Kannada News Next

entertainment

ಚಂದನವನದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಪ್ರೇಮದ ಊರಲಿ': ಕೇವಲ 2 ವಾರಗಳಲ್ಲಿ ₹40 ಕೋಟಿ ಬಾಚಿಕೊಂಡ ಸಿನಿಮಾ

ಕನ್ನಡ ಸಿನಿಮಾ ರಂಗದಲ್ಲಿಯೇ ಹೊಸ ಸಿನಿಮಾ ಪ್ರೇಮದ ಊರಲಿ ಹೊಸ ದಾಖಲೆಯನ್ನೇ ಬರೆದಿದೆ.

By ಜೋಬಿನ್ ಅಮಾಸೆಬೈಲು | Jobin Amasebail
premada-oorali-kannada-movie-box-office-collection-40-crores

ಕನ್ನಡ ಸಿನಿಮಾ ರಂಗದಲ್ಲಿಯೇ ಹೊಸ ಸಿನಿಮಾ ಪ್ರೇಮದ ಊರಲಿ ಹೊಸ ದಾಖಲೆಯನ್ನೇ ಬರೆದಿದೆ. ಸಿನಿಮಾ ಬಿಡುಗಡೆ ಆಗಿ ಕೇವಲ ಎರಡು ವಾರ ಕಳೆಯುವಷ್ಟರಲ್ಲೇ ಬರೋಬ್ಬರಿ 40 ಕೋಟಿಗೂ ಅಧಿಕ ಕಲೆಕ್ಷನ್ಸ್‌ ಮಾಡುವ ಮೂಲಕ ತನ್ನ ಅಬ್ಬರ ಮುಂದುವರಿಸಿದೆ. ಮೂರನೇ ವಾರವೂ ಹೌಸ್‌ಪುಲ್‌ ಪ್ರದರ್ಶನವನ್ನು ಸಿನಿಮಾ ಕಾಣುತ್ತಿದೆ.

ಖ್ಯಾತ ಹಿರಿಯ ನಟ ರಂಗಾಯಣ ರಘು ಜೊತೆಗೆ ಗೋವಿಂದೇ ಗೌಡ ಅವರ ನಟನೆಗೆ ಜನತೆ ಫಿದಾ ಆಗಿದ್ದಾರೆ. ಆರಂಭದಲ್ಲಿ ಸಾಧಾರಣವಾಗಿ ಪ್ರದರ್ಶನ ಕಾಣುತ್ತಿದ್ದ ಪ್ರೇಮದ ಊರಲಿ ಸಿನಿಮಾ ದಿನೇ ದಿನೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಕ್ಸಸ್‌ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರ ಮೆಚ್ಚುಗ ಪಡೆದಿದೆ. .

ಸಿನಿಮಾ ಬಿಡುಗಡೆ ಆದ ಕೇವಲ 14 ದಿನಗಳಲ್ಲಿ ಬರೋಬ್ಬರಿ 39.47 ಕೋಟಿ ರೂಪಾಯಿಗಳಿಕೆ ಮಾಡಿದೆ. ಹದಿನೈದನೇ ದಿನವೂ 4.50 ಕೋಟಿ ರೂಪಾಯಿ ಗಳಿಸಿದೆ. ಪ್ರೇಮದ ಊರಲಿ ಸಿನಿಮಾ ಬಿಡುಗಡೆ ಆದಾಗ 60 ಶೋಗಳಿತ್ತು. ಆದರೆ ಇದೀಗ ಸಿನಿಮಾ ಬರೋಬ್ಬರಿ 968 ಪ್ರದರ್ಶನವನ್ನು ಕಾಣುತ್ತಿದೆ. ಸಿನಿಮಾ ಪ್ರದರ್ಶನ ಹೆಚ್ಚಳಕ್ಕೆ ಪ್ರೇಕ್ಷಕರ ಬೇಡಿಕೆಯೇ ಕಾರಣ ಎನ್ನಲಾಗುತ್ತಿದೆ.

ಪ್ರೇಮದ ಊರಲಿ ಸಿನಿಮಾ ಮೊದಲ ದಿನ ಕೇವಲ 10 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಎರಡನೇ ವಾರಾದ್ಯಂತ ವೇಳೆಗೆ ಸಿನಿಮಾ ದಿನವೊಂದಕ್ಕೆ ಬರೋಬ್ಬರಿ 4.50 ಕೋಟಿ ರೂಪಾಯಿ ತನ್ನ ಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ದಿನೇ ದಿನೇ ಕೋಟಿ ಕೋಟಿ ಕಲೆಕ್ಷನ್ಸ್‌ ಮಾಡ್ತಾ ಇರೋದು ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.

ಪ್ರೇಮದ ಊರಲಿ ಸಿನಿಮಾಕ್ಕೆ ವೀಕೆಂಡ್‌ನಲ್ಲಿ ಮಾತ್ರವಲ್ಲ ವಾರದ ಪ್ರತೀ ದಿನವೂ ಕೂಡ ಬಹುತೇಕ ಕಡೆಗಳಲ್ಲಿ ಹೌಸ್‌ಪುಲ್‌ ಪ್ರದರ್ಶನವನ್ನು ಕಾಣುತ್ತಿದೆ. ಅದ್ರಲ್ಲೂ ಶನಿವಾರ ಹಾಗೂ ಭಾನುವಾರದ ಪ್ರದರ್ಶನಕ್ಕೆ ಬಹುತೇಕ ಕಡೆಗಳಲ್ಲಿ ಟಿಕೆಟ್‌ ಸಿಗ್ತಿಲ್ಲ ಅಂತಾ ಜನರು ತಮ್ಮ ಅಳಲು ತೋಡಿಕೊಳ್ತಾ ಇದ್ದಾರೆ.

ಈ ವರ್ಷದ ಸೂಪರ್‌ ಹಿಟ್‌ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸೇರ್ಪಡೆ ಆಗಿದೆ. ಅಷ್ಟೇ ಅಲ್ಲಾ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಸಿರ್ಮಾಣಗೊಂಡಿರುವ ಪ್ರೇಮದ ಊರಲಿ ಸಿನಿಮಾ ನೂರು ಕೋಟಿ ಕಲೆಕ್ಷನ್ಸ್‌ ಮಾಡುತ್ತಾ ಅನ್ನೋ ಕುತೂಹಲ ಮೂಡಿದೆ. ಸುಪ್ರಂಸೋ ಸಾಲಿಗೆ ಪ್ರೇಮದ ಊರಲಿ ಸೇರ್ಪಡೆ ಆಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.