WCL 2026 : ಯುವರಾಜ್ ಸಿಂಗ್ 6,6,6,6,6,6 ಆರ್ಭಟ : ಆಸ್ಟ್ರೇಲಿಯಾ ಚಾಂಪಿಯನ್ಸ್ ತತ್ತರ
ಇಂಡಿಯಾ ಚಾಂಪಿಯನ್ಸ್ ವಿರುದ್ಧ ಆಸ್ಟ್ರೇಲಿಯಾ ಚಾಂಪಿಯನ್ಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಯುಜರಾಜ್ ಸಿಂಗ್ ಅವರ ಸ್ಪೋಟಕ ಸಿಕ್ಸರ್‌ಗೆ ಆಸ್ಟ್ರೇಲಿಯಾ ತತ್ತರಿಸಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಶಾರ್ಜಾ : ವಿಶ್ವ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ (WCL 2026 ) ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಇಂಡಿಯಾ ಚಾಂಪಿಯನ್ಸ್ (india legends) ತಂಡ ಭರ್ಜರಿ ಗೆಲುವು ಸಾಧಿಸಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯಾ ಚಾಂಪಿಯನ್ಸ್ ವಿರುದ್ಧ ಆಸ್ಟ್ರೇಲಿಯಾ ಚಾಂಪಿಯನ್ಸ್ (australia legends) ನಡುವಿನ ಮೊದಲ ಟಿ20 ಪಂದ್ಯದಲ್ಲಿ ಯುಜರಾಜ್ ಸಿಂಗ್ ಅವರ ಸ್ಪೋಟಕ ಸಿಕ್ಸರ್‌ಗೆ ಆಸ್ಟ್ರೇಲಿಯಾ ತತ್ತರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಚಾಂಪಿಯನ್ಸ್ ತಂಡ ಅಂಬಟಿ ರಾಯಡಿ ಅವರನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಸ್ಟುವರ್ಟ್ ಬಿನ್ನಿ ಮತ್ತು ನಮನ್ ಓಜಾ ಜೋಡಿ ಒಂದಿಷ್ಟು ಹೊತ್ತು ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿತು. 13 ರನ್ ಗಳಿಸಿ ಸ್ಟುವರ್ಟ್ ಬಿನ್ನಿ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಯುವರಾಜ್ ಸಿಂಗ್ ಆರಂಭದಿಂದಲೇ ಸ್ಪೋಟಕ ಆಟಕ್ಕೆ ಮನಮಾಡಿದ್ರು.
ಆರಂಭಿಕ ನಮನ್ ಓಜಾ 31ರನ್ ಗಳಿಸಿ ಔಟಾಗುತ್ತಲೇ, ಯುವರಾಜ್ ಸಿಂಗ್ ಜೊತೆಯಾದ ಯೂಸೂಫ್ ಪಠಾಣ್ ಕೂಡ ಭರ್ಜರಿಯಾಗಿಯೇ ಬ್ಯಾಟ್ ಬೀಸಿದ್ದಾರೆ. 44 ಎಸೆತಗಳನ್ನು ಎದುಸಿದ ಯುವರಾಜ್ ಸಿಂಗ್ 6 ಭರ್ಜರಿ ಸಿಕ್ಸರ್ ಹಾಗೂ 5 ಆಕರ್ಷಕ ಬೌಂಡರಿ ಸಹಿತ ಸ್ಪೋಟಕ 71 ರನ್ ಗಳಿಸುವ ಮೂಲಕ ಅರ್ಧ ಶತಕ ಗಳಿಸಿದ್ದಾರೆ.
ಯೂಸೂಪ್ ಪಠಾಣ್ 20 ಎಸೆತಗಳಲ್ಲಿ 30 ರನ್ ಬಾರಿಸಿದ್ರೆ, ರಿಶಿ ಧವನ್ 12 ಎಸೆತಗಳಲ್ಲಿ 35 ರನ್ ಬಾರಿಸುವ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 196ರನ್ ಗಳಿಸಿದೆ. ನಂತರ ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಮೋಹಿತ್ ಶರ್ಮಾ ಹಾಗೂ ಹರ್ಭಜನ್ ಸಿಂಗ್ ಆರಂಭಿಕ ಆಘಾತ ನೀಡಿದ್ರು.
ಉಸ್ಮಾನ್ ಖ್ವಾಜ ಶೂನ್ಯಕ್ಕೆ ಔಟಾದ್ರೆ, ಬೆನ್ ಡಂಕ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಆರಂಭಿಕ ಡಿ ಆರ್ಸಿ ಶಾರ್ಟ್ ಗೆ ಜೊತೆಯಾದ ಜೋ ಬರ್ನ್ಸ್ ಉತ್ತಮ ಜೊತೆಯಾಟ ಆಡಿದ್ರು. ಡಿ ಆರ್ಸಿ ಶಾರ್ಟ್ 28 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸುವ ಮೂಲಕ 65 ರನ್ ಬಾರಿಸಿದ್ರೆ, ಜೋ ಬರ್ನ್ಸ್ 32 ಎಸೆತಗಳಲ್ಲಿ 45ರನ್ ಸಿಡಿಸಿದ್ರು.
ಜೋನಾಥಮ್ ವೆಲ್ಸ್ ಎರಡಂಕಿ ಮೊತ್ತವನ್ನು ದಾಟಿದ್ದು ಬಿಟ್ರೆ ಆಸ್ಟ್ರೇಲಿಯಾದ ಯಾವುದೇ ಆಟಗಾರರು ಭಾರತ ಬೌಲಿಂಗ್ ದಾಳಿಗೆ ಪ್ರತಿರೋಧ ಒಡ್ಡಲೇ ಇಲ್ಲ. ಇಂಡಿಯಾ ಚಾಂಪಿಯನ್ಸ್ ತಂಡದ ಪರ ದವಲ್ ಕುಲಕರ್ಣಿ 4 ವಿಕೆಟ್ ಪಡೆದ್ರೆ, ಮೋಹಿತ್ ಶರ್ಮಾ 3, ಪಿಯೂಷ್ ಚಾವ್ಲಾ 2 ಹಾಗೂ ಹರ್ಭಜನ್ ಸಿಂಗ್ ಒಂದು ವಿಕೆಟ್ ಪಡೆದಿದ್ದಾರೆ.
Topics
ಸಂಬಂಧಿತ ಸುದ್ದಿಗಳು
news
Sigma Movie Review : ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ಸಿಗ್ಮಾ ಸಿನಿಮಾ ಬಿಡುಗಡೆ
news
ಖಾದಿ ಗ್ರಾಮೋದ್ಯೋಗ ನೇಮಕಾತಿ : ಪರೀಕ್ಷೆಯಿಲ್ಲದೇ 40,000 ವರೆಗೆ ವೇತನ ! ಯಾರು ಅರ್ಜಿ ಸಲ್ಲಿಸಬಹುದು?
news
ಇನ್ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ ದೆಹಲಿ ಪೊಲೀಸರ ವಶಕ್ಕೆ
news

