ಉಡುಪಿ: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್:ಕೂದಲೆಳೆ ಅಂತರದಲ್ಲಿ ಬಚಾವ್
ಕಟಪಾಡಿಯ ಯೇಣಗುಡ್ಡೆಯ ತೇಕಲ್ ತೋಟದ ಬಳಿ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ರೋಗಿಯೊಬ್ಬರನ್ನು ಮಂಗಳೂರಿನಿಂದ ಉಡುಪಿ ಕರೆದೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ.
By Meghana Pranuth | ಮೇಘನಾ ಪ್ರಣೂತ್
1 min read
ಉಡುಪಿ (ಆಗಸ್ಟ್ 05): ಕಟಪಾಡಿಯ ಯೇಣಗುಡ್ಡೆಯ ತೇಕಲ್ ತೋಟದ ಬಳಿ ಆಂಬ್ಯುಲೆನ್ಸ್ ಒ೦ದು ನಿಯಂತ್ರಣ ತಪ್ಪಿ ಡಿವೈಡರ್ (Divider) ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ.ಮಂಗಳೂರಿನಿಂದ ಉಡುಪಿಯ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಕಟಪಾಡಿ ಜಂಕ್ಷನ್ ದಾಟುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್, ಕ್ಷಣಾರ್ಧದಲ್ಲಿ ಹೆದ್ದಾರಿಯ ಡಿವೈಡರ್ ಹತ್ತಿ, ಎದುರಿನ ಕ್ಯಾರೇಜ್ವೇಗೆ ನುಗ್ಗಿ ರಸ್ತೆಬದಿಯಲ್ಲಿ ನಿಂತಿದೆ.
ಅಪಘಾತದ ತೀವ್ರತೆಗೆ ಆಂಬ್ಯುಲೆನ್ಸ್ನಲ್ಲಿದ್ದ ರೋಗಿ ಹಾಗೂ ಅವರ ಜೊತೆಯಲ್ಲಿದ್ದವರು ತೀವ್ರ ಆತಂಕಕ್ಕೊಳಗಾಗಿದ್ದರು. ಅದೃಷ್ಟವಶಾತ್ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣವೇ ಗಾಯಾಳು ರೋಗಿ ಮತ್ತು ಅವರ ಸಂಬಂಧಿಕರನ್ನು ಉಡುಪಿಗೆ ಕರೆದೊಯ್ಯಲು ಮತ್ತೊಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ, ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
Topics
ಸಂಬಂಧಿತ ಸುದ್ದಿಗಳು
udupi
ಕಾರ್ಕಳ-ಮೂಡುಬಿದಿರೆ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮಾಜಿ ಸಚಿವ ರಮಾನಾಥ್ ರೈ ಕಾರಿಗೆ ಬಸ್ ಡಿಕ್ಕಿ
udupi
ಮಣಿಪಾಲ : ಅವಧಿ ಮೀರಿ ಗೇಮ್ಸ್ ಸೆಂಟರ್ ಕಾರ್ಯಾಚರಣೆ, ಎಫ್ಐಆರ್ ದಾಖಲು
udupi
ಉಡುಪಿ: ವಿದ್ಯಾರ್ಥಿಗಳಿಗೆ MDMA ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಮಣಿಪಾಲ ಪೊಲೀಸರು; ಇಬ್ಬರ ಬಂಧನ
udupi

