ಜಿಯೋ ರೀಚಾರ್ಜ್‌ ಪ್ಲಾನ್‌ : ಕೇವಲ 200 ರೂ. ಗೆ 30GB ಡಾಟಾ, 15 OTT ಪ್ಲಾಟ್‌ಫಾಮ್‌ …!

ದೇಶದ ಅತ್ಯಂತ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ಹೊಸ ರೀಚಾರ್ಜ್‌ ಪ್ರೀಪೇಡ್‌ ಪ್ಲಾನ್ ಒಂದನ್ನು ಪರಿಚಯಿಸಿದೆ. 28 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್‌ ನಲ್ಲಿ ಏನೆಲ್ಲಾ ಇದೆ?

ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹೊಸ ರೀಚಾರ್ಜ್‌ ಪ್ಲಾನ್‌ಗಳನ್ನು ಕಾಲಕಾಲಕ್ಕೆ ಪರಿಚಯಿಸುತ್ತಲೇ ಬಂದಿದೆ. ಇದೀಗ ತನ್ನ ಗ್ರಾಹಕರಿಗಾಗಿ ಲಾಭದಾಯಕದ ಮತ್ತೊಂದು ಪ್ಲಾನ್‌ ಬಿಡುಗಡೆಮಾಡಿದೆ. ಅದು 200 ರೂ. ಗಳ ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲಾನ್. ಈ ಪ್ಲಾನ್‌ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ವಿಶೇಷವೆಂದರೆ ರೆಗ್ಯೂಲರ್‌ ಪ್ಲಾನ್‌ ಇಲ್ಲದೆಯೇ ಮನರಂಜನೆಯ ಮಜಾ ನೀಡುತ್ತದೆ.

30 GB ಡೇಟಾದ ಜೊತೆಗೆ 28 ದಿನದ ಮಾನ್ಯತೆ

ಜಿಯೋದ 200 ರೂ. ಗಳ ಪ್ರಿಪೇಯ್ಡ್‌ ಪ್ಲಾನ್‌ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ 30 GB ಹೈ–ಸ್ಪೀಡ್‌ ಡೇಟಾ ಸಿಗುತ್ತದೆ. ಇದರ ಹೊರತಾಗಿ ಅನೇಕ ಎಂಟರ್‌ಟೇನಮೆಂಟ್‌ ಸರ್ವೀಸ್‌ ಗಳಿಗೆ ಪ್ರವೇಶ ಕೂಡಾ ದೊರೆಯುತ್ತದೆ. ಈ ಪ್ಲಾನ್‌ OTT ಸಬ್‌ಸ್ಕ್ರಿಪ್ಷನ್‌ ಜೊತೆಗೆ ಹೆಚ್ಚಿನ ಡೇಟಾ ಬಯಸುವ ಬಳಕೆದಾರರಿಗೆ ಅನುಕೂಲಕರವಾಗಿದೆ. ಈ ಪ್ಲಾನ್‌ ಅನ್‌ಲಿಮಿಟೆಡ್‌ ಡೇಟಾ ಯೋಜನೆಗಿಂತ ವಿಷಯ ಕೇಂದ್ರಿತ ಯೋಜನೆಯಾಗಿದೆ.

ಯಾವೆಲ್ಲ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ

ಈ ರೀಚಾರ್ಜ್ ಪ್ಲಾನ್‌ನ ಅತಿ ದೊಡ್ಡ ವೈಶಿಷ್ಟ್ಯವೆಂದರೆ 15 OTT ಗಳಿಗೆ ಪ್ರವೇಶ. ಅಮೆಜಾನ್‌ ಪ್ರೈಮ್‌, ಜಿಯೋಹಾಟ್‌ಸ್ಟಾರ್‌ ಮತ್ತು ಹಲವಾರು ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಂತಹ ಪ್ರಯೋಜನಗಳನ್ನು ಒಳಗೊಂಡಿದೆ. ಇವೆಲ್ಲವೂ ಜಿಯೋದ ಬಂಡಲ್ಡ್ ಮನರಂಜನಾ ಕೊಡುಗೆಯ ಅಡಿಯಲ್ಲಿ ಲಭ್ಯವಿದೆ. ಈ ಚಂದಾದಾರಿಕೆಗಳು ಬಳಕೆದಾರರಿಗೆ ಪ್ರತ್ಯೇಕ OTT ಚಂದಾದಾರಿಕೆಗಳನ್ನು ಖರೀದಿಸುವ ಅಗತ್ಯವಿಲ್ಲ. ಇದರ ಮೂಲಕವೇ ಸಿನಿಮಾ, ಟಿವಿ ಶೋಗಳು, ಲೈವ್‌ ಸ್ಪೋರ್ಟ್ಸ್‌ ಮುಂತಾದವುಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಚಂದಾದರ ಒಟ್ಟಾರೆ ವೆಚ್ಚ ಕಡಿಮೆಯಾಗುತ್ತದೆ.

Exit mobile version