ಮಹಿಳಾ ಟಿ20 ಏಷ್ಯಾಕಪ್‌ 2026 ವೇಳಾಪಟ್ಟಿ ಪ್ರಕರ : ಸೆಪ್ಟೆಂಬರ್ 5ಕ್ಕೆ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಕದನ

ಏಷ್ಯಾಕಪ್‌ ಪಂದ್ಯಾವಳಿಯ ಸಂಪೂರ್ಣ ಪಂದ್ಯಗಳನ್ನು ಯುಎಇಯ (UAE) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
Womens Asia Cup 2026 Full Schedule Teams India vs Pakistan September 5
Womens Asia Cup 2026 Full Schedule Teams India vs Pakistan September 5

ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ಇಲ್ಲಿದೆ. ಮಹಿಳಾ ಟಿ20 ಏಷ್ಯಾಕಪ್ 2026‌ ((Women’s T20 Asia Cup 2026))ರ ವೇಳಾಪಟ್ಟಿ ಪ್ರಕಟವಾಗಿದ್ದು, ಬದ್ದ ವೈರಿಗಳಾಗಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟೆಂಬರ್‌ 5ರಂದು ಮುಖಾಮುಖಿಯಾಗಲಿವೆ. ಅಗಸ್ಟ್‌ 28ರಂದು ಆರಂಭಗೊಳ್ಳಲಿರುವ ಏಷ್ಯಾಕಪ್‌ ಪಂದ್ಯಾವಳಿ ಸೆಪ್ಟೆಂಬರ್‌ 31ಕ್ಕೆ ಕೊನೆಗೊಳ್ಳಲಿದೆ.

ಏಷ್ಯಾಕಪ್‌ ಪಂದ್ಯಾವಳಿಯ ಸಂಪೂರ್ಣ ಪಂದ್ಯಗಳನ್ನು ಯುಎಇಯ (UAE) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ. ಒಟ್ಟು 8 ತಂಡಗಳು ಕಣಕ್ಕೆ ಇಳಿಯುತ್ತಿದ್ದು, ಅವುಗಳನ್ನು ಎ ಮತ್ತು ಬಿ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಥೈಲ್ಯಾಂಡ್‌ ಮತ್ತು ಹಾಂಗ್‌ಕಾಂಗ್‌ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್‌ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ ಮತ್ತು ಇಂಡೋನೇಷ್ಯಾ ತಂಡಗಳು ಸೆಣೆಸಾಡಲಿವೆ. ಪ್ರತೀ ಗುಂಪಿನ ಎಲ್ಲಾ ಪಂದ್ಯಗಳು ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿವೆ.

ಸೆಪ್ಟೆಂಬರ್ 5ರಂದು ದಾಯಾದಿಗಳ ಕದನ : ಭಾರತ ಪಾಕ್‌ ಮುಖಾಮುಖಿ

ಕ್ರಿಕೆಟ್‌ ಜಗತ್ತೇ ಸೆಪ್ಟೆಂಬರ್‌ 5ರಂದು ನಡೆಯುವ ಭಾರತ ಹಾಗೂ ಪಾಕಿಸ್ತಾನ ವಿರುದ್ದದ ಪಂದ್ಯಾವಳಿಗಾಗಿ ಕಾದು ಕುಳಿತಿದ್ದಾರೆ. ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸಂಜೆ 7.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 30ರಂದು ಥೈಲ್ಯಾಂಡ್ ವಿರುದ್ಧ ಆಡಲಿದೆ.

ಮಹಿಳಾ ಟಿ20 ಏಷ್ಯಾಕಪ್ 2026: ಸಂಪೂರ್ಣ ವೇಳಾಪಟ್ಟಿ

  • 28 ಆಗಸ್ಟ್ 2026 : ಥೈಲ್ಯಾಂಡ್ vs ಹಾಂಗ್ ಕಾಂಗ್

  • 29 ಆಗಸ್ಟ್ 2026 : ಶ್ರೀಲಂಕಾ vs ಯುಎಇ

  • 30 ಆಗಸ್ಟ್ 2026: ಭಾರತ vs ಥೈಲ್ಯಾಂಡ್

  • 31 ಆಗಸ್ಟ್ 2026 : ಬಾಂಗ್ಲಾದೇಶ vs ಇಂಡೋನೇಷ್ಯಾ

  • 1 ಸೆಪ್ಟೆಂಬರ್ 2026 : ಪಾಕಿಸ್ತಾನ vs ಥೈಲ್ಯಾಂಡ್

  • 2 ಸೆಪ್ಟೆಂಬರ್ 2026 : ಶ್ರೀಲಂಕಾ vs ಇಂಡೋನೇಷ್ಯಾ

  • 3 ಸೆಪ್ಟೆಂಬರ್ 2026 : ಭಾರತ vs ಹಾಂಗ್ ಕಾಂಗ್

  • 4 ಸೆಪ್ಟೆಂಬರ್ 2026 : ಯುಎಇ vs ಇಂಡೋನೇಷ್ಯಾ

  • 5 ಸೆಪ್ಟೆಂಬರ್ 2026: ಪಾಕಿಸ್ತಾನ vs ಭಾರತ

  • 6 ಸೆಪ್ಟೆಂಬರ್ 2026 : ಶ್ರೀಲಂಕಾ vs ಬಾಂಗ್ಲಾದೇಶ

  • 7 ಸೆಪ್ಟೆಂಬರ್ 2026 : ಪಾಕಿಸ್ತಾನ vs ಹಾಂಗ್ ಕಾಂಗ್

  • 8 ಸೆಪ್ಟೆಂಬರ್ 2026 : ಬಾಂಗ್ಲಾದೇಶ vs ಯುಎಇ

ನಾಕ್-ಔಟ್ ಹಂತ: ಲೀಗ್ ಪಂದ್ಯಗಳ ಮುಕ್ತಾಯದ ನಂತರ, ಸೆಪ್ಟೆಂಬರ್ 10 ಮತ್ತು 11 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಪ್ರಶಸ್ತಿ ಸುತ್ತಿನ ಅಂತಿಮ ಫೈನಲ್ ಕದನವು ಸೆಪ್ಟೆಂಬರ್ 13 ರಂದು ನಡೆಯಲಿದೆ.

Topics