ಟಿ20 ವಿಶ್ವಕಪ್ 2026: ಚಾಂಪಿಯನ್ ಭಾರತಕ್ಕೆ ₹25 ಕೋಟಿಗೂ ಅಧಿಕ ಬಹುಮಾನ
ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿದ ಭಾರತ, ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಕುಟವನ್ನು ತನ್ನದಾಗಿಸಿಕೊಂಡಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿದ ಭಾರತ, ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಕುಟವನ್ನು ತನ್ನದಾಗಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಐಸಿಸಿ ಈ ಬಾರಿ ದಾಖಲೆ ಮೊತ್ತದ ಬಹುಮಾನವನ್ನು ಘೋಷಿಸಿದೆ.
ವಿಜೇತ ಮತ್ತು ರನ್ನರ್ ಅಪ್ ಬಹುಮಾನ:
ವಿಶ್ವವಿಜೇತ ಭಾರತ ತಂಡಕ್ಕೆ ಐಸಿಸಿಯಿಂದ ಸುಮಾರು 3 ಮಿಲಿಯನ್ ಡಾಲರ್ (ಅಂದಾಜು ₹25.10 ಕೋಟಿ) ಬಹುಮಾನ ಲಭಿಸಿದೆ. ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ನ್ಯೂಜಿಲ್ಯಾಂಡ್ ತಂಡಕ್ಕೆ 1.28 ಮಿಲಿಯನ್ ಡಾಲರ್ (ಅಂದಾಜು ₹10.71 ಕೋಟಿ) ಮೊತ್ತವನ್ನು ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಒಟ್ಟು ಬಹುಮಾನದ ನಿಧಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಪಂದ್ಯದ ಮುಖ್ಯಾಂಶಗಳು:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಸಂಜು ಸ್ಯಾಮ್ಸನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಸವಾಲಿನ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಆಘಾತ ನೀಡಿತು. ಅಂತಿಮವಾಗಿ ಕಿವಿ ಪಡೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಭಾರತ, ಅಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮ ಆಚರಿಸಿತು.
ಇದನ್ನೂ ಓದಿ: ಸೂರ್ಯ ಸೈನ್ಯದ ದಿಗ್ವಿಜಯ: ನ್ಯೂಜಿಲೆಂಡ್ ಮಣಿಸಿ ವಿಶ್ವಕಪ್ ದಾಖಲೆ ಬರೆದ ಭಾರತ!
ಹೆಚ್ಚುವರಿ ಗೌರವಧನ:
ಐಸಿಸಿ ನೀಡುವ ಅಧಿಕೃತ ಬಹುಮಾನದ ಹೊರತಾಗಿ, ಚಾಂಪಿಯನ್ ತಂಡದ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರತ್ಯೇಕವಾಗಿ ಬೋನಸ್ ಘೋಷಿಸುವ ಸಾಧ್ಯತೆಯಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಅಪರೂಪದ ಸಾಧನೆ ಮಾಡಿದೆ.



