ಟಿ 20 ವಿಶ್ವಕಪ್​ ಬಳಿಕ ನಿವೃತ್ತಿ ಘೋಷಣೆ ವದಂತಿ : ಮೊದಲ ಬಾರಿಗೆ ಮೌನಮುರಿದ ಸೂರ್ಯಕುಮಾರ್​ ಯಾದವ್​

ಟಿ 20 ವಿಶ್ವಕಪ್​ ಬಳಿಕ ಸೂರ್ಯಕುಮಾರ್​ ಯಾದವ್​ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಚಾರವಾಗಿ ಇದೇ ಮೊದಲ ಬಾರಿಗೆ ಸೂರ್ಯಕುಮಾರ್​ ಯಾದವ್​ ಮೌನ ಮುರಿದಿದ್ದಾರೆ

ಸೂರ್ಯಕುಮಾರ್​ ಯಾದವ್​ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿ ಟಿ 20 ವರ್ಲ್ಡ್​ಕಪ್​ 2026ರ ಫೈನಲ್​ ಪಂದ್ಯಾಟದಲ್ಲಿ ನ್ಯೂಜಿಲೆಂಡ್​ ವಿರುದ್ಧ 96 ರನ್​ಗಳ ಅಮೋಘ ಜಯ ಸಾಧಿಸುವ ಮೂಲಕ ವಿಶ್ವ ದಿಗ್ಗಜರಾಗಿ ಹೊರಹೊಮ್ಮಿದೆ. ಟೀಂ ಇಂಡಿಯಾಗೆ ವಿಶ್ವಕಪ್​ ಒಲಿಯುವಂತೆ ಮಾಡಿದ ನಾಯಕರ ಪಟ್ಟಿಯಲ್ಲಿ ಇದೀಗ ಸೂರ್ಯಕುಮಾರ್​ ಯಾದವ್​ ಕೂಡ ಸ್ಥಾನ ಪಡೆದಿದ್ದಾರೆ. ಅಲ್ಲದೇ ತಮ್ಮ ಮೊದಲ ನಾಯಕತ್ವದಲ್ಲಿಯೇ ವಿಶ್ವಕಪ್​ ಗೆಲ್ಲುವ ಮೂಲಕ ರೋಹಿತ್​ ಶರ್ಮಾ ಹಾಗೂ ಎಂ.ಎಸ್​ ಧೋನಿ ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಇನ್ನು ಟಿ 20 ವಿಶ್ವಕಪ್​ ಬಳಿಕ ಸೂರ್ಯಕುಮಾರ್​ ಯಾದವ್​ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಚಾರವಾಗಿ ಇದೇ ಮೊದಲ ಬಾರಿಗೆ ಸೂರ್ಯಕುಮಾರ್​ ಯಾದವ್​ ಮೌನ ಮುರಿದಿದ್ದಾರೆ. ಮಾಧ್ಯದವರೊಬ್ಬರ ಪ್ರಶ್ನೆಗೆ ಉತ್ತರಿಸಿದ ಯಾದವ್​, ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುವಾಗ ನಿವೃತ್ತಿಯ ಬಗ್ಗೆ ಏಕೆ ಯೋಚಿಸಬೇಕು? ಎಂದು ಮರುಪ್ರಶ್ನಿಸಿದ್ದಾರೆ.

ಅಲ್ಲದೇ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಒಲಿಂಪಿಕ್​ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಂತೆ ಮಾಡುವುದು ನನ್ನ ಮುಂದಿನ ಗುರಿಯಾಗಿದೆ. 2028ರ ಟಿ 20 ವಿಶ್ವಕಪ್​ನಲ್ಲಿ ಭಾರತವನ್ನು ಮುನ್ನೆಡಸುವತ್ತ ಗಮನಹರಿಸುತ್ತಿವೆ. ಮುಂದಿನ ಗುರಿ ಒಲಿಂಪಿಕ್ಸ್​.. ಒಲಿಂಪಿಕ್ಸ್​ನ ಚಿನ್ನ ಹಾಗೂ ಆ ವರ್ಷದ ಟಿ 20 ವಿಶ್ವಕಪ್​ ಗೆಲ್ಲುವುದು ಎಂದು ಹೇಳಿದರು.

ಇದನ್ನೂ ಓದಿ: ಟಿ20 ವಿಶ್ವಕಪ್ 2026: ಚಾಂಪಿಯನ್ ಭಾರತಕ್ಕೆ ₹25 ಕೋಟಿಗೂ ಅಧಿಕ ಬಹುಮಾನ

ವಿಶ್ವಕಪ್​ ಫೈನಲ್​ ಬಳಿಕ, ಸೂರ್ಯಕುಮಾರ್ ಯಾದವ್​ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್​ನ ಮಣ್ಣನ್ನು ತೆಗೆದು ತಮ್ಮ ಹೆಣೆಗೆ ತಿಲಕದಂತೆ ಹಚ್ಚಿಕೊಂಡಿದ್ದರು. 2024ರಲ್ಲಿ ವಿಶ್ವಕಪ್​ ಟಿ 20 ಗೆಲುವಿನ ಬಳಿಕ ಅಂದು ಟೀಂ ಇಂಡಿಯಾ ನಾಯಕರಾಗಿದ್ದ ರೋಹಿತ್ ಶರ್ಮಾ ಬಾರ್ಬಡೋಸ್​ ಪಿಚ್​ನ ಚಿಟಿಕೆ ಮಣ್ಣನ್ನು ಬಾಯಿಗೆ ಹಾಕಿಕೊಂಡಿದ್ದರು.

Exit mobile version