Sports

T20 World Cup Harmeet Singh: ಅಮೆರಿಕ ಪರ ಆಡುತ್ತಿದ್ದಾನೆ ಭಾರತದ U-19 ವಿಶ್ವಕಪ್ ಸ್ಟಾರ್ !

Published by
Kannada News Next Desk

Harmeet Singh : ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup 2024) ಯಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಅಮೆರಿಕ ತಂಡ ಸತತ 2 ಗೆಲುವುಗಳನ್ನು ದಾಖಲಿಸಿದೆ. ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ತಂಡಕ್ಕೆ ಭಾರತೀಯರೇ ಶ್ರೀರಕ್ಷೆ. ತಂಡದ ನಾಯಕ ಮೊನಾಂಕ್ ಪಟೇಲ್ ಗುಜರಾತ್’ನವರು. ಮುಂಬೈನ ಎಡಗೈ ಮಧ್ಯಮ ವೇಗಿ ಸೌರಭ್ ನೇತ್ರವಲ್ಕರ್, ಬಲಗೈ ಮಧ್ಯಮ ವೇಗಿ ಜಸ್ದೀಪ್ ಸಿಂಗ್, ನಿತೀಶ್ ಕುಮಾರ್, ಕರ್ನಾಟಕದ ಚಿಕ್ಕಮಗಳೂರು ಮೂಲದ ಎಡಗೈ ಸ್ಪಿನ್ನರ್ ನೋಶ್’ ತುಶ್ ಕೆಂಜಿಗೆ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ಈಗ ಅಮೆರಿಕ ಪರ ಆಡುತ್ತಿದ್ದಾರೆೆ.

Image Credit to Original Source

ಈ ಮಧ್ಯೆ 2012ರಲ್ಲಿ ಐಸಿಸಿ ಅಂಡರ್-19 ವಿಶ್ವಕಪಿ ಗೆದ್ದ ಭಾರತ ತಂಡದ ಸದಸ್ಯ ಹರ್ಮೀತ್ ಸಿಂಗ್ (Harmeet Singh )ಕೂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ತಂಡದ ಪರ ಆಡುತ್ತಿದ್ದಾರೆ. 32 ವರ್ಷದ ಎಡಗೈ ಸ್ಪಿನ್ ಆಲ್ರೌಂಡರ್ ಹರ್ಮೀತ್ ಸಿಂಗ್, 2012ರಲ್ಲಿ ಉನ್ಮುಕ್ತ್ ಚಾಂದ್ ನೇತೃತ್ವದಲ್ಲಿ ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯನಾಗಿದ್ದರು.

ದೇಶೀಯ ಕ್ರಿಕೆಟ್’ನಲ್ಲಿ ಮುಂಬೈ ಮತ್ತು ತ್ರಿಪುರಾ ತಂಡಗಳನ್ನು ಪ್ರತಿನಿಧಿಸಿರುವ ಹರ್ಮೀತ್ ಸಿಂಗ್, ರೆಸ್ಟ್ ಆಫ್ ಇಂಡಿಯಾ, ಇಂಡಿಯಾ ಬಿ ಹಾಗೂ ಐಪಿಎಲ್’ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಗಳ ಪರ ಆಡಿದ್ದಾರೆ. 31 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಹರ್ಮೀತ್ ಸಿಂಗ್ 87 ವಿಕೆಟ್ ಹಾಗೂ 19 ಲಿಸ್ಟ್ ಎ ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ. ಭಾರತದಲ್ಲಿ ಅವಕಾಶಗಳ ಕೊರತೆಯ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದ ಹರ್ಮೀತ್ ಸಿಂಗ್, ಅಲ್ಲಿನ ನಿಯಮದನ್ವಯ ಅಮೆರಿಕ ಪೌರತ್ವ ಪಡೆದು ಇದೀಗ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್ಎ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇದನ್ನೂ ಓದಿ : Franco Nsubuga: 4 ಓವರ್, 4 ರನ್, 2 ವಿಕೆಟ್: ಟಿ20 ವಿಶ್ವಕಪ್’ನಲ್ಲಿ 43 ವರ್ಷದ ಸ್ಪಿನ್ನರ್ ಕಮಾಲ್!

ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಅಮೆರಿಕ:
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಅಮೋಘ ಪ್ರದರ್ಶನ ತೋರುತ್ತಿರುವ ಕ್ರಿಕೆಟ್ ಶಿಶು ಅಮೆರಿಕ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಡಲ್ಲಾಸ್’ನ ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕ ತಂಡ ಸೂಪರ್ ಓವರ್’ನಲ್ಲಿ ಪಾಕಿಸ್ತಾನ ತಂಡವನ್ನು 5 ರನ್’ಗಳಿಂದ ಮಣಿಸಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು.

Image Credit to Original Source

ಪಂದ್ಯ ಟೈ ಆದ ಕಾರಣ ಸೂಪರ್ ಓವರ್’ಗೆ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ಅಮೆರಿಕ 1 ಓವರ್’ನಲ್ಲಿ 1 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿದರೆ, 6 ಎಸೆತಗಳಲ್ಲಿ 19 ರನ್’ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 1 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿ 5 ರನ್’ಗಳಿಂದ ಅಮೆರಿಕಕ್ಕೆ ಶರಣಾಯಿತು. ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಅಮೆರಕ ಬೌಲರ್’ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ : Azam Khan: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ದಢೂತಿ ಕ್ರಿಕೆಟಿಗನನ್ನು “ಕೊಬ್ಬಿದ ಆನೆ” ಎಂದ ಕ್ರಿಕೆಟ್ ಪ್ರೇಕ್ಷಕ!

ನಂತರ ಗುರಿ ಬೆನ್ನಟ್ಟಿದ ಅಮೆರಿಕ 20 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆಯಿತು. ಅಮೆರಿಕ ತಂಡದ ನಾಯಕ, ಗುಜರಾತ್ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊನಾಂಕ್ ಪಟೇಲ್ 38 ಎಸೆತಗಳಲ್ಲಿ ರನ್ ಗಳಿಸಿದರೆ, ಆ್ಯಂಡ್ರೀಸ್ ಗೌಸ್ 26 ಎಸೆತಗಳಲ್ಲಿ 35 ರನ್ ಹಾಗೂ ಆ್ಯರೋನ್ ಜೋನ್ಸ್ 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರು. ಅಮೆರಿಕ ಪರ ಬೌಲಿಂಗ್’ನಲ್ಲಿ ಮಿಂಚಿದ ಚಿಕ್ಕಮಗಳೂರು ಮೂಲದ ಎಡಗೈ ಸ್ಪಿನ್ನರ್ ನೋಶ್’ತುಷ್ ಕೆಂಜಿಗೆ 4 ಓವರ್’ಗಳಲ್ಲಿ 30 ರನ್ನಿತ್ತು 3 ವಿಕೆಟ್ ಪಡೆದರು.

ಇದನ್ನೂ ಓದಿ : Virat Kohli: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ಕಿಂಗ್ ಕೊಹ್ಲಿ!

ಮುಂಬೈ ಮೂಲದ ಎಡಗೈ ಮಧ್ಯಮ ವೇಗದ ಬೌಲರ್ ಸೌರಭ್ ನೇತ್ರವಲ್ಕರ್ 18 ರನ್ನಿಗೆ 2 ವಿಕೆಟ್ ಉರುಳಿಸಿದರು. ಟಿ20 ವಿಶ್ವಕಪ್’ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಅಮೆರಿಕ ತಂಡ, ಜೂನ್ 12ರಂದು ನಡೆಯುವ ಪಂದ್ಯದಲ್ಲಿ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ.

T20 World Cup 2024 Harmeet Singh India U-19 World Cup star playing for USA

Share