Rishabh Pant: ಬ್ಯಾಟಿಂಗ್ ಬಿಟ್ಟು ಪಂತ್ ಮಾಡಿದ ಈ ಕೆಲಸಕ್ಕೆ ಫ್ಯಾನ್ಸ್ ಫುಲ್ ಫಿದಾ
ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ದದ ಸರಣಿಗೆ ಸಜ್ಜಾಗುತ್ತಿದೆ. ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಮತ್ತೊಮ್ಮೆ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಮುಂಬೈ : ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ದದ ಸರಣಿಗೆ ಸಜ್ಜಾಗುತ್ತಿದೆ. ಈ ನಡುವಲ್ಲೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಮತ್ತೊಮ್ಮೆ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಈ ಬಾರಿ ರಿಷಬ್ ಪಂತ್ ಅಭಿಮಾನಿಗಳನ್ನು ರಂಜಿಸಿರೋದು ಬ್ಯಾಟಿಂಗ್‌ನಿಂದಲ್ಲ, ಬದಲಾಗಿ ಅವರು ತೋರಿಸಿದ ಕೌಶಲ್ಯದಿಂದ.
ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವಿನ ಅಭ್ಯಾಸ ಪಂದ್ಯದ ವೇಳೆಯಲ್ಲಿ ರಿಷಬ್ ಪಂತ್ ಮೈದಾನದಲ್ಲಿಯೇ ಪುಟ್‌ಬಾಲ್ ಆಡಿ ತಮ್ಮ ಕೌಶಲ್ಯ ಮರೆದಿದ್ದಾರೆ. ರಿಷಬ್ ಪಂತ್ ಅವರ ಕ್ರಿಕೆಟ್ ಆಟ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಪಂತ್ ಕಾಲಿನ ಮೇಲಿನ ಚಲನೆ, ಚೆಂಡಿನ ಮೇಲಿನ ನಿಯಂತ್ರಣ ಕಂಡು ಆಟಗಾರರು ಖುಷಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.
ಕೊಲಂಬೋದಲ್ಲಿ ನಡೆದ ಶ್ರೀಲಂಕಾ ಹಾಗೂ ಭಾರತ ನಡುವಿನ ಅಭ್ಯಾಸ ಪಂದ್ಯದ ವೇಳೆಯಲ್ಲಿ ರಿಷಬ್ ಪಂತ್ ಎರಡನೇ ಇನ್ನಿಂಗ್ಸ್ ನಲ್ಲಿ ಅವರ ಬ್ಯಾಟಿಂಗ್ ಅಭಿಮಾನಿಗಳು ಕಾತರರಾಗಿದ್ದರು. ಆದರೆ ಆರಂಭದಲ್ಲಿ ರನ್ ಗಳಿಸುವುದಕ್ಕೆ ಕೊಂಚ ತಡಕಾಡಿದ ರಿಷಬ್ ಪಂತ್ ನಂತರದಲ್ಲಿ ಆಕ್ರಮಣಕಾರಿ ಆಟಕ್ಕೆ ಮನ ಮಾಡಿದ್ದರು. ವರದಿಗಳ ಪ್ರಕಾರ ರಿಷಬ್ ಪಂತ್ ಮೂರು ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ರಿಷಬ್ ಪಂತ್ ಅವರ ಆಟದ ಶೈಲಿ ಸದ್ಯ ಎಲ್ಲರ ಗಮನ ಸೆಳೆದಿದೆ. ಬ್ಯಾಟಿಂಗ್ ಪರಿಸ್ಥಿತಿಗೆ ಅನುಗುಣವಾಗಿ ಆಕ್ರಮಣಕಾರಿ ಆಟ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಕಾರಣದಿಂದಲೇ ಪಂತ್ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ದದ ಅಭ್ಯಾಸ ಪಂದ್ಯದ ವೇಳೆಯಲ್ಲಿ ಪುಟ್‌ಬಾಲ್ ಕೌಶಲ್ಯವೇ ಹೆಚ್ಚು ಗಮನ ಸೇಳೆದಿತ್ತು. ಕ್ರಿಕೆಟ್ ಅಭ್ಯಾಸದ ಸಮಯದಲ್ಲಿ ವಿವಿಧ ಆಟಗಳಲ್ಲಿ ಆಟಗಾರರು ಪಾಲ್ಗೊಳ್ಳುವುದು ಸರ್ವೇ ಸಾಮಾನ್ಯ, ಆದರೆ ಆಟಗಾರರ ನಡುವೆ ಉತ್ತಮ ವಾತಾವರಣ ನಿರ್ಮಿಸುವುದಕ್ಕೆ ಇಂತಹ ಚಟುವಟಿಕೆಗಳು ಸಹಕಾರಿಯಾಗಿವೆ.
ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯ ಭಾರತ ತಂಡಕ್ಕೆ ಹಲವು ಕಾರಣಗಳಿಂದ ಮುಖ್ಯ ಎನಿಸಿದೆ. ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಲ್ಳು ತಂಡದ ಸಂಯೋಜನೆಯನ್ನು ಪರೀಕ್ಷೆಗೆ ಒಳಪಡಿಸುವ ಅಭ್ಯಾಸ ಪಂದ್ಯಗಳು ನೆರವಾಗುತ್ತಿವೆ, ಸದ್ಯ ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ ಮೋಡಿ ಮಾಡದೇ ಇದ್ದರೂ ಕೂಡ ಅಭಿಮಾನಿಗಳನ್ನು ಪುಟ್‌ಬಾಲ್ ಆಟದ ಮೂಲಕ ರಂಜಿಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ನೀಡದೇ ಇದ್ದರೂ ಕೂಡ ಪಂತ್ ಶ್ರೀಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ. ಅಭ್ಯಾಸ ಪಂದ್ಯದ ಮೂಲಕ ಆಟಗಾರರು ತಮ್ಮ ಫಾರ್ಮ್ ಪ್ರದರ್ಶಿಸಿದ್ದಾರೆ.. ಒಟ್ಟಿನಲ್ಲಿ, ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾತ್ರವಲ್ಲದೆ ಫುಟ್‌ಬಾಲ್ ಕೌಶಲ್ಯದಿಂದಲೂ ಗಮನ ಸೆಳೆದಿದೆ.
Topics

