ಬೈಂದೂರು : ಗ್ಯಾಸ್ ಒಲೆ ವಿಚಾರ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯರು
ಗ್ಯಾಸ್ ಒಲೆಯ ವಿಚಾರಕ್ಕೆ ಇಬ್ಬರು ಮಹಿಳೆಯರು ಪರಸ್ಪರ ಹಲ್ಲೆ ನಡೆಸಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ವಿಚಿತ್ರ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಬೈಂದೂರು : ಗ್ಯಾಸ್ ಒಲೆಯ ವಿಚಾರಕ್ಕೆ ಇಬ್ಬರು ಮಹಿಳೆಯರು ಪರಸ್ಪರ ಹಲ್ಲೆ ನಡೆಸಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ವಿಚಿತ್ರ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಸಾವಿತ್ರಿ ಹಾಗೂ ಸುಜಾತ ಎಂಬವರು ಪ್ರತ್ಯೇಕವಾಗಿ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರ್‌ಎಚ್ ಸಾವಿತ್ರಿ ಅವರು ನೀಡಿದ ದೂರಿನಲ್ಲಿ ಸುಜಾತ ಎಂಬವರಿಂದ ಸಾವಿತ್ರಿ ಅವರು ಒಂದು ದಿನದ ಮಟ್ಟಿಗೆ ಗ್ಯಾಸ್ ಒಲೆಯನ್ನು ಪಡೆದುಕೊಂಡಿದ್ದರು. ಆದರೆ ವಾಪಾಸ್ ಕೊಡಲು ಹೋದ ವೇಳೆಯಲ್ಲಿ ಸುಜಾತ ಅವರು ನನ್ನ ಒಲೆಯನ್ನು ಹಾಳು ಮಾಡಿ ಕೊಟ್ಟಿದ್ದೀಯಾ ಎಂದು ಗಲಾಟೆ ಮಾಡಿದ್ದಾರೆ.
ಸಾವಿತ್ರಿ ಅವರು ನಂತರ ಗ್ಯಾಸ್ ಒಲೆಯನ್ನು ರಿಪೇರಿ ಮಾಡಿಸಿ ವಾಪಾಸ್ ಕೊಂಡೊಯ್ಯುವಾಗ ಆರೋಪಿತೆ ಸುಜಾತ ಈ ಗ್ಯಾಸ್ ಒಲೆ ನನ್ನದಲ್ಲ ಎಂದು ಹೇಳಿ, ಒಲೆಯನ್ನು ವಾಪಾಸ್ ಪಡೆಯಲು ನಿರಾಕರಿಸಿದ್ದಾರೆ.
ಇದೇ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸೆಪ್ಟೆಂಬರ್ 25 ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ಸಾವಿತ್ರಿ ಅವರು ಗ್ರಾಹಕರಿಗೆ ಸ್ಕೂಟಿ ಸವಾರಿ ಕಲಿಸುತ್ತಿದ್ದಾಗ ಅಲ್ಲಿಗೆ ಬಂದ ಸುಜಾತ ನನ್ನ ಗ್ಯಾಸ್ ಒಲೆಯನ್ನು ಈಗಲೇ ತಂದುಕೊಡಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದು, ಕೈಯಿಂದ ಹಾಗೂ ಮೊಬೈಲ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಸುಜಾತ ಕೂಡ ಬೈಂದೂರು ಪೊಲೀಸ್ ಠಾಣೆಗೆ ಸಾವಿತ್ರಿ ವಿರುದ್ದ ದೂರು ನೀಡಿದ್ದಾರೆ. ಬೈಂದೂರು ಗಾಂಧಿ ಮೈದಾನದಲ್ಲಿ ಕಳೆದ ಒಂದು ತಿಂಗಲಿನಿಂದ ಸ್ಕೂಟರ್ ತರಬೇತಿ ನೀಡುತ್ತಿದ್ದು, ಏಕಾಏಕಿ ಸ್ಥಳಕ್ಕೆ ಬಂದ ಸಾವಿತ್ರಿ ಅವರು ತರಬೇತಿ ನೀಡುತ್ತಿದ್ದ ಸ್ಕೂಟರ್‌ಗೆ ಸಾವಿತ್ರಿ ಅವರ ಸ್ಕೂಟರ್ ಅನ್ನು ಅಡ್ಡ ನಿಲ್ಲಿಸಿ, ಸ್ಕೂಟರ್ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ.
ಅಲ್ಲದೇ ಜುಟ್ಟನ್ನು ಬಗ್ಗಿಸಿ, ಕೈಯಿಂದ ಹೊಡೆದು, ಸ್ಕೂಟರ್ ಸಮೇತ ತನ್ನನ್ನು ಬೀಳಿಸಿ ತಲೆಗೆ ಹೊಡೆದಿದ್ದಾರೆ ಎಂದು ಸುಜಾತ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬೈಂದೂರು ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Topics
ಸಂಬಂಧಿತ ಸುದ್ದಿಗಳು
udupi
ಕೋಟೇಶ್ವರ : ಸಹಕಾರಿ ಸಂಘದ ಸಿಇಓ ರಾಘವೇಂದ್ರ ಜೋಗಿ ಆತ್ಮಹತ್ಯೆ
udupi
ಕುಂದಾಪುರ : 9 ತುಂಡುಗಳಾಗಿದ್ದ ಅಲ್ವಿನ್ ಪ್ರಕಾಶ್ ಕುಂದರ್ ಹುಟ್ಟೂರಲ್ಲಿ ಅಂತ್ಯಕ್ರೀಯೆ, ಆರೋಪಿಗಳ ಪತ್ತೆಗೆ ಆಗ್ರಹ
udupi
ಕುಂದಾಪುರಕ್ಕೆ ಬಂದ ಅಲ್ವಿನ್ ಪ್ರಕಾಶ್ ಕುಂದರ್ ಮೃತದೇಹ
udupi

