ನೀವು ದಿನಕ್ಕೆ 6 ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡ್ತೀರಾ? ಈ ಕಾಯಿಲೆಗಳು ಬರಬಹುದು ಎಚ್ಚರ..!

ದೇಹಕ್ಕೆ ಬೇಕಾದ ಅಗತ್ಯ ವಿಶ್ರಾಂತಿ ಸಿಗುವುದು ನಿದ್ದೆಯ ಸಮಯದಲ್ಲಿ. ಆದರೆ ದಿನಕ್ಕೆ 6 ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡಿದ್ರೆ ಏನಾಗುತ್ತೆ? ಇಲ್ಲಿದೆ ಓದಿ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
Sleeplessness
Photo: AI

ನಿದ್ದೆ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ವಿಶ್ರಾಂತಿ. ನಿದ್ದೆಯ ಸಮಯದಲ್ಲಿ ದೇಹದ ಅನೇಕ ಅಂಗಾಂಗಗಳಾದ ಹೃದಯ, ಮಿದುಳು ಮುಂತಾದವುಗಳು ಸಹಜ ಸ್ಥಿತಿಗೆ ಮರಳಲು ಸಾಧ್ಯ. ಆದ್ದರಿಂದ ಪ್ರತಿದಿನ ಮಾಡುವ ಸಂಪೂರ್ಣ ನಿದ್ದೆ ಅದೆಷ್ಟೋ ಕಾಯಿಲೆಗಳ ಭಯವನ್ನು ಕಡಿಮೆ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳ ಕೆಲಸದ ಒತ್ತಡ, ಮಿತಿಮೀರಿದ ಸ್ಕ್ರೀನ್‌ ಟೈಮ್‌ ನಿಂದಾಗಿ ಅನೇಕ ಜನರು ನಿದ್ದೆಗೆ ಕೊಡಬೇಕಾದ ಪ್ರಮುಖ್ಯತೆಯನ್ನು ಮರೆಯುತ್ತಿದ್ದಾರೆ. ದಿನಕ್ಕೆ ಕನಿಷ್ಠ 6 ಗಂಟೆಗಳಿಗಿಂತಲೂ ಕಡಿಮೆ ನಿದ್ದೆ ಮಾಡುವ ಜನರು ನಮ್ಮ ಮಧ್ಯೆ ಇದ್ದಾರೆ ಎಂದರೆ ಆಶ್ಚರ್ಯವಾಗಬಹುದು. ಅಂತಹವರು ದೇಹಕ್ಕೆ ಸರಿಯಾದ ವಿಶ್ರಾಂತಿ ನೀಡದೇ ಕಾಲಾಂತರದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ನಿದ್ದೆಯ ಕೊರತೆಯಿಂದ ಯಾವೆಲ್ಲ ರೋಗಗಳ ಅಪಾಯ ಹೆಚ್ಚಾಗುತ್ತದೆ? ಇಲ್ಲಿದೆ ಓದಿ.

ನಿದ್ದೆಯ ಕೊರತೆಯಿಂದ ಏನೇನಾಗುತ್ತದೆ?

ವಯಸ್ಕರರು ಕಡಿಮೆ ನಿದ್ದೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲಿ. ಆದರೆ ಕಾಲಕ್ರಮೇಣ ಅದು ಅನೇಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ರಮುಖವಾಗಿ ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆಯ ಮಟ್ಟ, ಚಯಾಪಚಯ ಕ್ರಿಯೆ ನಿಯಂತ್ರಿಸುವ ಹಾರ್ಮೋನುಗಳ ಅಸಮತೋಲನ, ಹಸಿವು ಮುಂತಾದವುಗಳಿಗೆ ಕಾರಣವಾಗುತ್ತದೆ. ಸಾಕಷ್ಟು ನಿದ್ದೆ ಮಾಡದ ಜನರು ಹೆಚ್ಚಿನ ಕ್ಯಾಲೋರಿಯ ಆಹಾರ ಸೇವಿಸಲು ಬಯಸುತ್ತಾರೆ. ವ್ಯಾಯಾಮ ಮಾಡುವುದನ್ನು ತಪ್ಪಿಸುತ್ತಾರೆ. ಇದರಿಂದ ತೂಕ ಹೆಚ್ಚಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ ತಪ್ಪಿ ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ. ಇವೆಲ್ಲವೂ ಹೃದ್ರೋಗಕ್ಕೆ ಅಪಾಯಕಾರಿ ಅಂಶವಾಗಿದೆ. ನಿದ್ದೆಯ ಕೊರತೆ ದೈನಂದಿನ ಕೆಲಸಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಏಕಾಗ್ರತೆಯ ಕೊರತೆ, ಮಾನಸಿಕ ಒತ್ತಡ, ಸಿಟ್ಟು, ಆಲಸ್ಯ ಮುಂತಾದವುಗಳಿಗೂ ಕಾರಣವಾಗಿದೆ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ನೀವು ಎಷ್ಟು ಸಮಯ ಮಲಗಿರುತ್ತೀರಿ ಎಂಬುದು ಮುಖ್ಯವಲ್ಲ. ನಿದ್ದೆಯ ಗುಣಮಟ್ಟ ಮುಖ್ಯವಾಗುತ್ತದೆ. ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ಮಲಗಿದ್ದರೂ ಉಸಿರಾಟದಲ್ಲಿ ತೊಂದರೆ, ಆಗಾಗ್ಗೆ ಎಚ್ಚರಗೊಳ್ಳುವುದು, ಒತ್ತಡ, ಕೆಲವು ಔಷಧಿಗಳ ಪ್ರಭಾವ, ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಗಣಮಟ್ಟದ ನಿದ್ದೆಯ ಕೊರತೆ ಕಾಣಿಸುತ್ತದೆ ಎಂದಾದರೆ ಅಂತಹ ಸಂದರ್ಭದಲ್ಲಿ ಅದನ್ನು ನಿರ್ಲಕ್ಷಿಸಬಾರದು. ನಿದ್ರಿಸಲು ತೊಂದರೆ ಅನುಭವಿಸುತ್ತಿದ್ದರೆ, ಹಗಲಿನಲ್ಲಿ ಅತಿಯಾಗಿ ನಿದ್ದೆ ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಚೆನ್ನಾಗಿ ನಿದ್ರಿಸಲು ಏನು ಮಾಡಬೇಕು?

* ನಿಮ್ಮ ನಿದ್ದೆಯ ಗುಣಮಟ್ಟವನ್ನು ಸುಧಾರಿಸಲು ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದನ್ನು ಹಾಗೂ ಬೆಳಿಗ್ಗೆ ಏಳುವುದನ್ನು ರೂಢಿಸಿಕೊಳ್ಳಿ.

* ಕತ್ತಲಾದ ನಂತರ ಕೆಫೀನ್‌ ಅಂಶವಿರುವ ಪಾನೀಯಗಳ ಸೇವನೆಯನ್ನು ನಿಲ್ಲಿಸಿ.

* ರಾತ್ರಿಯ ಊಟವನ್ನು ಮಿತವಾಗಿ ಮಾಡಿ. ತಡರಾತ್ರಿ ಊಟ ಮಾಡಿ ತಕ್ಷಣ ನಿದ್ದೆ ಮಾಡುವುದನ್ನು ನಿಲ್ಲಿಸಿ.

* ಮಲಗುವ ಅರ್ಧ ಗಂಟೆ ಮೊದಲು ನಿಮ್ಮ ಸ್ಕ್ರೀನ್‌ ಟೈಮ್‌ ಅನ್ನು ಸಂಪೂರ್ಣವಾಗಿ ನಿಲ್ಲಿಸಿ. ಆಳವಾದ ಉಸಿರಾಟ, ಚಿಕ್ಕ ವಾಕ್‌ ರೂಢಿಸಿಕೊಳ್ಳಿ.

* ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ.

* ಪ್ರತಿದಿನ ವ್ಯಾಯಾಮ ಮಾಡಿ. ಆರೋಗ್ಯಕರ ಆಹಾರ ಸೇವಿಸಿ. ನಿದ್ದೆಯ ಸಮಯದಲ್ಲಿ ದೇಹ ಪಡೆಯುವ ವಿಶ್ರಾಂತಿ ಹೃದಯಕ್ಕ ಬಹಳ ಮುಖ್ಯ.

Topics

ಸಂಬಂಧಿತ ಸುದ್ದಿಗಳು