ಪಡುಬಿದ್ರಿ : ಸಿಗಡಿ ಸಾಕಾಣಿಕೆಗೆ ಕರ್ನಾಟಕ ಬ್ಯಾಂಕ್‌ನಿಂದ 3 ಕೋಟಿ ಸಾಲ ಪಡೆದು ವಂಚನೆ, ನಾಲ್ವರ ವಿರುದ್ದ ಪ್ರಕರಣ ದಾಖಲು

ಪಡುಬಿದ್ರಿಯ ಪಡುಬಿದ್ರಿಯ ಅಮೃತ ಟವರ್ಸ್‌ನಲ್ಲಿ ಇರುವ ಕರ್ನಾಟಕ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಪ್ರವೀಣ್ ಶೆಟ್ಟಿ ಅವರು ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

By Kannada News Next Admin · Administrator

1 min read

WhatsAppPost
padubidri karnataka bank fraud case 3 crore loan
padubidri karnataka bank fraud case 3 crore loan

ಉಡುಪಿ : ಸಿಗಡಿ ಸಾಕಾಣಿಕೆ ಘಟಕ ಸ್ಥಾಪನೆ ಹೆಸರಲ್ಲಿ ಬ್ಯಾಂಕಿನಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು, ಆ ಹಣವನ್ನು ಯೋಜನೆಗೆ ಬಳಸದೆ ರಿಯಲ್‌ ಎಸ್ಟೇಟ್‌ ಹಾಗೂ ಆಭರಣ ಖರೀದಿಗೆ ಬಳಸಿ ಬ್ಯಾಂಕಿಗೆ ವಂಚನೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ. ಈ ಕುರಿತು ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಪಡುಬಿದ್ರಿಯ ಪಡುಬಿದ್ರಿಯ ಅಮೃತ ಟವರ್ಸ್‌ನಲ್ಲಿ ಇರುವ ಕರ್ನಾಟಕ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಪ್ರವೀಣ್ ಶೆಟ್ಟಿ ಅವರು ಬ್ಯಾಂಕಿಗೆ ವಂಚನೆ ಆಗಿರುವ ಕುರಿತು ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. M/s.ಲಲಿತಾ ಅಕ್ವಾ ಫಾರ್ಮ್‌, ಶ್ಯಾಮ ಪ್ರಸಾದ್‌ ಎಸ್.‌ ಶೈಲಜಾ, ನಂದ ಪ್ರಸಾದ್‌ ಅವರ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಕರ್ನಾಟಕ ಬ್ಯಾಂಕಿಗೆ ವಂಚನೆ ನಡೆದಿದ್ದು ಹೇಗೆ ?

ಶ್ಯಾಮ್‌ ಪ್ರಸಾದ್‌ ಹಾಗೂ ಅವರ ಕುಟುಂಬ ಸದಸ್ಯರು ಸಂಚು ಹೂಡಿ, ಪಡುಬಿದ್ರಿಯ ಕರ್ನಾಟಕ ಬ್ಯಾಂಕಿನಲ್ಲಿ ಸಿಗಡಿ ಸಾಕಾಣಿಕೆ ಘಟಕ ಸ್ಥಾಪಿಸುವುದಾಗಿ ನಂಬಿಸಿ ಸಾಲ ಪಡೆದಿದ್ದರು. ಆರಂಭದಲ್ಲಿ 1 ಕೋಟಿ. ನಂತರ ಎರಡು ಕೋಟಿ ರೂಪಾಯಿಯನ್ನು ಬ್ಯಾಂಕ್‌ ಮಂಜೂರು ಮಾಡಿತ್ತು. ಒಟ್ಟು 3 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿಸಿಕೊಂಡು ನಂತರ ಸಾಲವನ್ನು ಮರುಪಾವತಿ ಮಾಡಿಸಿರಲಿಲ್ಲ.

ಆರೋಪಿಗಳು ಸಿಗಡಿ ಸಾಕಾಣಿಕೆ ಘಟಕವನ್ನು ಸ್ಥಾಪನೆ ಮಾಡದೇ ಆ ಹಣವನ್ನು ರಿಯಲ್‌ ಎಸ್ಟೇಟ್‌ ವ್ಯವಹಾರ ಹಾಗೂ ಸ್ವತಃ ಆಭರಣ ಖರೀದಿಗೆ ಬಳಕೆ ಮಾಡಿದ್ದರು. ಅಷ್ಟೇ ಅಲ್ಲದೇ ಸಾಲವನ್ನು ಬ್ಯಾಂಕಿಗೆ ಮರುಪಾವತಿ ಮಾಡದೇ ವಂಚಿಸಿದ್ದರು.

ಇದೀಗ ಕರ್ನಾಟಕ ಬ್ಯಾಂಕಿನ ಮ್ಯಾನೇಜರ್‌ ನೀಡಿದ ದೂರಿನ ಆಧಾರದ ಮೇರೆಗೆ ಪಡುಬಿದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Topics

ಸಂಬಂಧಿತ ಸುದ್ದಿಗಳು