ರೋಟರಿ ಕ್ಲಬ್ ಕೋಟ ಬ್ರಿಗೇಡ್ ನೇತೃತ್ವದಲ್ಲಿ ರೋಟರಿ ಜಿಲ್ಲೆ. 3182, ವಲಯ. 2ರ ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್ ಝೋನಲ್ ಸೆಮಿನಾರ್
ಕಾರ್ಯಕ್ರಮವನ್ನು P.D.G. ರೊ. ರಾಜಾರಾಮ್ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಕೋಟ : ರೋಟರಿ ಸದಸ್ಯತ್ವವನ್ನು ಮತ್ತಷ್ಟು ಬಲಪಡಿಸುವುದು, ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವುದು ಹಾಗೂ ಸಮಾಜದಲ್ಲಿ ರೋಟರಿಯ ಸೇವಾ ಕಾರ್ಯಗಳ ಕುರಿತು ಉತ್ತಮ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಉದ್ದೇಶದಿಂದ “Membership Development & Public Image” ವಿಷಯದ ಕುರಿತು ಝೋನಲ್ ಸೆಮಿನಾರ್ ಬ್ರಹ್ಮಾವರ ಹೋಟೆಲ್ ಆಶ್ರಯದ ಆನಂದ್ ಬ್ಯಾಂಕ್ವೆಟ್ ಹಾಲ್ ಅಲ್ಲಿ ನಡೆಯಿತು.
ಕಾರ್ಯಕ್ರಮವನ್ನು P.D.G. ರೊ. ರಾಜಾರಾಮ್ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೋಟರಿಯ ಬೆಳವಣಿಗೆಗೆ ಸದಸ್ಯತ್ವ ವಿಸ್ತರಣೆ ಹಾಗೂ ಉತ್ತಮ ಸಾರ್ವಜನಿಕ ಸಂಪರ್ಕ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬ ರೋಟೇರಿಯನ್ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಸಮಾಜದ ಹೆಚ್ಚಿನ ಜನರಿಗೆ ತಲುಪಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದರು.
ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷರಾದ ರೊ. ಪ್ರಕಾಶ್ ಪೂಜಾರಿ ಬನ್ನಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೊ. ವಸಂತ್ ಹೋಬ್ಳಿದಾರ್, DG 2027–28, ರೊ. ಅಲೆನ್ ಲೂವಿಸ್, DG 2028–29, ಅಸಿಸ್ಟೆಂಟ್ ಗವರ್ನರ್ ರೊ. ಸುಧಾಕರ್ ಶೆಟ್ಟಿ, ಝೋನಲ್ ಲರ್ನಿಂಗ್ ಫೆಸಿಲಿಟೇಟರ್ ರೊ. ಸುರೇಶ್ ಬೇಳೂರ್, ಝೋನಲ್ ಅಡ್ವೈಸರ್ ರೊ. ಗಜೇಂದ್ರ ಶೆಟ್ಟಿ, ಮಾಜಿ ಅಸಿಸ್ಟೆಂಟ್ ಗವರ್ನರ್, ರೋಟರಿ ಕ್ಲಬ್ ಕೋಟ ಬ್ರಿಗೇಡ್ GSR ರೊ. ಚಂದ್ರಶೇಖರ್ ಮೆಂಡನ್, ವಲಯ ಸೇನಾನಿಗಳಾದ ರೊ. ದಯಾನಂದ ಆಚಾರ್, ರೊ. ತಿಮ್ಮ ಪೂಜಾರಿ ಹಾಗೂ ಮೆಂಬರ್ಷಿಪ್ ಡಿವೋಲಪ್ಮೆಂಟ್ ವಲಯ ಕೋ ಆರ್ಡಿನೇಟರ್ ರೊ. ವೆಂಕಟೇಶ್ ಆಚಾರ್ಯ, ಪಬ್ಲಿಕ್ ಇಮೇಜ್ ವಲಯ ಕೋ ಆರ್ಡಿನೇಟರ್ ರೊ. ಸುರೇಶ್ ಆಚಾರ್ಯ, ಮಹಿಳಾ ಮೆಂಬರ್ಷಿಪ್ ಡಿವೋಲಪ್ಮೆಂಟ್ ವಲಯ ಕೋ ಆರ್ಡಿನೇಟರ್ ರೊ. ವಿಶ್ವನಾಥ್ ಆಚಾರ್ಯ ವಲಯ 2 ರ ಕಾರ್ಯದರ್ಶಿ ರೊ. ಎಚ್. ಜಗದೀಶ್ ಹಾಗೂ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಕಾರ್ಯದರ್ಶಿ ರೊ. ಶಿವರಾಜ್ ಉಪಸ್ಥಿತರಿದ್ದರು.
ಸೆಮಿನಾರ್‌ನ ಪ್ರಥಮ ಅಧಿವೇಶನದಲ್ಲಿ “Membership Development and External Extension” ವಿಷಯದ ಕುರಿತು P.D.G. ರೊ. ರಾಜಾರಾಮ್ ಭಟ್ ಅವರು ತರಬೇತಿ ನೀಡಿದರು.
ಎರಡನೇ ಅಧಿವೇಶನದಲ್ಲಿ “Public Image & Public Relations” ವಿಷಯದ ಕುರಿತು ರೊ. ಅಲೆನ್ ಲೂವಿಸ್, DG 2028–29 ಅವರು ತರಬೇತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ P.D.G. ರೊ. ದೇವಾನಂದ್ ಅವರು ಭಾಗವಹಿಸಿ ಮಾತನಾಡಿ ರೋಟರಿಯ ಸೇವಾ ಕಾರ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಪ್ರತಿಯೊಬ್ಬ ಸದಸ್ಯರೂ ಶ್ರಮಿಸಬೇಕು ಎಂದು ಕರೆ ನೀಡಿದರು.
Topics
ಸಂಬಂಧಿತ ಸುದ್ದಿಗಳು
udupi
ಕಾಂಗ್ರೆಸ್ ಮುಖಂಡ ಮುನಿಯಾಲು ಪರಮಾಪ್ತ ಸೂರಜ್ ಶೆಟ್ಟಿ ಸೇರಿ ಮೂವರು ಸಸ್ಪೆಂಡ್
udupi
ರಥಬೀದಿಯಲ್ಲಿ ಕಳೆಗಟ್ಟಿದ ಅಷ್ಟಮಿ ಸಡಗರ: ಲಕ್ಷಾಂತರ ಲಡ್ಡು-ಚಕ್ಕುಲಿ ಪ್ರಸಾದ ಸಿದ್ಧ, ಹುಲಿವೇಷಧಾರಿಗಳ ಅಬ್ಬರ
udupi
ಉಡುಪಿ: ಸರ್ಕಾರಿ ಅಕ್ಕಿ ಹೆಸರಿನಲ್ಲಿ ಬೆದರಿಕೆ ಹಾಕಿ ಸುಲಿಗೆಗೆ ಯತ್ನ: ಮೂವರು ಆರೋಪಿಗಳ ಬಂಧನ
udupi

