ತಂತ್ರಜ್ಞಾನ ಲೋಕದ ದೈತ್ಯ ಗೂಗಲ್ (Google) ಅತ್ಯಾಧುನಿಕ ತಂತ್ರಜ್ಞಾನದ ಗೂಗಲ್ ಫಿಟ್‌ಬಿಟ್ ಏರ್' (Fitbit Air) ಫಿಟ್‌ನೆಸ್ ಟ್ರ್ಯಾಕರ್ ಅನ್ನು ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಪರಿಚಯಿಸಿದೆ. ಡಿಸಪ್ಲೈ ಅಥವಾ ಸ್ಕ್ರೀನ್ ಇಲ್ಲದೆಯೇ ಮಿನಿಮಲಿಸ್ಟ್ ಲುಕ್‌ನಲ್ಲಿ ಬಿಡುಗಡೆ ಆಗಿರುವ ಈ ಸಾಧನ ಆರೋಗ್ಯ ಜಾಗೃತಿಗಾಗಿ ರೂಪುಗೊಂಡಿದೆ. ಸದ್ಯ ಬೆಲೆಯ ಬಗ್ಗೆ ಚರ್ಚೆಯಾಗುತ್ತಿದೆ.
ಏನಿದು ಫಿಟ್‌ಬಿಟ್ ಏರ್, ಇದರ ವಿಶೇಷತೆಗಳೇನು?
ಗೂಗಲ್ ಪರಿಚಯಿಸಿರುವ ಈ ಫಿಟ್‌ಬಿಟ್ ಏರ್ ಆರೋಗ್ಯದ ಮೇಲ್ವಿಚಾರಣೆಯನ್ನು ಮಾಡಲು ಹೆಚ್ಚು ಸಹಕಾರಿಯಾಗಿದೆ. ಈ ಗ್ಯಾಜೆಟ್‌ನಲ್ಲಿ ಯಾವುದೇ ಸ್ಕ್ರೀನ್ ಇಲ್ಲದೇ ಇರೋದ್ರಿಂದಾಗಿ ಬಳಕೆದಾರರಿಗೆ ಯಾವುದೇ ನೋಟಿಫಿಕೇಶನ್‌ಗಳ ಕಿರಿಕಿರಿ ಇಲ್ಲದೇ ಆರೋಗ್ಯದ ಮಾಹಿತಿಯನ್ನು ಒದಗಿಸಲಿದೆ.
ನಿಮ್ಮ ಆರೋಗ್ಯದ ಸಂಪೂರ್ಣ ತಪಾಸಣೆಗೆ ಇದು ಸಹಕಾರಿಯಾಗಿದೆ. ಅದ್ರಲ್ಲೂ 24/7 ಕಾಲ ಹೃದಯದ ಬಡಿತ (Heart Rate) ಅಲ್ಲದೇ ರಕ್ತದಲ್ಲಿ ಇರುವ ಆಮ್ಲಜನಕದ ಮಟ್ಟ (SpO2, ನಿದ್ರೆಯ ಗುಣಮಟ್ಟವನ್ನು ಅಚ್ಚುಕಟ್ಟಾಗಿ ಟ್ರ್ಯಾಕ್ ಮಾಡುತ್ತದೆ.
ಈ ಗ್ಯಾಜೆಟ್‌ನಲ್ಲಿ ಯಾವುದೇ ಸ್ಕ್ರೀನ್ ಇಲ್ಲದ ಕಾರಣದಿಂದ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು ಬರೋಬ್ಬರಿ 7 ದಿನಗಳ ವರೆಗೆ ಬಾಳಿಕೆ ಬರುತ್ತದೆ. ಅಲ್ಲದೇ ಕೇವಲ 5 ನಿಮಿಷಗಳ ಕಾಲ ಚಾರ್ಜಿಂಗ್ ಮಾಡಿದ್ರೆ ಸಾಕು 24 ಗಂಟೆಗಳ ಕಾಲ ಬಳಕೆ ಮಾಡೋದಕ್ಕೆ ಸಹಕಾರಿಯಾಗಿದೆ. ಅಲ್ಲದೇ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನೂ ಕೂಡ ಒಳಗೊಂಡಿದೆ.
ಫಿಟ್‌ಬಿಟ್ ಏರ್ ಭಾರತದಲ್ಲಿ ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿರುವ ಗೂಗಲ್ ಫಿಟ್‌ಬಿಟ್ ಏರ್ ಗೆ ಸದ್ಯ ₹13,999 ಬೆಲೆಯನ್ನು ನಿಗದಿ ಪಡಿಸಲಾಗಿದೆ. ಗೂಗಲ್ ಸ್ಟೋರ್, ಫ್ಲಿಪ್‌ಕಾರ್ಟ್ ಆನ್‌ಲೈನ್ ಫ್ಲಾಟ್‌ಫಾರ್ಮ್ ಮಾತ್ರವಲ್ಲದೇ ಕ್ರೋಮಾ ಮತ್ತು ರಿಲಯನ್ಸ್ ಡಿಜಿಟಲ್ ರಿಟೇಲ್ ಶಾಪ್‌ಗಳ ಮೂಲಕವೂ ನಾಳೆಯಿಂದ (ಕ ಅಕ್ಟೋಬರ್ 2) ಮಾರಾಟಕ್ಕೆ ಲಭ್ಯವಾಗಲಿದೆ.
ಗೂಗಲ್ ಫಿಟ್‌ಬಿಟ್ ಏರ್ ಖರೀದಿಗೆ ವಿವಿಧ ಬ್ಯಾಂಕುಗಳು ಇಎಂಐ ಆಫರ್ ಗಳನ್ನು ಕೂಡ ನೀಡುತ್ತಿವೆ. ಹೆಚ್‌ಡಿಎಫ್‌ಸಿ (HDFC) ಮತ್ತು ಐಸಿಐಸಿಐ (ICICI) ಕಾರ್ಡ್‌ಗಳ ಮೇಲೆ ₹1,000 ವರೆಗೆ ಕ್ಯಾಶ್‌ಬ್ಯಾಕ್ ಹಾಗೂ ನೋ-ಕಾಸ್ಟ್ ಇಎಂಐ ಸೌಲಭ್ಯಗಳನ್ನು ಕೂಡ ಪಡೆಯಬಹುದಾಗಿದೆ.
ಜನಸಾಮಾನ್ಯರಿಗೆ ದುಬಾರಿ ಫಿಟ್‌ಬಿಟ್ ಏರ್
ಗೂಗಲ್ ಜನಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಫಿಟ್‌ಬಿಟ್ ಏರ್ ಬಿಡುಗಡೆ ಮಾಡಿದೆ. ಅಲ್ಲದೇ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದ್ದರೂ, ಭಾರತದ ಮಾರುಕಟ್ಟೆಯಲ್ಲಿ ಇದರ ₹14,000 ಆಸುಪಾಸಿನಲ್ಲಿದೆ. ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದ ಜನರಿಗೆ ಇದರ ಖರೀದಿ ತುಸು ಕಷ್ಟ. ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್‌ವಾಚ್‌ಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌ಗಳು ಅತ್ಯಂತ ಕಡಿಮೆಗೆ ಲಭ್ಯವಿದೆ.
ಅಲ್ಲದೇ ಗೂಗಲ್ ಫೀಟ್‌ಬಿಟ್ ಏರ್ ಡಿಸ್‌ಪ್ಲೇ ಕೂಡ ಒಳಗೊಂಡಿಲ್ಲ. ಹೀಗಾಗಿ ಜನಸಾಮಾನ್ಯರು ಗರಿಷ್ಠ ಬೆಲೆ ನೀಡಿ ಇದನ್ನು ಖರೀದಿ ಮಾಡ್ತಾರಾ ಅನ್ನೋದು ಸದ್ಯದ ಕುತೂಹಲ. ಆರೋಗ್ಯದ ಬಗ್ಗೆ ಅತಿಯಾದ ಕಾಳಜಿವಹಿಸುವವರು ಈ ಗ್ಯಾಜೆಟ್ ಖರೀದಿ ಮಾಡುವುದು ಪಕ್ಕಾ. ಅಲ್ಲದೇ ಪ್ರೀಮಿಯಂ ಗ್ರಾಹಕರನ್ನು ಇದು ಖಂಡಿತಾ ಸೆಳೆಯಲಿದೆ.