ನಿರೀಕ್ಷೆಯಿದೆ.

Topics

ಸಂಬಂಧಿತ ಸುದ್ದಿಗಳು