ಮಹಾಲಯ ಅಮಾವಾಸ್ಯೆ 2026 ಯಾವಾಗ ? ದಿನಾಂಕ, ಸಮಯ ಮತ್ತು ಮಹತ್ವ !

ಪಿತೃ ಪಕ್ಷದ ಅಂತ್ಯವನ್ನು ಸೂಚಿಸುವ ದಿನವನ್ನು ಮಹಾಲಯ ಅಮಾವಾಸ್ಯೆಯೆಂದು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಸಮಯ ಮತ್ತು ಮಹತ್ವ ಇಲ್ಲಿದೆ ಓದಿ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
mahalaya amavasya 2026
Photo: AI

ಪ್ರತಿವರ್ಷ ಆಚರಿಸುವ ಮಹಾಲಯ ಅಮಾವಾಸ್ಯೆಗೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಇದು ಪಿತೃ ಪಕ್ಷದ ಅಂತ್ಯವನ್ನು ಸೂಚಿಸುವ ದಿನ. ಈ ದಿನವನ್ನು ಸರ್ವ ಪಿತೃ ಅಮಾವಾಸ್ಯೆಯೆಂದೂ ಕರೆಯುತ್ತಾರೆ. ಭೂಮಿಯ ಮೇಲಿನ ಜೀವನಯಾತ್ರೆಯನ್ನು ಮುಗಿಸಿ ಇಲ್ಲಿಂದ ತೆರಳಿದ ಪೂರ್ವಜರ ಮೋಕ್ಷಕ್ಕಾಗಿ ಹಾಗೂ ಅವರನ್ನು ನೆನಪಿಸಿಕೊಳ್ಳುವ ಮಹತ್ವದ ದಿನವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಕುಟುಂಬದ ಪೂರ್ವಜರು, ನಿಖರ ಮರಣ ದಿನಾಂಕ ತಿಳಿದಿರದ ಪೂರ್ವಜರು ಹಾಗೂ ಅಕಾಲಿಕ ಮರಣ ಹೊಂದಿದವರಿಗೆ ತರ್ಪಣವನ್ನು ನೀಡಲಾಗುತ್ತದೆ. ಆತ್ಮಗಳ ತೃಪ್ತಿ ಹಾಗೂ ವಿಮೋಚನೆಗಾಗಿ ಈ ದಿನವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಮಹಾಲಯ ಅಮಾವಾಸ್ಯೆ 2026 ಯಾವಾಗ?

ಈ ವರ್ಷ ಮಹಾಲಯ ಅಮಾವಾಸ್ಯೆಯನ್ನು ಅಕ್ಟೋಬರ್‌ 10, ಶನಿವಾರಂದು ಆಚರಿಸಲಾಗುತ್ತಿದೆ. ಅಕ್ಟೋಬರ್‌ 9 ರ ರಾತ್ರಿ 9:35 ಕ್ಕೆ ಪ್ರಾರಂಭವಾಗುವ ಅಮಾವಾಸ್ಯೆ ತಿಥಿಯು ಅಕ್ಟೋಬರ್‌ 10 ರ ರಾತ್ರಿ 9:20 ಕ್ಕೆ ಕೊನೆಗೊಳ್ಳುತ್ತದೆ.

ಮಹಾಲಯ ಅಮಾವಾಸ್ಯೆ ಆಚರಣೆ ಸಮಯ

ಮಹಾಲಯ ಅಮಾವಸ್ಯೆಯಂದು ಪೂರ್ವಜರಿಗೆ ಮಧ್ಯಾಹ್ನದ ಸಮಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಇದಕ್ಕೆ ಸರಿಯಾದ ಸಮಯವೆಂದರೆ

ರೋಹಿಣಿ ಮುಹೂರ್ತ - ಅಕ್ಟೋಬರ್ 10, ಮಧ್ಯಾಹ್ನ 12:31 ರಿಂದ 1:18 ರವರೆಗೆ

ಮಧ್ಯಾಹ್ನದ ಸಮಯ - ಮಧ್ಯಾಹ್ನ 1:18 ರಿಂದ 3:37 ರವರೆಗೆ

ಮಹಾಲಯ ಅಮಾವಾಸ್ಯೆಯ ಮಹತ್ವ

ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ಎರಡು ಮಹತ್ವವಿದೆ. ಮೊದಲನೆಯದು ಪಿತೃ ಪಕ್ಷದ ಅಂತ್ಯವನ್ನು ಸೂಚಿಸಿದರೆ ಎರಡನೇಯದು ದೇವಿ ಶಕ್ತಿಯ ಆಗಮನವನ್ನು ಸೂಚಿಸುತ್ತದೆ. ಪಿತೃ ಪಕ್ಷದ ಈ ಹದಿನೈದು ದಿನಗಳ ಕಾಲ ಪೂರ್ವಜರು ನೆಲೆಸಿರುವಲ್ಲಿ ದ್ವಾರಗಳು ತೆರೆದಿರುತ್ತವೆ ಮತ್ತು ಆ ಆತ್ಮಗಳು ತಮ್ಮ ವಂಶದ ಮುಂದಿನ ಪೀಳಿಗೆಯವರನ್ನು ಆಶೀರ್ವದಿಸುತ್ತವೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ತರ್ಪಣ, ಶ್ರಾದ್ಧಗಳನ್ನು ಮಾಡಿ ಪೂರ್ವಜರಿಗೆ ಗೌರವ ಸಲ್ಲಿಸಲಾಗುತ್ತದೆ. ಇದೇ ಸಮಯದಲ್ಲಿ ದುರ್ಗಾದೇವಿಯು ಕೈಲಾಸದಿಂದ ಭೂಮಿಗೆ ಪ್ರಯಾಣವನ್ನು ಆರಂಭಿಸುತ್ತಾಳೆ. ನಂತರದ ಒಂಬತ್ತು ದಿನಗಳಕಾಲ ಇಲ್ಲಿಯೇ ಇದ್ದು, ತನ್ನ ಭಕ್ತರು ಆಚರಿಸುವ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತರನ್ನು ಹರಸುತ್ತಾಳೆ.

Topics

ಸಂಬಂಧಿತ ಸುದ್ದಿಗಳು