ಗೂಗಲ್‌ನ ಹೊಸ ಫಿಟ್ನೆಸ್ ಟ್ರ್ಯಾಕರ್ ಫಿಟ್‌ಬಿಟ್ ಎಡ್ಜ್ ಬಿಡುಗಡೆ : ಕೇವಲ 5 ನಿಮಿಷ ಚಾರ್ಜ್ ಮಾಡಿ, 24 ಗಂಟೆ ಬಳಸಿ !
ಗೂಗಲ್ ಇದೀಗ ಹೊಸ ಫಿಟ್‌ಬಿಟ್ ಎಡ್ಜ್ ಪ್ರೀಮಿಯಂ ಫಿಟ್ನೆಸ್ ಟ್ರಾಕರ್ ಅನ್ನು ಪರಿಚಯಿಸಿದೆ. ಈ ಮೂಲಕ ಗೂಗಲ್ ವೇರೇಬಲ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ತನ್ನ ಮತ್ತೊಂದು ಗುರುತನ್ನು ಮೂಡಿಸಿದೆ.
By Archana V Bhat | ಅರ್ಚನಾ ವಿ ಭಟ್
1 min read
ಟೆಕ್ನಾಲಜಿ ದೈತ್ಯ ಆಲ್ಫಾಬೆಟ್ ನ ಗೂಗಲ್ ಇದೀಗ ಹೊಸ ಫಿಟ್‌ಬಿಟ್ ಎಡ್ಜ್ ಪ್ರೀಮಿಯಂ ಫಿಟ್ನೆಸ್ ಟ್ರಾಕರ್ ಅನ್ನು ಪರಿಚಯಿಸಿದೆ. ಈ ಮೂಲಕ ಗೂಗಲ್ ವೇರೇಬಲ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ತನ್ನ ಮತ್ತೊಂದು ಗುರುತನ್ನು ಮೂಡಿಸಿದೆ. ಇದು ಸ್ಕ್ರೀನ್‌ಲೆಸ್ ಫಿಟ್ನೆಸ್ ಟ್ರಾಕರ್ ಮತ್ತು ಪೂರ್ಣ ಪ್ರಮಾಣದ ಸ್ಮಾರ್ಟ್‌ವಾಚ್ ಆಗಿದ್ದು ಹೆಲ್ತ ಆಂಡ್ ಫಿಟ್ನೆಸ್ ಮೇಲೆ ಹೆಚ್ಚು ಒತ್ತು ಕೊಡುವ ಆಪಲ್ ಮತ್ತು ಜರ್ಮನ್ ಲಿಮಿಟೆಡ್‌ಗೆ ಸ್ಪರ್ಧೆ ನೀಡಲು ಸಜ್ಜಾಗಿದೆ.
ಗೂಗಲ್ ಫಿಟ್‌ಬಿಟ್ ಎಡ್ಜ್ ವೈಶಿಷ್ಟ್ಯ
ಈಗ ಬಿಡುಗಡೆಯಾಗಿರುವ ಗೂಗಲ್‌ನ ಹೊಸ ಫಿಟ್‌ಬಿಟ್ ಎಡ್ಜ್, ಫಿಟ್‌ಬಿಟ್ ಏರ್ ಮತ್ತು ಪಿಕ್ಸಲ್ ವಾಚ್ 5 ನಡುವೆ ಇರಿಸಲಾಗಿದೆ. ಒಎಲ್‌ಇಡಿ ಡಿಸ್ಪ್ಲೇ, ಬಿಲ್ಟ್‌ಇನ್ ಮ್ಯಾಪ್, ನೋಟಿಫಿಕೇಷನ್, ಮ್ಯೂಸಿಕ್ ಕಂಟ್ರೋಲ್ ಮತ್ತು ಹವಾಮಾನ ಮೊದಲಾದವುಗಳನ್ನು ಒಳಗೊಂಡಿದೆ. ಎಡ್ಜ್ 100 ಚಟುವಟಿಕೆಗಳನ್ನು, 50ಕ್ಕೂ ಹೆಚ್ಚು ವ್ಯಾಯಾಮದ ಮೋಡ್‌ಗಳನ್ನು ಮತ್ತು ರಿಯಲ್ ಟೈಮ್ ವರ್ಕ್ಔಟ್‌ಗಳನ್ನು ಒಳಗೊಂಡಿದೆ. ಇವೆಲ್ಲವೂ ಬಳಕೆದಾರರಿಗೆ ಅವರ ಫಿಟ್ನೆಸ್ ಗೋಲ್ ಅನ್ನು ತಲುಪಲು ಸಹಾಯ ಮಾಡುತ್ತದೆ. ಇದರಲ್ಲಿ 40% ಹೆಚ್ಚು ನಿಖರ ಜಿಪಿಎಸ್ ಇರುವುದು ಹೊರಾಂಗಣ ಓಟವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಸ್ಲೀಪ್ ಸಮ್ಮರಿ ಮತ್ತು ಕೋಚಿಂಗ್ ಟಿಪ್ಸ್‌ಗಳನ್ನು ನೀಡುತ್ತದೆ.
ಇನ್ನು ಇದರ ಸ್ಕ್ರೀನ್ ಬಗ್ಗೆ ಹೇಳುವುದಾರೆ ಹಿಂದಿನ ತಲೆಮಾರಿನ ಫಿಟ್‌ಬಿಟ್ ಟ್ರ್ಯಾಕರ್‌ಗಿಂತ 46% ದೊಡ್ಡದಾದ AMOLED ಸ್ಕ್ರೀನ್ ಹೊಂದಿದೆ. ಇದರಲ್ಲಿ ಸೈಡ್ ಬಟನ್ ಕೂಡ ಇದ್ದು ಬಳಕೆದಾರರು ವ್ಯಾಯಾಮದ ಮಧ್ಯೆ ಬ್ರೆಕ್ ತೆಗೆದುಕೊಳ್ಳಲು, ಪಾಸ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಅಂಬಿಕ್ AP5 ಮೈಕ್ರೋಕಂಟ್ರೋಲರ್ ಮತ್ತು 64MB NOR ಫ್ಲ್ಯಾಶ್ ಸ್ಟೋರೇಜ್ ಇದೆ. ಇನ್ನು ಸಂಪರ್ಕಕ್ಕಾಗಿ ಟ್ರ್ಯಾಕರ್ ಬ್ಲೂಟೂತ್ 5.4 ಅನ್ನು ಬೆಂಬಲಿಸುತ್ತದೆ.
ಗೂಗಲ್ ಫಿಟ್‌ಬಿಟ್ ಎಡ್ಜ್ ಬ್ಯಾಟರಿ
ಈಗ ಬಿಡುಗಡೆಯಾಗಿರುವ ಫಿಟ್‌ಬಿಟ್ ಎಡ್ಜ್ ಬದಲಾಯಿಸಬಹುದಾದ 65mAh ನ ಲಿಥಿಯಂ–ಐಯಾನ್ ಬ್ಯಾಟರಿ ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 7 ದಿನಗಳ ಕಾಲ ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 90 ನಿಮಿಷ ಬೇಕು. ಕೇವಲ 5 ನಿಮಿಷ ಚಾರ್ಜ್ ಮಾಡಿದ್ರೆ 24 ಗಂಟೆ ಬಳಸಬಹುದಾಗಿದೆ. ಇದರಲ್ಲಿರುವ 5 ATM ಮತ್ತು IP68 ರೇಟಿಂಗ್ ನೀರು ಮತ್ತು ಧೂಳಿಗೆ ಪ್ರತಿರೋಧವನ್ನು ನೀಡುತ್ತದೆ.
ಗೂಗಲ್ ಫಿಟ್‌ಬಿಟ್ ಎಡ್ಜ್ ಬೆಲೆ ಮತ್ತು ಲಭ್ಯತೆ
ಗೂಗಲ್ ಫಿಟ್‌ಬಿಟ್ ಎಡ್ಜ್ $179.99 (ಸರಿಸುಮಾರು ರೂ. 17,200) ರಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಸಣ್ಣ ಮತ್ತು ದೊಡ್ಡ ಗಾತ್ರಗಳಲ್ಲಿ ಸಿಲಿಕೋನ್ ಆಕ್ಟಿವ್ ಬ್ಯಾಂಡ್‌ಗಳು ಸಹ ದೊರೆಯುತ್ತವೆ. ಈ ಫಿಟ್‌ನೆಸ್ ಟ್ರ್ಯಾಕರ್ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲದೇ, ಕಂಪನಿಯು ವಿಶೇಷ ‘ಸ್ಟೀಫನ್ ಕರಿ ವಿಶೇಷ ಆವೃತ್ತಿ’ಯನ್ನು ಸಹ ಬಿಡುಗಡೆ ಮಾಡಿದೆ. ಇದರ ಬೆಲೆ $219.99 (ಸರಿಸುಮಾರು ರೂ. 21,000). ಇನ್ನು ಲಭ್ಯತೆ ಬಗ್ಗೆ ಹೇಳುವುದಾದರೆ ಫಿಟ್‌ಬಿಟ್ ಎಡ್ಜ್ ಗಾಗಿ ಪ್ರೀ ಆರ್ಡರ್‌ಗಳನ್ನು ಮಾಡಬಹುದಾಗಿದೆ. ಇದನ್ನು ಗೂಗಲ್ ಸ್ಟೋರ್ ಮತ್ತು ರಿಟೇಲ್ ಅಂಗಡಿಗಳಲ್ಲಿ ಅಕ್ಟೋಬರ್ 27 ರಿಂದ ಖರೀದಿಸಬಹುದಾಗಿದೆ.
Topics
ಸಂಬಂಧಿತ ಸುದ್ದಿಗಳು
tech
Anna Seve App : 5 ನಿಮಿಷದಲ್ಲೇ ರೇಷನ್ ಕಾರ್ಡ್ e-KYC : ಮನೆಯಲ್ಲೇ ‘ಅನ್ನ ಸೇವೆ’ ಆ್ಯಪ್ ಮೂಲಕ ಮಾಡುವುದು ಹೇಗೆ ?
tech
Samsung Galaxy S27 Ultra : ಸ್ಯಾಮ್ಸಂಗ್ ಗ್ಯಾಲಕ್ಸಿ ಆಲ್ಟ್ರಾ ಎಸ್ 27 ಫೀಚರ್ಸ್ ಲೀಕ್... ಅಬ್ಬಬ್ಬಾ
tech
ವಾಟ್ಸಾಪ್ನಲ್ಲಿ ಹೊಸ ಫೀಚರ್ಸ್ : ಮಕ್ಕಳ ಮೇಲೆ ಪೋಷಕರ ನಿಯಂತ್ರಣ
tech

