ಗಜಕೇಸರಿ ಯೋಗದಿಂದ ಬದಲಾಗಲಿದೆ ಈ ರಾಶಿಗಳ ಭವಿಷ್ಯ; ಹರಿಯ ಕೃಪೆಯಿಂದ ಸಕಲ ಸಂಕಷ್ಟ ದೂರ

ಅತ್ಯಂತ ದಿವ್ಯವಾದ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ. ಶ್ರೀಮನ್ನಾರಾಯಣನ ಕೃಪೆ ಹಾಗೂ ಈ ರಾಜಯೋಗದ ಪ್ರಭಾವದಿಂದ ಮುಖ್ಯವಾಗಿ 5 ರಾಶಿಗಳ ಜಾತಕರ ಬದುಕಿನಲ್ಲಿ ದೊಡ್ಡ ಮಟ್ಟದ ಧನಾತ್ಮಕ ಬದಲಾವಣೆಗಳು ಬರಲಿವೆ.

By Meghana Pranuth

1 min read

WhatsAppPost
Rashi-phala
Rashi-phala

ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶುಭ ಮತ್ತು ಶಕ್ತಿಶಾಲಿ ಯೋಗಗಳಲ್ಲಿ ‘ಗಜಕೇಸರಿ ಯೋಗ’ವೂ ಒಂದು. ದೇವಗುರು ಬೃಹಸ್ಪತಿ (ಗುರು) ಮತ್ತು ಚಂದ್ರರ ಮಂಗಳಕರ ಸಂಯೋಗದಿಂದ ರೂಪುಗೊಳ್ಳುವ ಈ ರಾಜಯೋಗವು, ವ್ಯಕ್ತಿಯ ಜೀವನದಲ್ಲಿ ಅಪಾರ ಸಂಪತ್ತು, ಯಶಸ್ಸು ಹಾಗೂ ಸಮಾಜದಲ್ಲಿ ಗೌರವ-ಪ್ರತಿಷ್ಠೆಗಳನ್ನು ತಂದುಕೊಡುತ್ತದೆ.

ಬರುವ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಜಾ ಏಕಾದಶಿಯ ಪವಿತ್ರ ದಿನದಂದು ಕರ್ಕಾಟಕ ರಾಶಿಯಲ್ಲಿ ಗುರು ಮತ್ತು ಚಂದ್ರರ ಮಿಲನವಾಗುತ್ತಿದ್ದು, ಅತ್ಯಂತ ದಿವ್ಯವಾದ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ. ಶ್ರೀಮನ್ನಾರಾಯಣನ ಕೃಪೆ ಹಾಗೂ ಈ ರಾಜಯೋಗದ ಪ್ರಭಾವದಿಂದ ಮುಖ್ಯವಾಗಿ 5 ರಾಶಿಗಳ ಜಾತಕರ ಬದುಕಿನಲ್ಲಿ ದೊಡ್ಡ ಮಟ್ಟದ ಧನಾತ್ಮಕ ಬದಲಾವಣೆಗಳು ಬರಲಿವೆ.

ಯಾವ ಆ 5 ಅದೃಷ್ಟದ ರಾಶಿಗಳು?

ಮೇಷ ರಾಶಿ (Aries):

ಮೇಷ ರಾಶಿಯವರಿಗೆ ಗಜಕೇಸರಿ ಯೋಗವು ಆರ್ಥಿಕ ಸುಧಾರಣೆಗೆ ಅತ್ಯುತ್ತಮ ಮಾರ್ಗಗಳನ್ನು ತೆರೆಯಲಿದೆ. ಹೊಸ ಉದ್ಯೋಗಾವಕಾಶಗಳು ಹಾಗೂ ವೃತ್ತಿರಂಗದಲ್ಲಿ ಬಡ್ತಿ ಲಭಿಸುವ ಸಾಧ್ಯತೆ ದಟ್ಟವಾಗಿದೆ. ಮೇಲಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದ್ದು, ದೀರ್ಘಕಾಲದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಉಪಶಮನಗೊಂಡು ನಿವ್ವಳ ಲಾಭ ಹೆಚ್ಚಲಿದೆ.

ಸಿಂಹ ರಾಶಿ (Leo)

ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿದ್ದು, ಗುರು ಮತ್ತು ಸೂರ್ಯನ ನಡುವೆ ಮಿತ್ರತ್ವದ ಸಂಬಂಧವಿದೆ. ಹೀಗಾಗಿ ಈ ಬಾರಿಯ ಏಕಾದಶಿಯ ಗಜಕೇಸರಿ ಯೋಗವು ಸಿಂಹ ರಾಶಿಯವರಿಗೆ ವಿಶೇಷ ಶುಭ ಫಲಗಳನ್ನೇ ನೀಡಲಿದೆ: ಹಣಕಾಸಿನ ಹರಿವು ಹೆಚ್ಚಾಗಲಿದ್ದು, ದೀರ್ಘಕಾಲದಿಂದ ಬರಬೇಕಿದ್ದ ಹಣ ನಿಮ್ಮ ಕೈಸೇರಲಿದೆ. ಸಮಾಜದಲ್ಲಿ ಗೌರವ-ಪ್ರತಿಷ್ಠೆಗಳು ಏರಲಿವೆ. ಕಚೇರಿ ಅಥವಾ ವೃತ್ತಿರಂಗದಲ್ಲಿ ನಿಮ್ಮ ನಾಯಕತ್ವ ಗುಣಕ್ಕೆ ಪ್ರಶಂಸೆ ಸಿಗಲಿದೆ. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದ್ದು, ಹೊಸ ಜವಾಬ್ದಾರಿಗಳು ಅಥವಾ ಬಡ್ತಿಯ ಯೋಗವಿದೆ.

 

ಕರ್ಕಾಟಕ ರಾಶಿ (Cancer):

ಸ್ವಂತ ರಾಶಿಯಲ್ಲಿಯೇ ಈ ರಾಜಯೋಗ ರೂಪುಗೊಳ್ಳುತ್ತಿರುವುದರಿಂದ ಕರ್ಕಾಟಕ ರಾಶಿಯವರಿಗೆ ‘ರಾಜಯೋಗ’ದ ಅನುಭವ ಸಿಗಲಿದೆ. ಹಳೆಯ ಎಲ್ಲಾ ಸಾಲ ಬಾಕಿಗಳಿಂದ ಮುಕ್ತಿ ಸಿಗಲಿದ್ದು, ಹೊಸ ಆಸ್ತಿ, ವಾಹನ ಖರೀದಿಸುವ ಯೋಗವಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿರೀಕ್ಷಿತ ಧನಲಾಭವಾಗಲಿದ್ದು, ವೈಯಕ್ತಿಕ ಪ್ರತಿಷ್ಠೆ ಏರಿಕೆಯಾಗಲಿದೆ.

ಕನ್ಯಾ ರಾಶಿ (Virgo):

ಕನ್ಯಾರಾಶಿ (Virgo)

ಕನ್ಯಾ ರಾಶಿಯವರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಉದ್ಯಮಿಗಳಿಗೆ ದೊಡ್ಡ ಒಪ್ಪಂದಗಳು ಕೈಸೇರಿ ಲಾಭದ ಪ್ರಮಾಣ ಹೆಚ್ಚಲಿದೆ. ನೀವು ಹೂಡಿಕೆ ಮಾಡಿದ ಹಣದಿಂದ ಧನಲಾಭವಾಗಲಿದ್ದು, ಕುಟುಂಬದಲ್ಲಿ ಹರ್ಷದ ವಾತಾವರಣ ನೆಲೆಸಲಿದೆ.

ಮಕರ ರಾಶಿ (Capricorn):

ಮಕರ ರಾಶಿ (Capricorn)

ಮಕರ ರಾಶಿಯವರ ಕಠಿಣ ಶ್ರಮಕ್ಕೆ ತಕ್ಕಂತೆ ಅದೃಷ್ಟ ಒಲಿದುಬರಲಿದೆ. ವೃತ್ತಿ ಬದುಕಿನಲ್ಲಿ ಗೌರವ ಹಾಗೂ ಪ್ರಶಂಸೆಗಳು ದೊರೆಯಲಿವೆ. ಹೂಡಿಕೆ ಹಾಗೂ ಪಾಲುದಾರಿಕೆ ಉದ್ಯಮದಿಂದ ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದು, ಕೌಟುಂಬಿಕ ನೆಮ್ಮದಿ ಹೆಚ್ಚಾಗಲಿದೆ.

ಏಕಾದಶಿಯ ದಿನ ಏನು ಮಾಡಬೇಕು?

ಈ ಪವಿತ್ರ ದಿನದಂದು ಮಹಾವಿಷ್ಣು ಮತ್ತು ಶ್ರೀ ಲಕ್ಷ್ಮಿ ದೇವಿಯನ್ನು ಪೂಜಿಸಿ, ಹಳದಿ ಬಣ್ಣದ ಹೂವುಗಳು ಹಾಗೂ ನೈವೇದ್ಯವನ್ನು ಅರ್ಪಿಸುವುದು ಶ್ರೇಷ್ಠ. ವಿಷ್ಣು ಸಹಸ್ರನಾಮ ಪಠಣೆ ಮಾಡುವುದರಿಂದ ಗಜಕೇಸರಿ ಯೋಗದ ಸಂಪೂರ್ಣ ಶುಭ ಫಲಗಳು ದೊರೆಯಲಿವೆ.

Topics