ಇತ್ತೀಚಿನ ದಿನಗಳ ಹೃದಯಾಘಾತದಿಂದ (Heart) ಮೃತಪಡುವವರ ಸಂಖ್ಯೆಗೆ ಮಿತಿಯೇ ಇಲ್ಲ ಎಂಬಂತೆ ಆಗಿದೆ. ಇದಕ್ಕೆ ಕೊರೊನಾ ಲಸಿಕೆಯೇ ಕಾರಣ ಎಂದು ಅನೇಕರು ಆಪಾದನೆ ಕೂಡ ಮಾಡಿದ್ದರೆ. ವಿಶೇಷವಾಗಿ ಕಡಿಮೆ ವಯಸ್ಸಿನವರೇ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಕಳವಳಕಾರಿಯ ವಿಚಾರವಾಗಿತ್ತು. ಈ ಸಂಬಂಧ ಅಮೆರಿಕ ಕಾಲೇಜ್ ಆಫ್ ಕಾರ್ಡಿಯಾಲೋಜಿರ 2026ರ ವಾರ್ಷಿಕ ವೈಜ್ಞಾನಿಕ ಅಧಿವೇಶನದಲ್ಲಿ ಸಂಶೋಧನಾ ವರದಿಯನ್ನು ಮಂಡಿಸಲಾಗಿದ್ದು, ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಹೌದು..! ಈ ಸಂಶೋಧನಾ ವರದಿಯ ಪ್ರಕಾರ, ಪ್ರತಿ ದಿನ ವ್ಯಾಯಾಮ ಮಾಡಿ, ಸದಾ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯು ಹೆಚ್ಚಿನ ಸ್ಕ್ರೀನ್ ಟೈಮ್ ಹೊಂದಿದ್ದರೆ ಆತನನ್ನು ಹೃದ್ರೋಗ ಸಮಸ್ಯೆಯಿಂದ ಪಾರುಮಾಡುವ ಶಕ್ತಿ ವ್ಯಾಯಾಮಕ್ಕೂ ಇಲ್ಲ ಎಂದು ತಿಳಿದುಬಂದಿದೆ. ಸ್ಕ್ರೀನ್ ಟೈಮ್ ಎನ್ನುವುದು ಅಷ್ಟೊಂದು ಅಪಾಯಕಾರಿಯಾಗಿದ್ದು, ದೈಹಿಕ ಆರೋಗ್ಯವನ್ನೂ ಕಾಪಾಡಿಕೊಂಡ ಬಳಿಕವೂ ಹೃದಯಕ್ಕೆ ಹಾನಿ ಮಾಡುವ ಸಾಮರ್ಥ್ಯ ಈ ಅಭ್ಯಾಸಕ್ಕಿದೆ ಎಂದು ಸಂಶೋಧನಾ ವರದಿಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ದೇಶದಲ್ಲಿ ಮಿತಿಮೀರುತ್ತಿದೆ ಡೆಂಗ್ಯೂ ಜ್ವರ ಪ್ರಕರಣ – ಜಪಾನ್ ಮೂಲದ ಕ್ಯೂಡೆಂಗಾ ಲಸಿಕೆ ಬಳಿಕೆಗೆ ತಜ್ಞರ ಅನುಮತಿ – ಮಹಾಮಾರಿ ವಿರುದ್ಧ ಸಾರ್ವಜನಿಕರಿಗೆ ವ್ಯಾಕ್ಸಿನ್ ರಕ್ಷಣೆ
ಪಾಕಿಸ್ತಾನದ ಕರಾಚಿ ಸೇರಿದಂತೆ ವಿವಿಧ ನಗರಗಳಿಂದ 35 ವರ್ಷ ಪ್ರಾಯದ 385 ಯುವ ಜನತೆಯನ್ನು ಈ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿತ್ತು. ಈ ವೇಳೆ ಅತಿಯಾದ ಸ್ಕ್ರೀನ್ ಟೈಮ್ ಹೊಂದಿರುವವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ 28 mg/dL ನಷ್ಟು ಹೆಚ್ಚಾಗಿದ್ದು, ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಕುಸಿದಿರುವುದು ಗಮನಕ್ಕೆ ಬಂದಿದೆ. ಮಾತ್ರವಲ್ಲದೇ, ದಿನಕ್ಕೆ 6 ಗಂಟೆಗಿಂತ ಹೆಚ್ಚು ಸಮಯವನ್ನು ಮನರಂಜನೆಗಾಗಿ ಸ್ಕ್ರೀನ್ ಮುಂದೆ ಕಳೆಯುವವರಲ್ಲಿ ಸಿಸ್ಟೊಲಿಕ್ ರಕ್ತದೊತ್ತಡ ಸರಾಸರಿ 18 mmHg ಹೆಚ್ಚಿರುವುದು ಕಂಡುಬಂದಿದೆ. ಅಲ್ಲದೇ ಹೆಚ್ಚಿನ ಸ್ಕ್ರೀನ್ ಟೈಮ್ ಹೊಂದಿರುವ ವ್ಯಕ್ತಿಗಳಲ್ಲಿ ಸೊಂಟದ ಸುತ್ತಳತೆ ಹೆಚ್ಚಿದ್ದು, ಇದು ಕೂಡ ಹೃದಯಾಘಾತಕ್ಕೆ ದಾರಿ ಮಾಡಿಕೊಡುವ ಕಾರಣವಾಗಿದೆ.
ಹೃದ್ರೋಗ ಸಮಸ್ಯೆಯಿಂದ ಪಾರಾಗಲು ಉತ್ತಮ ಆಹಾರ ಶೈಲಿ ಹಾಗೂ ದೈಹಿಕ ಚಟುವಟಿಕೆ ಅತ್ಯಂತ ಪ್ರಮುಖವಾದದ್ದು. ಇದಕ್ಕೂ ಮುಖ್ಯವಾಗಿ ನಿಮ್ಮ ಸ್ಕ್ರೀನ್ ಟೈಂ್ನ್ನು ಆದಷ್ಟು ಕಡಿತಗೊಳಿಸಿ ಎಂದು ಅಧ್ಯಯನದ ಪ್ರಮುಖ ಸಂಶೋಧಕ ಡಾ. ಜೈನ್ ಇಸ್ಲಾಂ ಸಲಹೆ ನೀಡಿದ್ದಾರೆ.
