techಪ್ರಮುಖ ಸುದ್ದಿಗಳು

Anna Seve App : 5 ನಿಮಿಷದಲ್ಲೇ ರೇಷನ್ ಕಾರ್ಡ್ e-KYC : ಮನೆಯಲ್ಲೇ ‘ಅನ್ನ ಸೇವೆ’ ಆ್ಯಪ್ ಮೂಲಕ ಮಾಡುವುದು ಹೇಗೆ ?

ದಿನಗಟ್ಟಲೆ ನ್ಯಾಯಬೆಲೆ ಅಂಗಡಿ, ಸೈಬರ್‌ ಸೆಂಟರ್‌ ಮುಂದೆ ನಿಲ್ಲುವ ಅವಶ್ಯಕತೆ ಇರೋದಿಲ್ಲ. ಕೇವಲ 5 ನಿಮಿಷದಲ್ಲಿ ಮನೆಯಲ್ಲಿಯೇ ಕುಳಿತು ಅನ್ನ ಆಪ್‌ ಮೂಲಕ ರೇಷನ್‌ ಕಾರ್ಡ್‌ ಇಕೆವೈಸಿ

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
anna seve app ration card e kyc karnataka
anna seve app ration card e kyc karnataka

ಬೆಂಗಳೂರು: ಕರ್ನಾಟಕ ಸರಕಾರ ಪಡಿತರ ಕಾರ್ಡುದಾರರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ರೇಷನ್ ಕಾರ್ಡ್‌ ಇ-ಕೆವೈಸಿ (Ration Card e-KYC) ಮಾಡಿಸುವುಕ್ಕೆ ಇನ್ಮುಂದೆ ದಿನಗಟ್ಟಲೆ ನ್ಯಾಯಬೆಲೆ ಅಂಗಡಿ, ಸೈಬರ್‌ ಸೆಂಟರ್‌ ಮುಂದೆ ನಿಲ್ಲುವ ಅವಶ್ಯಕತೆ ಇರೋದಿಲ್ಲ. ಕೇವಲ 5 ನಿಮಿಷದಲ್ಲಿ ಮನೆಯಲ್ಲಿಯೇ ಕುಳಿತು ಅನ್ನ ಆಪ್‌ ಮೂಲಕ ರೇಷನ್‌ ಕಾರ್ಡ್‌ ಇಕೆವೈಸಿ ಮಾಡಿಸಬಹುದಾಗಿದೆ.

ಅನ್ನಸೇವೆ ಯಾವೆಲ್ಲಾ ಜಿಲ್ಲೆಗಳಲ್ಲಿ ಲಭ್ಯ?

ಕರ್ನಾಟಕ ಸರಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನ್ನಸೇವೆ ಆಪ್‌ ಅನ್ನು ಲಾಂಚ್‌ ಮಾಡಿದೆ. ಆದರೆ ಸದ್ಯ ಈ ನೂತನ ತಂತ್ರಜ್ಞಾನವನ್ನು ಕರ್ನಾಟಕದ ಆಯ್ದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ (Pilot Basis) ಆರಂಭಿಸಲಾಗುತ್ತದೆ. ಅಕ್ಟೋಬರ್‌ 10 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಸೇವೆ ವಿಸ್ತರಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಫೇಸ್ ಅಥೆಂಟಿಕೇಷನ್ (Face Authentication) ತಂತ್ರಜ್ಞಾನ

ಕರ್ನಾಟಕ ಸರಕಾರ ಸಿದ್ದಪಡಿಸಿರುವ ಅನ್ನಸೇವೆ ಆಪ್‌ ಆಧಾರ್‌ ಕಾರ್ಡ್‌ ಆಧಾರಿತವಾಗಿ ಕೆಲಸ ಮಾಡುತ್ತದೆ. ಆಧಾರ್‌ ಕಾರ್ಡ್‌ ಬಳಸಿ ಮುಖದ ಗುರುತು ಪತ್ತೆ ಹಚ್ಚುವ (Face Authentication) ತಂತ್ರಜ್ಞಾನವನ್ನು ಬಳಿಸಿ ಇಕೆವೈಸಿ ಪ್ರಕ್ರಿಯೆ ನಡೆಯುತ್ತದೆ. ರೇಷನ್‌ ಕಾರ್ಡ್‌ನಲ್ಲಿ ಇರುವ ಕುಟುಂಬ ಪ್ರತೀ ಸದಸ್ಯರು ಕೂಡ ಮನೆಯಲ್ಲಿಯೇ ಕುಳಿತು, ಮೊಬೈಲ್‌ ಕ್ಯಾಮೆರಾ ಬಳಸಿ ಫೇಸ್‌ ದೃಢೀಕರಣ ಮಾಡಬಹುದಾಗಿದೆ.

ಇಕೆವೈಸಿ (e-KYC) ಮಾಡಿಸಲು ಯಾವೆಲ್ಲಾ ಆ್ಯಪ್‌ಗಳು ಬೇಕು ?

ಅನ್ನಸೇವೆ ಆಪ್‌ ಮೂಲಕ ಮುಖದ ದೃಢೀಕರಣ ಮಾಡಿಸಲು ನಿಮ್ಮ ಸ್ಮಾರ್ಟ್‌ ಪೋನ್‌ನಲ್ಲಿ ಒಟ್ಟು ಮೂರು ಆಫ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದ್ರೆ ಆ ಆಪ್‌ಗಳು ಯಾವುವು ನೋಡೋದಾದ್ರೆ.

  • Anna Seve (ಅನ್ನ ಸೇವೆ ಆ್ಯಪ್‌)

  • CeG Face KYC

  • AadhaarFaceRD (ಆಧಾರ್ ಫೇಸ್ ಆರ್.ಡಿ. ಆ್ಯಪ್)

ಗೂಗಲ್ ಪ್ಲೇ ಸ್ಟೋರ್‌ (Google Play Store) ನಿಂದ ಈ ಮೂರು ಆಫ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ರೆ ಕೇವಲ ಐದೇ ಐದು ನಿಮಿಷಗಳಲ್ಲಿ ನೀವು ಸುಲಭವಾಗಿ ರೇಷನ್‌ ಕಾರ್ಡ್‌ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಮನೆಯಲ್ಲೇ ಇ-ಕೆವೈಸಿ ಮಾಡುವುದು ಹೇಗೆ ?

  • ಹಂತ 1: ನಿಮ್ಮ ಆಂಡ್ರಾಯ್ಡ್‌ ಪೋನ್‌ನಲ್ಲಿ Anna Seve', 'CeG Face KYC' ಮತ್ತು 'AadhaarFaceRD' ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿ ಇಟ್ಟುಕೊಳ್ಳಿ.

  • ಹಂತ 2: 'ಅನ್ನ ಸೇವೆ' ಆಪ್‌ ಓಪನ್‌ ಮಾಡುವ ಮೂಲಕ, ಆಪ್‌ನಲ್ಲಿ ಕೇಳಲಾಗಿರುವ ಮಾಹಿತಿಯ ಜೊತೆಗೆ ಆಧಾರ್‌ ಸಂಖ್ಯೆಯನ್ನು ನಮೂದಿಸಿ.

  • ಹಂತ 3: ರೇಷನ್‌ ಕಾರ್ಡ್‌ನಲ್ಲಿ ಇರುವ ಎಲ್ಲಾ ಸದಸ್ಯರ ವಿವರಗಳನ್ನು ನಮೂದಿಸಿ, ಯಾವ ಸದಸ್ಯರ ಇ-ಕೆವೈಸಿ ಮಾಡಬೇಕೋ ಅವರ ಹೆಸರನ್ನು ಆಯ್ಕೆ ಮಾಡಿ.

  • ಹಂತ 4: ಆಧಾರ್ ಆಧಾರಿತ ಮುಖದ ದೃಢೀಕರಣಕ್ಕಾಗಿ (Face Authentication) ಮೊಬೈಲ್‌ ಕ್ಯಾಮೆರಾದ ಮುಂದೆ ಮುಖವನ್ನು ಸ್ಕ್ಯಾನ್‌ ಮಾಡಲು ಸೂಚಿಸಿ.

  • ಹಂತ 5: 'AadhaarFaceRD' ಆ್ಯಪ್ ಸಹಾಯದಿಂದ ಮುಖದ ಗುರುತನ್ನು ಪರಿಶೀಲಿಸಿ. ನಂತರ ರೇಷನ್‌ ಕಾರ್ಡ್‌ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಪಡಿತರ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬರು ಕೂಡ ಇಕೆವೈಸಿ ಮಾಡಿಸುವುದು ಕಡ್ಡಾಯ. ಈ ಹೊಸ ಮೊಬೈಲ್‌ ಆಪ್‌ ಸೌಲಭ್ಯದಿಂದ ಜನಸಾಮಾನ್ಯರು ಗಂಟಗಟ್ಟಲೆ ಕಾಯುವ ಬದಲು ಅನ್ನ ಸೇವೆ ಆಪ್‌ ಬಳಸಿ ಇಕೆವೈಸಿ ಮಾಡಿಸಿಕೊಳ್ಳಿ. anna seve app link : https://play.google.com/store/apps/details?id=in.gov.karnataka.ahara.annaseva&hl=en_IE

Topics

ಸಂಬಂಧಿತ ಸುದ್ದಿಗಳು