ದಸರಾ ಹಬ್ಬಕ್ಕೆ ಮಂಗಳೂರು KSRTCಯಿಂದ ವಿಶೇಷ ಪ್ಯಾಕೇಜ್
ಪ್ಯಾಕೇಜ್‌ಗಳಿಗಾಗಿ ಜನರು ಅಲೆದಾಡದಂತೆ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡವಾಗಿ ಸೀಟುಗಳನ್ನು ಕಾಯ್ದಿರಿಸುವ ಸುಲಭ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಂಗಳೂರು: ದಸರಾ ಹಬ್ಬದ ಸುದೀರ್ಘ ರಜೆಗಳ ದಿನಗಳಲ್ಲಿ ಪ್ರವಾಸಿಗರು ಮತ್ತು ಧಾರ್ಮಿಕ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಐದು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಕಟಿಸಿದೆ.
ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಈ ವಿಶೇಷ ಬಸ್ಸುಗಳ ಸಂಚಾರ ವ್ಯವಸ್ಥೆ ಇರಲಿದ್ದು, ಕರಾವಳಿ ಮತ್ತು ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ. ಈ ಪ್ಯಾಕೇಜ್‌ಗಳಿಗಾಗಿ ಜನರು ಅಲೆದಾಡದಂತೆ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡವಾಗಿ ಸೀಟುಗಳನ್ನು ಕಾಯ್ದಿರಿಸುವ ಸುಲಭ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ವಿಶೇಷ ಯೋಜನೆಯಲ್ಲಿ ಮೊದಲನೆಯದಾಗಿ ಮಂಗಳೂರು ದಸರಾ ನವದುರ್ಗ ದರ್ಶನ ಪ್ಯಾಕೇಜ್ ಒಳಗೊಂಡಿದೆ. ಇದು ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಕಟೀಲು, ಪೊಳಲಿ, ಬಪ್ಪನಾಡು ಸೇರಿದಂತೆ ಒಟ್ಟು ಹನ್ನೊಂದು ಪ್ರಮುಖ ದೇವಸ್ಥಾನಗಳ ದರ್ಶನ ಭಾಗ್ಯವನ್ನು ಒದಗಿಸಲಿದೆ.
ಇದಲ್ಲದೆ ಪ್ರಕೃತಿ ಸೌಂದರ್ಯ ಸವಿಯಬಯಸುವವರಿಗಾಗಿ ಕೊಡಗಿನ ತಲಕಾವೇರಿ, ಭಾಗಮಂಡಲ, ಅಬ್ಬಿ ಜಲಪಾತ ಹಾಗೂ ರಾಜಾಸೀಟ್ ವೀಕ್ಷಣೆಯ ಪ್ಯಾಕೇಜ್ ರೂಪಿಸಲಾಗಿದೆ. ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಶಕ್ತಿಪೀಠಗಳಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಸಿಗಂದೂರು ಚೌಡೇಶ್ವರಿ ಹಾಗೂ ಶೃಂಗೇರಿ ಶಾರದಾಂಬಾ ದೇವಸ್ಥಾನಗಳ ದರ್ಶನಕ್ಕೂ ಪ್ರತ್ಯೇಕ ಏಕದಿನ ಪ್ರವಾಸದ ಬಸ್ಸುಗಳನ್ನು ನಿಯೋಜಿಸಲಾಗಿದೆ.
ಎಲ್ಲಾ ಪ್ಯಾಕೇಜ್ ಬಸ್ಸುಗಳು ಬೆಳಿಗ್ಗೆ ಮಂಗಳೂರು ಬಸ್ ನಿಲ್ದಾಣದಿಂದ ಹೊರಟು, ನಿಗದಿತ ಕ್ಷೇತ್ರಗಳ ದರ್ಶನ ಮಾಡಿಸಿ ರಾತ್ರಿಯ ವೇಳೆಗೆ ಮರಳಿ ಮಂಗಳೂರನ್ನು ತಲುಪಲಿವೆ. ಕೆಲವು ಸದೀರ್ಘ ಪ್ರವಾಸಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಪ್ರಯಾಣಿಕರ ಜೇಬಿಗೆ ಹೊರೆಯಾಗದಂತೆ ಅತ್ಯಂತ ಕೈಗೆಟುಕುವ ದರಗಳನ್ನು ನಿಗದಿಪಡಿಸಲಾಗಿದ್ದು, ವಯಸ್ಕರಿಗೆ 500 ರಿಂದ 700 ರೂಪಾಯಿಗಳ ವರೆಗೆ ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ ರಿಯಾಯಿತಿ ದರದ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಹಬ್ಬದ ದಿನಗಳಲ್ಲಿ ಸಾರ್ವಜನಿಕರು ಈ ಸಾರಿಗೆ ಸೌಲಭ್ಯದ ಸಂಪೂರ್ಣ ಪ್ರಯೋಜನ ಪಡೆಯಬಹುದಾಗಿದೆ.
Topics
ಸಂಬಂಧಿತ ಸುದ್ದಿಗಳು
karnataka
ರಾಜ್ಯ ರಾಜಕೀಯಕ್ಕೆ ಎಚ್.ಡಿ. ಕುಮಾರಸ್ವಾಮಿ ಮರು ಎಂಟ್ರಿ ಮುನ್ಸೂಚನೆ
karnataka
ಫೋನಿನಲ್ಲಿ ವಿಶ್ ಮಾಡದೆ ಚಿನ್ನ ಗೆದ್ದ ಪೂವಮ್ಮ ಮಂಗಳೂರಿನ ಮನೆಗೆ ನೇರ ಭೇಟಿ ನೀಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ !
karnataka
ದಸರಾ ರಜೆ ಕರಾವಳಿಯತ್ತ ಪ್ರವಾಸಿಗರ ದಂಡು : ಕರಾವಳಿಯ ಪ್ರವಾಸೋದ್ಯಮಕ್ಕೀಗ ಜೀವ ಕಳೆ
karnataka

