Actor Darshan : ರೇಣುಕಾಸ್ವಾಮಿ ಹತ್ಯೆ ಪ್ರಕರಣ : ನಟ ದರ್ಶನ್ ಮನವಿ ತಿರಸ್ಕರಿಸಿದ ನ್ಯಾಯಾಲಯ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಕರಣದ 14ನೇ ಆರೋಪಿ, ದರ್ಶನ್ ಆಪ್ತ ಪ್ರದೂಷ್ ರಾವ್ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದಾರೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇದೀಗ ನಟ ದರ್ಶನ್‌ನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಟ ದರ್ಶನ್ ಪ್ರಕರಣದ ವಿಚಾರಣೆ ಕಲಾಪಗಳಲ್ಲಿ ಖುದ್ದು ಹಾಜರಾಗಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಖುದ್ದು ಹಾಜರಾತಿ ಸಂಬಂಧ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಲಯದಲ್ಲಿ ಆರೋಪಿ ನಟ ದರ್ಶನ್ ವಿಚಾರಣೆಯ ವೇಳೆಯಲ್ಲಿ ಖುದ್ದು ಹಾಜರಿದ್ರೆ ಭದ್ರತೆಯ ಸಮಸ್ಯೆ ಉಂಟಾಗಲಿದ್ದು, ಪೊಲೀಸ್ ಎಸ್ಕಾರ್ಟ್ ಸಂಯೋಜನೆ ಕಷ್ಟಕರವಾಗಲಿದೆ. ಹೀಗಾಗಿ ಪ್ರತೀ ವಿಚಾರಣೆಯನ್ನೂ ವಿಡಿಯೋ ಕಾನ್ಪರೆನ್ಸ್ ಮೂಲಕವೇ ನಡೆಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಇದೇ ಕಾರಣದಿಂದಲೇ ನಟ ದರ್ಶನ್ ಅಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಬಾರದು ಎಂದು ನ್ಯಾಯಾಲಯದ ಮುಂದೆ ವಿಶೇಷ ಸರಕಾರಿ ಅಭಿಯೋಜಕರಾದ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರ ವಿಚಾರಣೆಗೆ ಸಂಬಂಧಿಸಿದಂತೆ ತಮ್ಮ ವಕೀಲರು ದರ್ಶನ್ ಅವರನ್ನು ಎಷ್ಟು ಸಮಯ ಬೇಕಾದರೂ ಭೇಟಿ ಮಾಡಿ ಚರ್ಚೆ ನಡೆಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಷ್ಟೇ ಅಲ್ಲದೇ ನ್ಯಾಯಾಲಯ ವಿಡಿಯೋ ಕಾನ್ಪರೆನ್ಸ್‌ನಲ್ಲಿಯೂ ಮಾತನಾಡಬಹುದು. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ನ್ಯಾಯಾಲಯದ ತಾಂತ್ರಿಕ ವಿವಾಗ ಕಲ್ಪಿಸಲಿದೆ ಎಂದು ನ್ಯಾಯಾಲಯವೇ ತಿಳಿಸಿದೆ.
ಮತ್ತೊಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಕರಣದ 14ನೇ ಆರೋಪಿ, ದರ್ಶನ್ ಆಪ್ತ ಪ್ರದೂಷ್ ರಾವ್ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದಾರೆ. ಹೀಗಾಗಿ ಅವರನ್ನು ಇಂದು ನ್ಯಾಯಾಲಯ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಲಿದೆ. ಪ್ರದೂಷ್ ರಾವ್ ವಿಚಾರಣೆಯ ಹಿನ್ನೆಲೆಯಲ್ಲಿ ನಟ ದರ್ಶನ್‌ಗೆ ನಡುಕ ಶುರುವಾಗಿದೆ.
Topics
ಸಂಬಂಧಿತ ಸುದ್ದಿಗಳು
entertainment
ರೇಣುಕಾಸ್ವಾಮಿ ಪ್ರಕರಣ : ಮದುವೆ ಸಂಭ್ರಮದಲ್ಲಿದ್ದ ನಟ ಚಿಕ್ಕಣ್ಣಗೆ ಬಿಗ್ ಶಾಕ್, ನಟ ದರ್ಶನ್‌ಗೆ ಬಿಗಿಯಾಗುತ್ತಾ ಕಾನೂನು ಉರುಳು ?
entertainment
Drishyam 3 Ajay Devgn : ಮೊದಲ ದಿನವೇ ದಾಖಲೆಯ ಗಳಿಕೆ ಕಂಡ ದೃಶ್ಯಂ 3 : ಅಜಯ್ ದೇವಗನ್ ಅಭಿನಯಕ್ಕೆ ಅಭಿಮಾನಿಗಳು ಫಿದಾ
entertainment
ಕಾಂತಾರ ಸಿನಿಮಾಕ್ಕೆ 4ರ ಸಂಭ್ರಮ : ರಿಷಬ್ ಶೆಟ್ಟಿ -ಹೊಂಬಾಳೆ ಫಿಲ್ಮ್ಸ್ ನಡುವೆ ತಣ್ಣಗಾಯಿತೇ ಬಾಂಧವ್ಯ
entertainment

