ಬಿಲ್ವಪತ್ರೆ ಎಲೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಏನೆಲ್ಲಾ ಬದಲಾವಣೆಗಳಾಗುತ್ತವೆ ಗೊತ್ತಾ
ಬಿಲ್ವಪತ್ರೆಯನ್ನು ಭಗವಾನ್ ಶಿವನ ಪೂಜೆಗೆ ಅತ್ಯಂತ ಶ್ರೇಷ್ಠ ಹಾಗೂ ಪ್ರಮುಖ ಎಂದು ಪರಿಗಣಿಸಲಾಗಿದೆ. ಆದರೆ, ಧಾರ್ಮಿಕ ಮಹತ್ವದ ಜೊತೆಗೆ ಇದು ಅತ್ಯಮೂಲ್ಯ ಔಷಧೀಯ ಗುಣಗಳನ್ನು ಹೊಂದಿದೆ
By Meghana Pranuth | ಮೇಘನಾ ಪ್ರಣೂತ್
1 min read
ಹಿಂದೂ ಧರ್ಮದಲ್ಲಿ ಬಿಲ್ವಪತ್ರೆಯನ್ನು ಭಗವಾನ್ ಶಿವನ ಪೂಜೆಗೆ ಅತ್ಯಂತ ಶ್ರೇಷ್ಠ ಹಾಗೂ ಪ್ರಮುಖ ಎಂದು ಪರಿಗಣಿಸಲಾಗಿದೆ. ಆದರೆ, ಧಾರ್ಮಿಕ ಮಹತ್ವದ ಜೊತೆಗೆ ಇದು ಅತ್ಯಮೂಲ್ಯ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದು ಬಹುಪಾಲು ಜನರಿಗೆ ತಿಳಿದಿಲ್ಲ. ಆಯುರ್ವೇದದ ಪ್ರಕಾರ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ಎಲೆಗಳನ್ನು ಜಗಿದು ತಿನ್ನುವುದರಿಂದ ಅಥವಾ ಇದರ ರಸ ಸೇವಿಸುವುದರಿಂದ ದೇಹಕ್ಕೆ ಅನೇಕ ರೋಗಗಳಿಂದ ಮುಕ್ತಿ ಪಡೆದುಕೊಳ್ಳಬಹುದು.
ಬಿಲ್ವಪತ್ರೆಯಲ್ಲಿ ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಎ, ಸಿ, ಬಿ 1 ಹಾಗೂ ಬಿ 6 ನಂತಹ ಪ್ರಮುಖ ಪೋಷಕಾಂಶಗಳೂ, ಉತ್ಕರ್ಷಣ ನಿರೋಧಕ (Antioxidant) ಗುಣಗಳೂ ಸಮೃದ್ಧವಾಗಿವೆ. ಪ್ರತಿದಿನ ಬೆಳಿಗ್ಗೆ 2 ರಿಂದ 3 ತಾಜಾ ಬಿಲ್ವಪತ್ರೆಯ ಎಲೆಗಳನ್ನು ಚೆನ್ನಾಗಿ ತೊಳೆದು ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ.
ಅಲ್ಲದೆ, ಯಕೃತ್ತು (Liver) ಮತ್ತು ಮೂತ್ರಪಿಂಡದಲ್ಲಿರುವ ಹಾನಿಕಾರಕ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ನಿದ್ರಾಹೀನತೆ ಸಮಸ್ಯೆಯನ್ನು ದೂರಾಗಿಸುವ ನೈಸರ್ಗಿಕ ಗುಣವೂ ಇದರಲ್ಲಿದೆ. ದೇಹಕ್ಕೆ ತಂಪು ನೀಡುವ ಬಿಲ್ವಪತ್ರೆಯನ್ನು ಕಷಾಯ ರೂಪದಲ್ಲೂ ಅಥವಾ ಜೇನುತುಪ್ಪದ ಜೊತೆಗೂ ಸೇವಿಸಬಹುದಾಗಿದೆ.
ದೈವಿಕ ಪೂಜೆಗೆ ಬಳಕೆಯಾಗುವ ಬಿಲ್ವಪತ್ರೆಯು ಆರೋಗ್ಯದ ದೃಷ್ಟಿಯಿಂದಲೂ ಒಂದು ದಿವ್ಯ ಔಷಧಿಯಾಗಿದೆ. ಆದಾಗ್ಯೂ, ಗರ್ಭಿಣಿಯರು ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಇದನ್ನು ನಿಯಮಿತವಾಗಿ ಸೇವಿಸುವ ಮುನ್ನ ಆಯುರ್ವೇದ ಅಥವಾ ವೈದ್ಯರ ಸಲಹೆ ಪಡೆಯುವುದು ಉತ್ತಮ.
Topics
ಸಂಬಂಧಿತ ಸುದ್ದಿಗಳು
health
ನೀವು ದಿನಕ್ಕೆ 6 ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡ್ತೀರಾ? ಈ ಕಾಯಿಲೆಗಳು ಬರಬಹುದು ಎಚ್ಚರ..!
health
ಉಪ್ಪು Vs ಸಕ್ಕರೆ : ಹೃದಯದ ಆರೋಗ್ಯಕ್ಕೆ ಯಾವುದು ಹೆಚ್ಚು ಹಾನಿಕಾರಕ ?
health
ಮಹಿಳೆಯರಲ್ಲಿ ಹೃದಾಯಾಘಾತದ 4 ಪ್ರಮುಖ ಚಿಹ್ನೆಗಳು ! ಈ ಲಕ್ಷಣಗಳು ಕಂಡುಬಂದ್ರೆ ನಿರ್ಲಕ್ಷಿಸಬೇಡಿ !
health

