Health Tips: ಪ್ರೆಗ್ನೆನ್ಸಿಯಲ್ಲಿ ಗ್ರೀನ್ ಟೀ ಆರೋಗ್ಯಕರವೇ ಅಥವಾ ಹಾನಿಕಾರಕವೇ..ಇಲ್ಲಿದೆ ಅಸಲಿ ಸತ್ಯ
ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಆರೋಗ್ಯಕರ ಎಂದು ಭಾವಿಸಿ ಅತಿಯಾಗಿ ಕುಡಿಯುತ್ತೀರಾ? ಹಾಗಾದರೆ ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ.
By Meghana Pranuth | ಮೇಘನಾ ಪ್ರಣೂತ್
1 min read
ಗರ್ಭಾವಸ್ಥೆಯಲ್ಲಿ (Pregnancy) ಆಹಾರ ಮತ್ತು ಪಾನೀಯಗಳ ಆಯ್ಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸರ್ವೇಸಾಮಾನ್ಯ. ಅನೇಕ ಮಹಿಳೆಯರು ಸಾಮಾನ್ಯ ಚಹಾ ಅಥವಾ ಕಾಫಿ ಸೇವನೆಯನ್ನು ಕಡಿಮೆ ಮಾಡಿ, ಅದರ ಬದಲಿಗೆ ಗ್ರೀನ್ ಟೀ ಕುಡಿಯಲು ಆರಂಭಿಸುತ್ತಾರೆ. ಗ್ರೀನ್ ಟೀ ಆರೋಗ್ಯಕರ ಎಂಬ ಕಾರಣಕ್ಕೆ ಪ್ರೆಗ್ನೆನ್ಸಿಯಲ್ಲಿ ಇದನ್ನು ಹೆಚ್ಚು ಸೇವಿಸುತ್ತಾರೆ.
ಆದರೆ ಇದರಲ್ಲಿಯೂ ಕ್ಯಾಫೀನ್ ಇರುತ್ತದೆ ಎಂಬುದನ್ನು ಹಲವರು ಮರೆಯುತ್ತಾರೆ. ಜೈಪುರ ಅಪೊಲೊ ಸ್ಪೆಕ್ಟ್ರಾ ಹಾಸ್ಪಿಟಲ್ನ ಹಿರಿಯ ಸ್ತ್ರೀರೋಗ ತಜ್ಞರಾದ ಡಾ. ಮಾನಿನಿ ಪಟೇಲ್ ಅವರು ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಸೇವನೆ ಕುರಿತು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಗ್ರೀನ್ ಟೀ ಮಾತ್ರವಲ್ಲದೆ ದಿನದಲ್ಲಿ ಕುಡಿಯುವ ಚಹಾ, ಕಾಫಿ, ಚಾಕೊಲೇಟ್ ಮತ್ತು ಇತರ ಕ್ಯಾಫೀನ್ ಯುಕ್ತ ಪಾನೀಯಗಳ ಪ್ರಮಾಣವನ್ನೂ ಲೆಕ್ಕಹಾಕಿಕೊಳ್ಳುವುದು ಒಳಿತು. ಗ್ರೀನ್ ಟೀಯನ್ನು ಅತಿಯಾಗಿ ಕುಡಿಯುವುದರಿಂದ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಫೀನ್ ಸೇರುವ ಸಾಧ್ಯತೆಯಿರುತ್ತದೆ.
ಇದಲ್ಲದೆ, ಗ್ರೀನ್ ಟೀಯಲ್ಲಿರುವ ಸಂಯುಕ್ತಗಳು ಆಹಾರದಿಂದ ಕಬ್ಬಿಣಾಂಶವನ್ನು ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತವೆ. ಆದ್ದರಿಂದ, ಊಟದ ತಕ್ಷಣ ಗ್ರೀನ್ ಟೀ ಕುಡಿಯುವುದನ್ನು ಅಥವಾ ಐರನ್ ಸಪ್ಲಿಮೆಂಟ್ ತೆಗೆದುಕೊಂಡ ತಕ್ಷಣ ಅದನ್ನು ಸೇವಿಸುವುದನ್ನು ಸಂಪೂರ್ಣವಾಗಿ ತಪ್ಪಿಸುವುದು ಸೂಕ್ತ.
ಪ್ರೆಗ್ನೆನ್ಸಿಯಲ್ಲಿ ತೂಕ ಇಳಿಸಿಕೊಳ್ಳುವ ಉದ್ದೇಶದಿಂದ ಗ್ರೀನ್ ಟೀಯನ್ನು ನೆಚ್ಚಿಕೊಳ್ಳುವ ಬದಲು, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಗತ್ಯವಿರುವ ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ವೈದ್ಯರ ಸಲಹೆಯನ್ನು ಅನುಸರಿಸುವುದು ಅತ್ಯಂತ ಸುರಕ್ಷಿತ.
ಪ್ರತಿ ಗರ್ಭಾವಸ್ಥೆಯೂ ವಿಭಿನ್ನವಾಗಿರುತ್ತದೆ. ಹೀಗಾಗಿ, ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ವೈದ್ಯರು ಕ್ಯಾಫೀನ್ ಕಡಿಮೆ ಮಾಡಲು ಸೂಚಿಸಿದ್ದರೆ ಗ್ರೀನ್ ಟೀ ಸೇವಿಸುವ ಮುನ್ನ ನಿಮ್ಮ ಸ್ತ್ರೀರೋಗ ತಜ್ಞರನ್ನು (Gynecologist) ಸಂಪರ್ಕಿಸುವುದು ಒಳ್ಳೆಯದು. ಗ್ರೀನ್ ಟೀಯನ್ನು ಎಂದಿಗೂ ನೀರು ಅಥವಾ ಪೌಷ್ಟಿಕ ಆಹಾರಕ್ಕೆ ಪರ್ಯಾಯವಾಗಿ ಪರಿಗಣಿಸಬಾರದು.
Topics
ಸಂಬಂಧಿತ ಸುದ್ದಿಗಳು
health
ಬಿಲ್ವಪತ್ರೆ ಎಲೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಏನೆಲ್ಲಾ ಬದಲಾವಣೆಗಳಾಗುತ್ತವೆ ಗೊತ್ತಾ
health
ಸಿಗರೇಟ್ ಚಟದಿಂದ ಹೊರಬರಲು ಇಲ್ಲಿದೆ ಸಿಂಪಲ್ ಟ್ರಿಕ್: ಈ 4D ರೂಲ್ಸ್ ಗೊತ್ತಾ
health
ಇದು ಆಡು ಮುಟ್ಟದ ಸೊಪ್ಪು- ಮನುಷ್ಯನ ಧೀರ್ಘಾಯುಷ್ಯಕ್ಕೆ ಇದರ ಸೇವನೆಯೇ ಗುಟ್ಟು
health

