karnatakaಪ್ರಮುಖ ಸುದ್ದಿಗಳು

ಕರ್ನಾಟಕದಲ್ಲಿ ಪಂಚಾಯತ್‌ ಚುನಾವಣಾ ಕಹಳೆ : ಈ ಬಾರಿ ಮಹಿಳೆಯರದ್ದೇ ಕಾರುಬಾರು

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ ಯಾವಾಗ ಘೋಷಣೆ ಆಗುತ್ತೋ ಅಂತಾ ಕಾಯುತ್ತಿದ್ದಾರೆ. ಈ ನಡುವಲ್ಲೇ ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಚುನಾವಣೆ

By Arun Gundmi | ಅರುಣ್‌ ಗುಂಡ್ಮಿ · Editor-in-Chief

2 min read

WhatsAppPost
ZP and TP Election 2026 Women to dominate
ZP and TP Election 2026 Women to dominate

ಕರ್ನಾಟಕದ ಹಳ್ಳಿ-ಹಳ್ಳಿಗಳಲ್ಲಿಯೂ ಸದ್ಯ ಚುನಾವಣಾ ಕಾವು ಏರುತ್ತಿದೆ. ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ ಯಾವಾಗ ಘೋಷಣೆ ಆಗುತ್ತೋ ಅಂತಾ ಕಾಯುತ್ತಿದ್ದಾರೆ. ಈ ನಡುವಲ್ಲೇ ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಗೆ ಕಹಳೆ ಮೊಳಗಿಸಿದೆ.

ಈಗಾಗಲೇ ರಾಜಪತ್ರದಲ್ಲಿ ಮೀಸಲಾತಿ ಹಾಗೂ ಸ್ಥಾನಗಳ ಹಂಚಿಕೆಯ ಸಂಪೂರ್ಣ ಪಟ್ಟಿಯನ್ನೇ ಬಿಡುಗಡೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರದ್ದೇ ಕಾರುಬಾರು ಪಕ್ಕಾ. ಹಾಗಾದ್ರೆ ಕರ್ನಾಟಕ ಸರಕಾರ ಹೊರಡಿಸಿರುವ ಮೀಸಲಾತಿಯಲ್ಲಿ ಯಾರಿಗೆ ಲಾಭ. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಯಮ 1992ರ ನಿಯಮಗಳ ಪ್ರಕಾರ, ರಾಜ್ಯ ಸರಕಾರ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿ, ಇದೀಗ ಹೊಸದಾಗಿ ಪ್ರತಿಯೊಂದು ಜಿಲ್ಲಾ ಫಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಹೊಸದಾಗಿ ಮೀಸಲಾತಿಯನ್ನು ಘೋಷಣೆ ಮಾಡಿದೆ.

ಈ ಬಾರಿಯ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಎ, ಬಿ ಹಾಗೂ ಸಾಮಾನ್ಯ ವರ್ಗಕ್ಕೆ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಅದ್ರಲ್ಲೂ ಈ ಬಾರಿ ಮಹಿಳೆಯರಿಗೆ ಅತೀ ಹೆಚ್ಚಿನ ಸ್ಥಾನಗಳಲ್ಲಿ ಮೀಸಲಾತಿ ಘೋಷಿಸಲಾಗಿದೆ.

ಹೇಗೆ ಇರಲಿದೆ ಈ ಬಾರಿಯ ಮೀಸಲಾತಿಯ ಚಿತ್ರಣ

ಕರ್ನಾಟಕ ರಾಜ್ಯದಲ್ಲಿ ಒಟ್ಟು 1,129 ಜಿಲ್ಲಾ ಪಂಚಾಯತ್‌ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿ ಮಾಡಿದೆ. ಈ ಪೈಕಿ ಮಹಿಳೆಗಾಗಿ 571 ಸ್ಥಾನಗಳನ್ನು ಮೀಸಲಿಡಲಾಗಿದೆ. ಕರ್ನಾಟದಲ್ಲಿನ ಅತೀ ಹೆಚ್ಚು ಮಹಿಳಾ ಮೀಸಲು ಕ್ಷೇತ್ರಗಳನ್ನು ನೋಡೋದಾದ್ರೆ ಬೆಳಗಾವಿ ಮುಂಚೂಣಿಯಲ್ಲಿ ಬಂದು ನಿಲ್ಲುತ್ತೆ. ಬೆಳಗಾವಿಯಲ್ಲಿ ಒಟ್ಟು 90 ಜಿಲ್ಲಾ ಪಂಚಾಯತ್‌ ಸ್ಥಾನಗಳಿದ್ದು, ಈ ಪೈಕಿ 45 ಸ್ಥಾನಗಳನ್ನು ಮಹಿಳೆಯರೇ ಮೀಸಲಿಡಲಾಗಿದೆ.

ಅಷ್ಟೇ ಅಲ್ಲದೇ ಬೆಳಗಾವಿ ತಾಲೂಕು ಪಂಚಾಯತ್‌ನಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಳಿದಂತೆ ತುಮಕೂರು ಜಿಲ್ಲೆಯಲ್ಲಿ ಒಟ್ಟು 57 ಸ್ಥಾನಗಳ ಪೈಕಿ 29 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅತೀ ಹೆಚ್ಚು ಜಿಲ್ಲಾ ಪಂಚಾಯತ್‌ ಸ್ಥಾನಗಳಿದ್ದು, ಒಟ್ಟು 53 ಸ್ಥಾನಗಳಲ್ಲಿ 27 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.

ಇನ್ನು ವಿಜಯಪುರ ಜಿಲ್ಲೆಯಲ್ಲಿ 45 ಸ್ಥಾನಗಳಿದ್ದು, ಈ ಪೈಕಿ 23 ಸ್ಥಾನಗಳನ್ನು ಮಹಿಳೆಯರಿಗ ನೀಡಲಾಗಿದೆ. ಪ್ರತಿಯೊಂದು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳಲ್ಲಿ ಈ ಬಾರಿ ಶೇಕಡಾ 50 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮೂಲಕ ಕರ್ನಾಟಕ ಸರಕಾರ ಮಾಸ್ಟರ್‌ ಪ್ಲ್ಯಾನ್‌ ರೂಪಿಸಿದಂತೆ ಕಾಣಿಸುತ್ತಿದೆ.

ಕರಾವಳಿಯಲ್ಲಿ ಚುನಾವಣಾ ಕದನ : ಯಾವ ಪಕ್ಷಕ್ಕೆ ಪ್ಲಸ್‌ ? ಯಾರಿಗೆ ಮೈನಸ್‌ ?

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಚುನಾವಣಾ ಸಿದ್ದತೆಗಳು ಶುರುವಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 13 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ, ಕಾಂಗ್ರೆಸ್‌ ಕೇವಲ 2 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಶಾಸಕರನ್ನು ಹೊಂದಿದೆ. ಇನ್ನು ಎರಡೂ ಜಿಲ್ಲೆಯಲ್ಲಿಯೂ ಬಿಜೆಪಿಯ ಸಂಸದರೇ ಇದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿಯೂ ಬಿಜೆಪಿ ಪ್ರಾಬಲ್ಯವನ್ನು ಮೆರೆದಿತ್ತು. ಆದರೆ ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಇದೆ. ಶತಾಯಗತಾಯ ಹಿಂದುತ್ವದ ಭದ್ರಕೋಟೆ ಎನಿಸಿರುವ ಕರಾವಳಿಯಲ್ಲಿ ಪ್ರಾಬಲ್ಯವನ್ನು ಮೆರೆಯೋದಕ್ಕೆ ಕಾಂಗ್ರೆಸ್‌ ಪಕ್ಷ ಹವಣಿಸುತ್ತಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾದ್ರೆ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಕಣ. ಹೀಗಾಗಿಯೇ ಕಾಂಗ್ರೆಸ್‌ ಪಕ್ಷ ಎರಡೂ ಜಿಲ್ಲೆಗಳಲ್ಲಿ ಈಗಾಗಲೇ ಪಕ್ಷ ಸಂಘಟನೆಯನ್ನು ಮಾಡುತ್ತಿದೆ.

ಮತ್ತೊಂದಡೆ ಬಿಜೆಪಿ ಕೂಡ ಕಳೆದ ಬಾರಿಗಿಂತ ಅತೀ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿದೆ. ಆದರೆ ಈ ಬಾರಿ ಎರಡೂ ಜಿಲ್ಲೆಗಳಲ್ಲಿಯೂ ಮಹಿಳೆಯರೇ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 26 ಜಿಲ್ಲಾ ಪಂಚಾಯತ್‌ ಸ್ಥಾನಗಳಿದ್ರೆ, 98 ತಾಲೂಕು ಪಂಚಾಯತ್‌ ಸ್ಥಾನಗಳಿವೆ.

ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಈ ಬಾರಿ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ತಾಲೂಕುಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದು, ಶೇಕಡಾ 50 ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 35 ಜಿಲ್ಲಾ ಪಂಚಾಯತ್‌ ಸ್ಥಾನಗಳ ಪೂಕಿ 18 ಸ್ಥಾನಗಳನ್ನು ಮಹಿಳೆರಿಗಾಗಿಯೇ ಮೀಸಲೀಡಲಾಗಿದೆ. ಈ ಬಾರಿ ಕರಾವಳಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಕಾಂಗ್ರೆಸ್‌ ಸರಕಾರ ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ.

ಈ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕೂಡ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಯಲ್ಲಿ ಭೇಟೆಯಾಡೋದಕ್ಕೆ ಕಾಂಗ್ರೆಸ್‌ ಹೊಸ ರಣತಂತ್ರವನ್ನು ಹೂಡಿದೆ. ಜಿಲ್ಲಾ ಪಂಚಾಯತ್‌ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಆಕಾಂಕ್ಷಿಗಳು ಲಾಭಿ ನಡೆಸೋದಕ್ಕೆ ಕಸರತ್ತು ಶುರು ಮಾಡಿದ್ದಾರೆ.

ನಾಯಕರ ಮನೆ ಬಾಗಿಲಿನ ಅಲೆದಾಟವೂ ಜೋರಾಗಿದೆ. ಮುಂದಿನ 18 ತಿಂಗಳಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಕಮೆಂಟ್‌ ಮಾಡಿ

Topics

ಸಂಬಂಧಿತ ಸುದ್ದಿಗಳು