10ನೇ ತರಗತಿ ಪಾಸಾದವರಿಗೆ ಗುಡ್‌ ನ್ಯೂಸ್‌ ! ಇಂಡಿಯನ್‌ ಕೋಸ್ಟ್‌ ಗಾರ್ಡ್‌ನಲ್ಲಿ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ !

ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಸ್ಟೋರ್‌ ಕೀಪರ್‌, ಎಂಜಿನ್‌ ಡ್ರೈವರ್‌ ಮತ್ತು ವಾಚ್‌ಮ್ಯಾನ್‌ ಸೇರಿದಂತೆ ವಿವಿಧ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
Indian coast guard group c recruitment 2026
Photo: AI

ಇಂಡಿಯನ್‌ ಕೋಸ್ಟ್‌ ಗಾರ್ಡ್‌ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯಲ್ಲಿ ಸ್ಟೋರ್‌ ಕೀಪರ್‌, ಎಂಜಿನ್‌ ಡ್ರೈವರ್‌ ಮತ್ತು ವಾಚ್‌ಮ್ಯಾನ್‌ ಸೇರಿದಂತೆ ವಿವಿಧ ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇದಕ್ಕೆ ಅರ್ಜಿ ಸಲ್ಲಿಕೆ ಸೆಪ್ಟೆಂಬರ್‌ 19 ರಿಂದಲೇ ಪ್ರಾರಂಭವಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ನವೆಂಬರ್‌ 3, 2026 ರರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮೊದಲು ಯಾವ ಅರ್ಹತೆಗಳಿರಬೇಕು ಎಂದು ನೋಡೋಣ.

ವಿದ್ಯಾರ್ಹತೆ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10 ನೇ ತರಗತಿ / 10+2 / ಪಿಯುಸಿ ಉತ್ತೀರ್ಣರಾಗಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಹಾಗೂ ಗರಿಷ್ಠ ವಯಸ್ಸು 27 ರಿಂದ 30 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ವಿಶೇಷ ಸಡಿಲಿಕೆಯಿರುತ್ತದೆ.

ವೇತನ

ಸ್ಟೋರ್ ಕೀಪರ್‌ ಹುದ್ದೆ : ತಿಂಗಳಿಗೆ 19,900 ರಿಂದ 63,200 ರೂ.

ಎಂಜಿನ್ ಡ್ರೈವರ್‌ ಹುದ್ದೆ : ತಿಂಗಳಿಗೆ 25,500 ರಿಂದ 81,100 ರೂ.

ಸಿವಿಲಿಯನ್‌ ಮೋಟಾರ್‌ ಟ್ರಾನ್ಸ್‌ಪೋರ್ಟ್‌ ಡ್ರೈವರ್‌ : ತಿಂಗಳಿಗೆ 19,900 ರಿಂದ 63,200 ರೂ.

ಎಮ್‌ಟಿಎಸ್‌ ಹುದ್ದೆಗೆ : ತಿಂಗಳಿಗೆ 18,00 ದಿಂದ 56,900 ರೂ.

ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು

  • ಗುರುತಿನ ಚೀಟಿ

  • ವಿದ್ಯಾರ್ಹತೆ ಪ್ರಮಾಣಪತ್ರ

  • ಜಾತಿ ಪ್ರಮಾಣಪತ್ರ

  • ಎಕ್ಸ್‌ಪೀರಿಯನ್ಸ್‌ ಸರ್ಟಿಫಿಕೇಟ್‌

  • ಎನ್‌ಒಸಿ ಪ್ರಮಾಣಪತ್ರ

  • 2 ಪಾಸ್‌ಪೋರ್ಟ್‌ ಫೋಟೋ

ಆಯ್ಕೆ ಹೇಗೆ?

ಇಂಡಿಯನ್‌ ಕೋಸ್ಟ್‌ ಗಾರ್ಡ್‌ ನೇಮಕಾತಿ ಪ್ರಕ್ರಿಯೆಯು 4 ಹಂತಗಳಲ್ಲಿ ನಡೆಯಲಿದೆ.

  • ಅರ್ಜಿ ಪರಿಶೀಲನೆ

  • ದಾಖಲೆ ಪರಿಶೀಲನೆ

  • ಬಯೋಮೆಟ್ರಿಕ್‌ ಪರಿಶೀಲನೆ

  • ಲಿಖಿತ ಪರೀಕ್ಷೆ

Topics

ಸಂಬಂಧಿತ ಸುದ್ದಿಗಳು