BSNLನಿಂದ ಅತ್ಯಾಕರ್ಷಕ ಕೊಡುಗೆ : ಕೇವಲ 1 ರೂ.ಗೆ 24 ದಿನಗಳ ವ್ಯಾಲಿಡಿಟಿಯ ಸಿಮ್‌ ಬಿಡುಗಡೆ..!

ಬಿಎಸ್‌ಎನ್‌ಎಲ್‌ ನ ಈ 1 ರೂ. ಸಿಮ್‌ ಯೋಜನೆಯ ಗುರಿ ಕಡಿಮೆ ವೆಚ್ಚದಲ್ಲಿ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವುದಾಗಿದೆ.

By Archana V Bhat

1 min read

WhatsAppPost
BSNLನಿಂದ ಅತ್ಯಾಕರ್ಷಕ ಕೊಡುಗೆ : ಕೇವಲ 1 ರೂ.ಗೆ 24 ದಿನಗಳ ವ್ಯಾಲಿಡಿಟಿಯ ಸಿಮ್‌ ಬಿಡುಗಡೆ..!
BSNLನಿಂದ ಅತ್ಯಾಕರ್ಷಕ ಕೊಡುಗೆ : ಕೇವಲ 1 ರೂ.ಗೆ 24 ದಿನಗಳ ವ್ಯಾಲಿಡಿಟಿಯ ಸಿಮ್‌ ಬಿಡುಗಡೆ..!

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (BSNL) ಗ್ರಾಹಕರಿಗಾಗಿ ತನ್ನ ಹಳೆಯ 1 ರೂ. ಪ್ಲಾನ್‌ ಅನ್ನು ಮರಳಿ ತಂದಿದೆ. ಬಿಎಸ್‌ಎನ್‌ಎಲ್‌ ಈ ರಿಚಾರ್ಜ್‌ ಪ್ಯಾಕ್‌ ಅನ್ನು FRC (ಫಸ್ಟ್‌ ರಿಚಾರ್ಜ್‌ ಕೂಪನ್) ಎಂದು ಹೆಸರಿಸಿದೆ. ಇದರ ಪ್ರಕಾರ ಬಿಎಸ್‌ಎನ್‌ಎಲ್‌ ಸಿಮ್‌ ನ ಮಾನ್ಯತೆಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ. ಇದನ್ನು ಸಿಮ್‌ ಕಾರ್ಡ್‌ ಪಡೆದ ನಂತರ ಮೊದಲ ಬಾರಿಗೆ ಮಾಡಬೇಕಾದ ರಿಚಾರ್ಜ್‌ ಆಗಿದೆ.

ಬಿಎಸ್‌ಎನ್‌ಎಲ್‌ನ ಈ ಕೊಡುಗೆ ಹೊಸ ಗ್ರಾಹಕರಿಗೆ ಮಾತ್ರ ಎಂಬುದು ವಿಶೇಷ. ಅಂದರೆ ಈ ಯೋಜನೆಯನ್ನು ಯಾವುದೇ ಹಳೆಯ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರೀಪೇಯ್ಡ್‌ ಗ್ರಾಹಕರು ಪಡೆಯಲು ಸಾಧ್ಯವಾಗುವುದಿಲ್ಲ.

ಬಿಎಸ್‌ಎನ್‌ಎಲ್‌ ನ ಈ 1 ರೂ. ಸಿಮ್‌ ಯೋಜನೆಯ ಗುರಿ ಕಡಿಮೆ ವೆಚ್ಚದಲ್ಲಿ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವುದಾಗಿದೆ. ಕಡಿಮೆ ಬೆಲೆಯ ಸಿಮ್‌ ಬಯಸುವ ಗ್ರಾಹಕರಿಗೆ ಈ ಯೋಜನೆಯು ಉತ್ತಮವಾಗಿದೆ.

1 ರೂ. ಸಿಮ್ ಪ್ಲಾನ್‌ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ನ ಹೊಸ 1 ರೂ. ಸಿಮ್‌ ಪ್ಲಾನ್‌ 24 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 1 ಜಿಬಿ ಡೇಟಾವನ್ನು ನೀಡುತ್ತದೆ. ಇನ್ನು ದಿನವೊಂದಕ್ಕೆ 100 SMS ಮತ್ತು ಅನಿಯಮಿತ ಧ್ವನಿ ಕರೆ ಈ ಯೋಜನೆಯಲ್ಲಿದೆ. ಈ ಯೋಜನೆಯ ಪ್ರಯೋಜನಗಳು ಸ್ವಲ್ಪ ಕಡಿಮೆಯಾಗಿದ್ದರೂ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಮತ್ತು ಸೇವೆಗಳನ್ನು ಬಯಸುವವರಿಗೆ ಇದು ಉತ್ತಮವಾಗಿದೆ.

Topics

ಸಂಬಂಧಿತ ಸುದ್ದಿಗಳು