ನಿಮಗೆ ಫ್ಯಾಟಿ ಲಿವರ್ ಸಮಸ್ಯೆಯಿದೆಯೇ? ಹಾಗಾದ್ರೆ ಈ ಹಣ್ಣುಗಳನ್ನು ತಪ್ಪದೇ ಸೇವಿಸಿ
ಫ್ಯಾಟಿ ಲಿವರ್ ಸಮಸ್ಯೆಗೆ ಪರಿಹಾರ ನಾವು ಸೇವಿಸುವ ಆಹಾರದಲ್ಲಿಯೇ ಇದೆ. ಕೆಲವು ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಫ್ಯಾಟಿ ಲಿವರ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
By Archana V Bhat | ಅರ್ಚನಾ ವಿ ಭಟ್
1 min read
ಇತ್ತೀಚೆಗೆ ಕೊಬ್ಬಿನ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆಹಾರ ಪದ್ಧತಿಯಲ್ಲಾದ ಬದಲಾವಣೆ, ವ್ಯಾಯಾಮದ ಕೊರತೆಯಿಂದ ಸ್ಥೂಲಕಾಯದ ಸಮಸ್ಯೆ ಉಲ್ಭಣಗೊಳ್ಳುತ್ತಿದೆ. ಒಮ್ಮೆ ಕೊಬ್ಬು ದೇಹದಲ್ಲಿ ಶೇಖರಣೆಯಾಗುತ್ತಾ ಹೋದರೆ ಅದು ಪೂರ್ತಿ ದೇಹವನ್ನು ಆವರಿಸಿಕೊಳ್ಳುತ್ತದೆ. ದೇಹದ ಪ್ರಮುಖ ಅಂಗಾಂಗಗಳಲ್ಲಿ ಒಂದಾದ ಲಿವರ್ (ಯಕೃತ್ತು) ನಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ಫ್ಯಾಟಿ ಲಿವರ್ ಅಥವಾ ಯಕೃತ್ತಿನ ಕೊಬ್ಬು ಎಂದು ಕರೆಯುತ್ತಾರೆ. ಈಗೀಗ ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಜನರಿಗೆ ಈ ಸಮಸ್ಯೆ ಇರುವುದು ಅರಿವಿಗೆ ಬರುವುದಿಲ್ಲ. ಅದರ ಸೌಮ್ಯ ಲಕ್ಷಣಗಳನ್ನು ಅನೇಕ ಜನರಿಗೆ ಪತ್ತೆ ಹೆಚ್ಚಲು ಸಾಧ್ಯವಾಗುವುದಿಲ್ಲ. ಅದನ್ನು ಪತ್ತೆಹಚ್ಚುವಷ್ಟು ಹೊತ್ತಿಗೆ ಸಮಸ್ಯೆ ಉಲ್ಭಣವಾಗಿ ವ್ಯಕ್ತಿ ರೋಗದಿಂದ ಬಳಲುವಂತಾಗುತ್ತದೆ. ಆದರೆ ಈ ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಹೇಗೆಂದರೆ ತಿನ್ನುವ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಕೆಲವು ಹಣ್ಣಗಳನ್ನು ನಿಯಮಿತವಾಗಿ ತಿನ್ನಬೇಕು. ಆಗ ಫ್ಯಾಟಿ ಲಿವರ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಯಾವು ಹಣ್ಣುಗಳು ಫ್ಯಾಟಿ ಲಿವರ್ ಸಮಸ್ಯೆ ದೂರಮಾಡಬಲ್ಲದು ಎಂದು ನೋಡೋಣ.
ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವೇನು?
ಲಿವರ್ನಲ್ಲಿ ಕೊಬ್ಬು ಜಾಸ್ತಿಯಾದಾಗ ಕೆಲವೊಂದಿಷ್ಟು ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದನ್ನೇ ಫ್ಯಾಟಿ ಲಿವರ್ ಎನ್ನುತ್ತಾರೆ. ಇದಕ್ಕೆ ಪ್ರಮುಖವಾಗಿ ಕೊಬ್ಬು ಹೆಚ್ಚಿರುವ ಆಹಾರ ಸೇವನೆ, ಅತಿಯಾದ ಜಂಕ್ಫುಡ್ ಸೇವನೆ ಮತ್ತು ಆಲ್ಕೋಹಾಲ್ ಸೇವನೆ ಇದಕ್ಕೆ ಕಾರಣವಾಗಿದೆ.
ಫ್ಯಾಟಿ ಲಿವರ್ ಸಮಸ್ಯೆ ದೂರಮಾಡುವ ಹಣ್ಣುಗಳು
ದಾಳಿಂಬೆ ಹಣ್ಣು
ದಾಳಿಂಬೆಯಲ್ಲಿ ಪಾಲಿಫಿನಾಲ್ಸ್ ಎಂಬ ರಾಸಾಯನಿಕ ಸಂಯುಕ್ತಗಳು ಅಧಿಕವಾಗಿವೆ. ಇವು ಲಿವರ್ಗೆ ರಕ್ಷಣೆಯನ್ನು ಒದಗಿಸುತ್ತವೆ. ಲಿವರ್ನ ಸುತ್ತಲೂ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತವೆ. ಒಟ್ಟಾರೆಯಾಗಿ ದೇಹದ ಆರೋಗ್ಯಕ್ಕೂ ದಾಳಿಂಬೆ ತುಂಬಾ ಪ್ರಯೋಜನಕಾರಿಯಾಗಿದೆ.
ಆವಕಾಡೊ
ಆರೋಗ್ಯಕರ ಒಮೆಗಾ-3 ಕೊಬ್ಬಿನಾಮ್ಲಗಳು ಅವಕಾಡೊವಿನಲ್ಲಿ ಅಧಿಕವಾಗಿದೆ. ಇವುಗಳಲ್ಲಿ ರಾಸಾಯನಿಕ ಸಂಯುಕ್ತಗಳು ಅಧಿಕವಾಗಿದ್ದು, ಲಿವರ್ ತನ್ನ ಕಾರ್ಯವನ್ನು ಪರಿಣಾಮಕಾರಿಯಾಗಿ ನಿವರ್ಹಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇವು ಲಿವರ್ನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ.
ಗಸಗಸೆ ಬೀಜಗಳು ಮತ್ತು ಪಪ್ಪಾಯಿ
ಇವು ಅತ್ಯುತ್ತಮ ಜೀರ್ಣಕಾರಿ ಕಿಣ್ವಗಳನ್ನು ಹೊಂದಿರುತ್ತವೆ. ಈ ಕಿಣ್ವಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಲಿವರ್ ಅನ್ನು ರಕ್ಷಿಸುತ್ತವೆ. ಪಪ್ಪಾಯಿ ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಮತ್ತು ದೇಹವು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದ.
ಕಿತ್ತಳೆ, ಪೇರಳೆ, ನಿಂಬೆ
ನಿಂಬೆಹಣ್ಣುಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ವಿಟಮಿನ್ ಸಿ ದೇಹದಿಂದ ವಿಷವನ್ನು ಹೊರಹಾಕಲು ಲಿವರ್ಗೆ ಸಹಾಯ ಮಾಡುತ್ತದೆ. ಇದು ಲಿವರ್ನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಲಿವರ್ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಕಲ್ಲಂಗಡಿ
ಕಲ್ಲಂಗಡಿ ಹಣ್ಣುಗಳು ಅಧಿಕ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಲಿವರ್ನಲ್ಲಿರುವ ವಿಷವನ್ನು ಹೊರಹಾಕಲು ಮತ್ತು ಚುರುಕಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ದೇಹವು ಸಾಕಷ್ಟು ನೀರಿನ ಅಂಶವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ.
ಸೇಬು ಹಣ್ಣು
ಇದರಲ್ಲಿ ವಿಟಮಿನ್ಗಳುತ್ತು ಆಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇವು ಲಿವರ್ನ ಕಾರ್ಯವನ್ನು ಸುಧಾರಿಸುತ್ತವೆ. ಲಿವರ್ನ ಸುತ್ತಲೂ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತವೆ. ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಸೇಬು ಬಹಳ ಉಪಯುಕ್ತವಾಗಿದೆ ಎಂದು ತಜ್ಞರು ವಿವರಿಸುತ್ತಾರೆ.
ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತವೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಲಿವರ್ನಲ್ಲಿರುವ ವಿಷವನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡಲು ಸಹಾಯ ಮಾಡುತ್ತದೆ.
Topics
ಸಂಬಂಧಿತ ಸುದ್ದಿಗಳು
health
ನೀವು ದಿನಕ್ಕೆ 6 ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡ್ತೀರಾ? ಈ ಕಾಯಿಲೆಗಳು ಬರಬಹುದು ಎಚ್ಚರ..!
health
ಉಪ್ಪು Vs ಸಕ್ಕರೆ : ಹೃದಯದ ಆರೋಗ್ಯಕ್ಕೆ ಯಾವುದು ಹೆಚ್ಚು ಹಾನಿಕಾರಕ ?
health
ಮಹಿಳೆಯರಲ್ಲಿ ಹೃದಾಯಾಘಾತದ 4 ಪ್ರಮುಖ ಚಿಹ್ನೆಗಳು ! ಈ ಲಕ್ಷಣಗಳು ಕಂಡುಬಂದ್ರೆ ನಿರ್ಲಕ್ಷಿಸಬೇಡಿ !
health

