ITBPF ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ 126 ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ : SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಇಂಡೋ–ಟಿಬೆಟಿಯನ್‌ ಗಡಿ ಪೊಲೀಸ್‌ ಪಡೆ (ITBPF) ಕ್ರೀಡಾ ಕೋಟಾದಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
ITBPF Recruitment
ITBPF Recruitment

ಭಾರತ ಸರ್ಕಾರದ ಗೃಹ ಸಚಿವಾಲಯದ ಅಧೀನದಲ್ಲಿರುವ ಇಂಡೋ–ಟಿಬೆಟಿಯನ್‌ ಗಡಿ ಪೊಲೀಸ್‌ ಪಡೆ (ITBPF) ಕ್ರೀಡಾ ಕೋಟಾದಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಅರ್ಹ ಭಾರತೀಯರಿಂದ (ಪುರುಷ ಮತ್ತು ಮಹಿಳೆ) ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್‌ 3 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ನವೆಂಬರ್‌ 1, 2026. ಈ ನೇಮಕಾತಿಯಲ್ಲಿ ITBPF ಒಟ್ಟು 126 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇದರಲ್ಲಿ ಯಾವ ಯಾವ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು ಎಂದು ನೋಡೋಣ.

ವಿವರಗಳು ಹುದ್ದೆಗಳು

ಕಾನ್‌ಸ್ಟೆಬಲ್‌ (ಸಾಮಾನ್ಯ ಕರ್ತವ್ಯ - ಕ್ರೀಡಾಪಟು) - 126 ಹುದ್ದೆಗಳು

ಕ್ರೀಡಾ ವಿಭಾಗಗಳು

ಅಥ್ಲೆಟಿಕ್ಸ್ – 5

ಅಕ್ವಾಟಿಕ್ಸ್ – 4

ಬಿಲ್ಲುಗಾರಿಕೆ – 5

ಬ್ಯಾಡ್ಮಿಂಟನ್ – 6

ಬ್ಯಾಸ್ಕೆಟ್‌ಬಾಲ್ – 3

ಬಾಕ್ಸಿಂಗ್ – 9

ಕುದುರೆ ಸವಾರಿ – 1

ಫುಟ್‌ಬಾಲ್ – 2

ಜಿಮ್ನಾಸ್ಟಿಕ್ಸ್ – 6

ಹ್ಯಾಂಡ್‌ಬಾಲ್ 3

ಐಸ್ ಹಾಕಿ – 6

ಹಾಕಿ – 3

ಜೂಡೋ – 12

ಖೋ-ಖೋ – 3

ಪೆನ್‌ಕಾಕ್ ಸಿಲಾಟ್ – 4

ಪವರ್‌ಲಿಫ್ಟಿಂಗ್ – 1

ನಾರ್ಡಿಕ್ ಸ್ಕಿಯಿಂಗ್ – 8

ಸ್ಪೋರ್ಟ್ಸ್ ಶೂಟಿಂಗ್ – 8

ಟೇಬಲ್ ಟೆನಿಸ್ – 2

ಟೇಕ್ವಾಂಡೋ – 7

ವಾಲಿಬಾಲ್ – 6

ವೇಟ್‌ಲಿಫ್ಟಿಂಗ್ – 4

ಕುಸ್ತಿ – 5

ಕ್ಯಾನೋಯಿಂಗ್ – 3

ಕಯಾಕಿಂಗ್ – 3

ರೋಯಿಂಗ್ – 1

ಎಂಟಿಬಿ ಸೈಕ್ಲಿಂಗ್ – 2

ಕರಾಟೆ – 4

ವಿದ್ಯಾರ್ಹತೆ

ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಹಾಗೂ ಗರಿಷ್ಠ ವಯಸ್ಸು 23 ವರ್ಷಗಳು. ಸರ್ಕಾರಿ ಮಾನದಂಡಗಳ ಪ್ರಕಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ವೇತನ

ಈ ನೇಮಕಾತಿಯಲ್ಲಿ ಆಯ್ಕೆ ಅಭ್ಯರ್ಥಿಗಳಿಗೆ ತಿಂಗಳಿಗೆ ₹21,700 ರಿಂದ ₹69,100.

ಅರ್ಜಿ ಶುಲ್ಕ

ಕಾನ್ಸ್‌ಟೇಬಲ್‌ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿದೆ. ಸಾಮಾನ್ಯ, ಒಬಿಸಿ ಮತ್ತು ಎಡಬ್ಲ್ಯೂಎಸ್‌ ವರ್ಗಗಳಿಗೆ ಸೇರಿದ ಪುರುಷ ಅಭ್ಯರ್ಥಿಗಳಿಗೆ 100 ರೂ. ಆದರೆ ಎಸ್‌ಸಿ/ಎಸ್‌ಟಿ/ಮಹಿಳೆಯರು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಹೇಗೆ?

ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಈ ಕೆಳಗಿನ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

  • ದಾಖಲೆ ಪರಿಶೀಲನೆ

  • ದೈಹಿಕ ಗುಣಮಟ್ಟ ಪರೀಕ್ಷೆ

  • ಕ್ರೀಡಾ ಪರೀಕ್ಷೆ

  • ಮೆರಿಟ್‌ ಪಟ್ಟಿ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Topics

ಸಂಬಂಧಿತ ಸುದ್ದಿಗಳು