IPL 2026: ಐಪಿಎಲ್‌ನಲ್ಲಿ ಆರ್‌ಸಿಬಿ ಐತಿಹಾಸಿಕ ದಾಖಲೆ :300 ಮಿಲಿಯನ್ ಡಾಲರ್‌ಗೆ ಬ್ರ್ಯಾಂಡ್ ವ್ಯಾಲ್ಯೂ ಏರಿಕೆ
Houlihan Lokey ಪ್ರಕಾರ, ಆರ್‌ಸಿಬಿ ಫ್ರ್ಯಾಂಚೈಸ್ ಬರೋಬ್ಬರಿ $300 ಮಿಲಿಯನ್ ಬ್ರ್ಯಾಂಡ್ ಮೌಲ್ಯವನ್ನು ದಾಟಿದ ಐಪಿಎಲ್‌ನ ಮೊದಲ ಕ್ರಿಕೆಟ್ ಫ್ರ್ಯಾಂಚೈಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೇವಲ ಕ್ರಿಕೆಟ್ ಪಂದ್ಯಾವಳಿಯಾಗಿ ಅಷ್ಟೇ ಉಳಿದಿಲ್ಲ, ಬದಲಾಗಿ ಜಾಗತಿಕ ಮಟ್ಟದ ಅತಿದೊಡ್ಡ ವಾಣಿಜ್ಯ ಮತ್ತು ಬ್ರ್ಯಾಂಡ್ ಮಾರುಕಟ್ಟೆಯಾಗಿ ಬೆಳೆದು ನಿಂತಿದೆ. ವರ್ಷಂಪ್ರತಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಐಪಿಎಲ್‌ನಲ್ಲಿ 2026 ರ ಐಪಿಎಲ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐತಿಹಾಸಿಕ ಮೈಲಿಗಲ್ಲೊಂದನ್ನು ತಲುಪಿದೆ. ಆರ್‌ಸಿಬಿ ಕೇವಲ ಅಭಿಮಾನಿಗಳ ಹೃದಯವನ್ನಷ್ಟೇ ಅಲ್ಲ, ವಾಣಿಜ್ಯ ಮಾರುಕಟ್ಟೆಯನ್ನೂ ಆಳುತ್ತಿದೆ ಅನ್ನೋದಕ್ಕೆ ಈ ವರದಿ ಸಾಕ್ಷಿಯಾಗಿದೆ.
ಖ್ಯಾತ ಆರ್ಥಿಕ ಸಲಹಾ ಸಂಸ್ಥೆ ಹೌಲಿಹಾನ್ ಲೊಕಿ (Houlihan Lokey)ಇತ್ತೀಚೆಗೆ ಬಿಡುಗಡೆ ಮಾಡಿರುವ ಐಪಿಎಲ್ ಬ್ರ್ಯಾಂಡ್ ಮೌಲ್ಯಮಾಪನ ವರದಿಯ ಪ್ರಕಾರ, ಆರ್‌ಸಿಬಿ ಫ್ರ್ಯಾಂಚೈಸ್ ಬರೋಬ್ಬರಿ $300 ಮಿಲಿಯನ್ ಬ್ರ್ಯಾಂಡ್ ಮೌಲ್ಯವನ್ನು ದಾಟಿದ ಐಪಿಎಲ್‌ನ ಮೊದಲ ಕ್ರಿಕೆಟ್ ಫ್ರ್ಯಾಂಚೈಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಒಂದೆಡೆ ಆರ್‌ಸಿಬಿ ವೈಯಕ್ತಿಕ ಫ್ರ್ಯಾಂಚೈಸ್ ಆಗಿ ದಾಖಲೆ ಬರೆದರೆ, ಒಟ್ಟಾರೆ ಐಪಿಎಲ್ (IPL) ಟೂರ್ನಿಯ ವ್ಯವಹಾರದ ಮೌಲ್ಯ ಕೂಡ ಮುಗಿಲೆತ್ತರಕ್ಕೆ ಬೆಳೆದಿದೆ. ಜಾಗತಿಕ ಕ್ರೀಡಾ ಹೂಡಿಕೆಯಲ್ಲಿಯೂ ಐಪಿಎಲ್ ಈಗ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ.
ಅಂಕಿ ಅಂಶಗಳ ಪ್ರಕಾರ, ಐಪಿಎಲ್‌ನ ಒಟ್ಟು ವ್ಯವಹಾರದ ಮೌಲ್ಯ 20.6 ಬಿಲಿಯನ್ ಡಾಲರ್‌ಗೆ ತಲುಪಿದೆ. 2025 ರ ಸಾಲಿನ ಮೌಲ್ಯಮಾಪನಕ್ಕೆ ಹೋಲಿಸಿದರೆ, 11.4% ರಷ್ಟು ಹೆಚ್ಚಳವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಕಳೆದ ಸಾಲಿನಲ್ಲಿ ಮಾರಾಟವಾಗಿದ್ದವು. ಇದೇ ಕಾರಣದಿಂದಲೇ ಐಪಿಎಲ್‌ನ ಒಟ್ಟು ಮೌಲ್ಯ ಹೆಚ್ಚಳವಾಗಿದೆ.
ಕಳೆದ ಎರಡು ಅವಧಿಯಲ್ಲಿ ಆರ್‌ಸಿಬಿ ತಂಡ ಸತತವಾಗಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ವಿರಾಟ್ ಕೊಹ್ಲಿಯಂತಹ ಕ್ರಿಕೆಟ್ ದಿಗ್ಗಜರು ಪ್ರತಿನಿಧಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಸಾಲು ಸಾಲು ಟ್ರೋಫಿಯ ಜೊತೆಗೆ ಬ್ರ್ಯಾಂಡ್ ಮೌಲ್ಯವನ್ನೂ ಹೆಚ್ಚಿಸಿಕೊಂಡಿದೆ. ಮುಂದಿನ ಬಾರಿ ಕನ್ನಡಿಗರ ತಂಡವಾಗಿ ಆರ್‌ಸಿಬಿ ಬದಲಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
Topics
ಸಂಬಂಧಿತ ಸುದ್ದಿಗಳು
cricket
Abhishek Porel : ಐಪಿಎಲ್‌ನ ಸ್ಟಾರ್ ಅಭಿಷೇಕ್ ಪೊರೆಲ್ ಬಂಧನ, ಏನಿದು ಪ್ರಕರಣ ?
cricket
ಐಪಿಎಲ್ 2027 : ಕೆಕೆಆರ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಸೇರ್ತಾರಾ ಹಾರ್ದಿಕ್ ಪಾಂಡ್ಯ
cricket
Rishabh Pant: ಬ್ಯಾಟಿಂಗ್ ಬಿಟ್ಟು ಪಂತ್ ಮಾಡಿದ ಈ ಕೆಲಸಕ್ಕೆ ಫ್ಯಾನ್ಸ್ ಫುಲ್ ಫಿದಾ
cricket

